ರಾಹುಲ್ ಗಾಂಧಿ ಮೇಲಿನ ಮತಗಳ್ಳತನ ಆರೋಪಕ್ಕೆ ನಟಿ ರಮ್ಯಾ ಬೆಂಬಲ ವ್ಯಕ್ತಪಡಿಸಿದ್ದಾರೆ. ಚುನಾವಣಾ ಆಯೋಗದ ನಿಲುವನ್ನು ಪ್ರಶ್ನಿಸಿದ್ದು, ಸಾಕ್ಷ್ಯಗಳ ಹೊರತಾಗಿಯೂ ಕ್ರಮ ಕೈಗೊಳ್ಳದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಬ್ಬಾಳ ಫ್ಲೈಓವರ್ ಸಮಸ್ಯೆ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು (ಆ.18): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮತಗಳ್ಳತನ ಆರೋಪಕ್ಕೆ ನಟಿ ರಮ್ಯಾ ತಮ್ಮ ಬೆಂಬಲ ಸೂಚಿಸಿದ್ದಾರೆ. ರಾಹುಲ್ ಗಾಂಧಿ ಚುನಾವಣೆಯಲ್ಲಿ ಮತದಾರರ ಐಡಿಯಲ್ಲಿ ಫೇಕ್ ಫೋಟೋಗಳಿರುವ ಬಗ್ಗೆ ಸಾಕ್ಷ್ಯ ಸಮೇತ ದಾಖಲೆಗಳನ್ನು ಒದಗಿಸಿದ್ದಾರೆ. ಚುನಾವಣಾ ಆಯೋಗವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದೇ, ಇತರ ವಿಷಯಗಳತ್ತ ಗಮನ ಹರಿಸಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ವೋಟರ್ ಐಡಿಯಲ್ಲಿ ಫೇಕ್ ಫೋಟೋಗಳು ಹೇಗೆ ಬಂದವು? ಮತದಾರರ ಮಾಹಿತಿ ರಿವಿಲ್ ಮಾಡೋದು ಸರಿಯಲ್ಲ ಅಂತಿದೆ. ಆದ್ರೆ ಇಲ್ಲಿಯವರೆಗೆ ಆಗಿದ್ದಾದ್ರೂ ಏನು? ಈ ಬಗ್ಗೆ ರಾಹುಲ್ ಗಾಂಧಿ ಸಾಕ್ಷ್ಯ ಸಮೇತ ತೋರಿಸಿದ್ದು ತಪ್ಪಾ? ಎಂದು ಪ್ರಶ್ನಿಸಿದರು. ಸಾಕ್ಶ್ಯ ಸಮೇತ ತೋರಿಸಿದರೂ, ಇದು ಮುಂದೆ ಆಗದಂತೆ ಏನು ಕ್ರಮ ಕೈಗೊಳ್ಳಬೇಕು ಎಂದು ಆಯೋಗ ಸ್ಪಷ್ಟವಾಗಿ ಹೇಳಿಲ್ಲ. ಅದರ ಬದಲು ರಾಹುಲ್ ಗಾಂಧಿ ವಿರುದ್ಧವೇ ಆರೋಪಗಳನ್ನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರು.
ಇದನ್ನೂ ಓದಿ: 'ಮೂವರು ಅರೆಸ್ಟ್ ಬಳಿಕ ಕೆಟ್ಟ ಕಮೆಂಟ್ ನಿಂತಿವೆ' ದರ್ಶನ್ ಫ್ಯಾನ್ಸ್‌ಗೆ ಬಿಸಿ ಮುಟ್ಟಿಸಿದ ನಟಿ ರಮ್ಯಾ
ಇದೇ ವೇಳೆ, ಹೆಬ್ಬಾಳ ಫ್ಲೈಓವರ್‌ನ ಟ್ರಾಫಿಕ್ ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ರಮ್ಯಾ, ಹೆಬ್ಬಾಳ್ ಫ್ಲೈಓವರ್ ಅಂದ್ರೇನೆ ತುಂಬಾ ಸಮಯ ಆಗುತ್ತೆ ಅಂತಾರೆ. ಆದರೆ ಅದೇನೂ ಆಗಲ್ಲ. ಟ್ರಾಫಿಕ್ ಸಮಸ್ಯೆ ಕಡಿಮೆ ಆಗುತ್ತೆ ಅಂತ ಅಂದ್ಕೊಂಡಿದ್ದೇನೆ ಎಂದರು.
