ಉಚಿತ ಚಿಕಿತ್ಸೆ ತಗೋತ್ತಿದ್ದೇನೆ ಎಂದು ಜಯದೇವ ಆಸ್ಪತ್ರೆಗೆ 2 ಲಕ್ಷ ರೂ ದೇಣಿಗೆ ನೀಡಿದ್ದ ಎಸ್ಎಲ್ ಭೈರಪ್ಪ, ಈ ಕುರಿತು ಮಾಜಿ ನಿರ್ದೇಶಕ, ಸಂಸದ ಸಿಎನ್ ಮಂಜುನಾಥ್ ಹೇಳಿದ್ದಾರೆ. ಜಯದೇವ ಆಸ್ಪತ್ರೆಯಲ್ಲಿ ಭೈರಪ್ಪ ಜೊತೆಗಿನ ಮಾತುಕತೆ ವಿವರ ಬಹಿರಂಗಪಡಿಸಿದ್ದಾರೆ

ಬೆಂಗಳೂರು (ಸೆ.25) ಸಾಹಿತ್ಯ ಕ್ಷೇತ್ರದ ದಿಗ್ಗದ ಎಸ್ಎಲ್ ಭರಪ್ಪ ನಿಧನರಾಗಿದ್ದಾರೆ. ಸಾಹಿಥ್ ಕ್ಷೇತ್ರದ ಭೀಷ್ಮ ಎಂದೇ ಗುರುತಿಸಿಕೊಂಡಿದ್ದ ಅಕ್ಷರ ಮಾಂತ್ರಿಕನ ಅಗಲಿಕೆಗೆ ಗಣ್ಯರು ಕಂಬನಿ ಮಿಡಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ದಿಗ್ಗಜರು ಸಂತಾಪ ಸೂಚಿಸಿದ್ದಾರೆ. ಭೈರಪ್ಪ ನಿಧನಕ್ಕೆ ಸಂತಾಪ ಸೂಚಿಸಿದ ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿಎನ್ ಮಂಜುನಾಥ್, ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗಂವತ ನೀಡಲಿ ಎಂದಿದ್ದಾರೆ. ಇದೇ ವೇಳೆ ಭೈರಪ್ಪ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಿನಗಳನ್ನು ನೆನೆದಿದ್ದಾರೆ.

ಫ್ರೀ ಚಿಕಿತ್ಸೆ ತಗೋತ್ತಿದ್ದೀನಿ, 2 ಲಕ್ಷ ರೂಪಾಯಿ ದೇಣಿ ನೀಡಿದ್ದ ಭೈರಪ್ಪ

ಎಸ್ಎಲ್ ಭೈರಪ್ಪಗೆ ಕಳೆದ ಎರಡು ವರ್ಷದಿಂದ ಹೃದಯ ಆರೋಗ್ಯ ಸಮಸ್ಯೆ ಇತ್ತು. ಜಯದೇವದಲ್ಲಿ ಸೇವೆ ಸಲ್ಲಿಸುತ್ತಿರುವ ವೇಳೆ ಎಸ್ ಎಲ್ ಭೈರಪ್ಪ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದರು. ಹಾರ್ಟ್ ಸಮಸ್ಯೆ ಕಾರಣ ಎಸ್ ಎಲ್ ಭೈರಪ್ಪ ಪೇಸ್‌ ಮೇಕರ್ ಹಾಕಿಕೊಂಡಿದ್ದರು. ಹೃದಯ ಚಿಕಿತ್ಸೆಗೆ ಆಗಮಿಸಿದ ಭೈರಪ್ಪ ಅವರು ಒಂದು ಬಾರಿ ಪ್ರತಿ ಬಾರಿ ನಾನು ಉಚಿತ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು, 2 ಲಕ್ಷ ರೂಪಾಯಿ ಚೆಕ್ ಜಯದೇವ ಆಸ್ಪತ್ರೆಗೆ ದೇಣಿಕೆಯಾಗಿ ನೀಡಿದ್ದರು ಎಂದು ಮಂಜುನಾಥ್ ಹೇಳಿದ್ದಾರೆ.

ನಾವಿಬ್ಬರು ಚೆನ್ನರಾಯಪಟ್ಟಣದಿಂದ ಬಂದವರು

ಎಸ್ ಎಲ್ ಭೈರಪ್ಪ ಅವರಿಗೆ ಕಳೆದ ಒಂದೂವರೆ ವರ್ಷದಿಂದ ಅನಾರೋಗ್ಯವಿತ್ತು. ಇದಕ್ಕೆ ಭೈರಪ್ಪ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಭೈರಪ್ಪ ಅವರ ಧೈರ್ಯ, ಆತ್ಮವಿಶ್ವಾಸ ಮುಂದೆ ಅವರ ವಯಸ್ಸು, ಆರೋಗ್ಯ ಸಮಸ್ಯೆಗಳು ಚಿಕ್ಕದಾಗುತ್ತಿತ್ತು ಎಂದು ಮಂಜುನಾಥ್ ಹೇಳಿದ್ದಾರೆ. ಎಸ್ ಎಲ್ ಭೈರಪ್ಪ ಹಾಗೂ ನಾನು ಇಬ್ಬರೂ ಚೆನ್ನರಾಯಪಟ್ಟಣದಿಂದ ಬಂದವರು. ಕಳೆದ ಹಲವು ವರ್ಷಗಳಿಂದ ಅವರ ಜೊತೆ ಅವಿನಾಭಾವ ಸಂಬಂಧ ಇತ್ತು ಎಂದು ಮಂಜುನಾಥ್ ಹೇಳಿದ್ದಾರೆ. ಸಂತೇಶ್ವರದಲ್ಲಿ ಭೈರಪ್ಪ ಅವರಿಗೆ ಸನ್ಮಾನ ಕಾರ್ಯಕ್ರಮ ಮಾಡಿದ್ದೆವು ಎಂದು ಮಂಜುನಾಥ್ ಹೇಳಿದ್ದಾರೆ.

ಇಂದು ರಾತ್ರಿ ಬೆಂಗಳೂರಿನಲ್ಲಿ ಪಾರ್ಥೀವ ಶರೀರ

ಎಸ್ ಎಲ್ ಭೈರಪ್ಪ ಪಾರ್ಥೀವ ಶರೀರ ಇಂದು ರಾತ್ರಿ ಆಸ್ಪತ್ರೆಯಲ್ಲೇ ಇರಿಸಲು ನಿರ್ಧರಿಸಲಾಗಿದೆ. ನಾಳೆ ಬೆಳಗ್ಗೆ 8 ಗಂಟೆಗೆ ರವೀಂದ್ರ ಕಲಾಕ್ಷೇತ್ರಕ್ಕೆ ಪಾರ್ಥೀವ ಶರೀರ ಕೊಂಡೊಯ್ಯಲಾಗುತ್ತದೆ. ಬಳಿಕ ಮಧ್ಯಾಹ್ನ 2 ಗಂಟೆ ವರೆಗೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಮಧ್ಯಾಹ್ನ 3 ಗಂಟೆಗೆ ಪಾರ್ಥೀವ ಶರೀರ ಮೈಸೂರಿಗೆ ಕೊಂಡೊಯ್ಯಲು ನಿರ್ಧರಿಸಲಾಗಿದೆ. ನಾಳೆ ಸಂಜೆ 5 ಗಂಟೆಯಿಂದ ಮೈಸೂರಿನ ಕಲಾಮಂದಿರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಶುಕ್ರವಾರ ಬೆಳಗ್ಗೆ 10.30ಕ್ಕೆ ಅಂತಮ ವಿಧಿ ವಿಧಾನದ ಬಳಿಕ ಅಂತ್ಯಕರಿಯೆ ನಡೆಸಲು ನಿರ್ಧರಿಸಲಾಗಿದೆ. ಭೈರಪ್ಪ ಹಿರಿಯ ಮಗ ನಾಳೆ ಬೆಳಗ್ಗೆ 10 ಗಂಟೆಗೆ ಲಂಡನ್‌ನಿಂದ ಮೈಸೂರಿಗೆ ಆಗಮಿಸಲಿದ್ದಾರೆ.