ಮೋದಿ ಹೆಸರು ಕೇಳಿದರೆ ಕೆಲವರ ಪೈಜಾಮ ಒದ್ದೆಯಾಗುತ್ತದೆ. ಬೆಂಗಳೂರಿನ ಶಿವಾಜಿನಗರದಲ್ಲಿ ಹಿಂದೂಗಳಿಗೆ ಅವಕಾಶವಿಲ್ಲ, ನೀವೆಲ್ಲರೂ ಶಿವಾಜಿ ಮಹಾರಾಜರಾಗಿ ಎಂದು ಬಿಜೆಪಿ ಸಂಸದೆ ಹಾಗೂ ಹಿಂದೂ ಧರ್ಮದ ಪ್ರಬಲ ವಕ್ತಾರೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದರು. ಮಹಾಗಣಪತಿ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು.
ಬೆಂಗಳೂರು (ಸೆ.14): ನಮ್ಮ ದೇಶದಲ್ಲಿ ನಾವು ಹೇಳಿದಂತೆ ರಾಮ ಮಂದಿರವನ್ನು ನಿರ್ಮಿಸಿದ್ದೇವೆ. ಇನ್ನುಮುಂದೆ ಶ್ರೀ ಕೃಷ್ಣ ಮಂದಿರ ನಿರ್ಮಾಣ ಮಾಡಬೇಕಿದೆ. ಹೀಗಾಗಿ, ಮೋದಿ ಹೆಸರು ಕೇಳಿದರೆ ಕೆಲವರ ಪೈಜಾಮ ಒದ್ದೆಯಾಗುತ್ತದೆ. ಬೆಂಗಳೂರಿನ ಶಿವಾಜಿನಗರದಲ್ಲಿ ಹಿಂದೂಗಳಿಗೆ ಅವಕಾಶವಿಲ್ಲ, ನೀವೆಲ್ಲರೂ ಶಿವಾಜಿ ಮಹಾರಾಜರಾಗಿ ಎಂದು ಬಿಜೆಪಿ ಸಂಸದೆ ಹಾಗೂ ಹಿಂದೂ ಧರ್ಮದ ಪ್ರಬಲ ವಕ್ತಾರೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದರು.
ಬೆಂಗಳೂರಿನಲ್ಲಿ ಬೃಹತ್ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ರಾಮ ಮಂದಿರ ನಿರ್ಮಾಣ ಮಾಡಿದ್ದೇವೆ. ಮುಂದೆ ಕೃಷ್ಣನ ಮಂದಿರ ನಿರ್ಮಾಣ ಮಾಡಬೇಕಿದೆ. ಇದು ಕಾಂಗ್ರೆಸ್ ಸರ್ಕಾರದಲ್ಲಿ ಆತಂಕ ಹುಟ್ಕೊಂಡಿದೆ. ಹೀಗಾಗಿ, ನನಗೆ ಸ್ವಲ್ಪ ಮೃದ್ಧುವಾಗಿ ಮಾತನಾಡಲು ಹೇಳಿದ್ದಾರೆ. ನಾವು ಯಾರನ್ನು ಕೊಲೆ ಮಾಡಲ್ಲ, ಆದರೆ ನಮ್ಮನ್ನು ಕೊಲ್ಲಲು ಬಂದವರನ್ನ ಬಿಡಲ್ಲ. ಇಲ್ಲಿನ ಹಿಂದೂಗಳು ಹುಲಿಯಾಗಿರಿ. ಸನಾತನಿಗಳನ್ನ ಯಾರು ಹೆದರಿಸಲು ಆಗಲ್ಲ. ನಾವು ಇಲ್ಲಿಗೆ ಬಂದಿದ್ದೇವೆ ಎಂದರೆ ಕಾಂಗ್ರೆಸ್ಸಿಗರಿಗೆ ನಡುಕ ಶುರು ವಾಗಿದೆ ಎಂದು ಹೇಳಿದರು.
ನಾನು ಒಮ್ಮೆ ಮಂಗಳೂರಿಗೆ ಹೋಗಿದ್ದಾಗ ಹೇಳಿದ್ದೆ. ನಿಮ್ಮ ರಕ್ಷಣೆಗಾಗಿ ಕತ್ತಿ ಇಟ್ಟುಕೊಳ್ಳಿ ಅವಶ್ಯಕತೆ ಬಿದ್ದಾಗ ಶಿರಚ್ಛೇದ ಮಾಡಿ ಎಂದಿದ್ದೆ. ನಾವು ಭಾರತವನ್ನ ತಾಯಿ ಎನ್ನುತ್ತೇವೆ. ಆದರೆ, ಇಟಲಿಯ ತಾಯಿ ಅವನ ಮಗನಿಗೆ ಸರಿಯಾಗಿ ಪಾಠ ಮಾಡಿಲ್ಲ. ತಾಯಿಯನ್ನು ಗೌರವಿಸೋದನ್ನ ಇಟಲಿಯ ತಾಯಿ ಮಗನಿಗೆ ಹೇಳಿಕೊಟ್ಟಿಲ್ಲ. ನೀವು ತಪ್ಪು ಮಾಡಿದ್ದೀರಾ, ತಪ್ಪು ಸರ್ಕಾರವನ್ನ ಆಯ್ಕೆ ಮಾಡಿದ್ದೀರಾ. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಹಿಂದೂ ಸರ್ಕಾರ ಅಲ್ಲ. ಇಲ್ಲಿನ ಶಿವಾಜಿನಗರದಲ್ಲಿ ಹಿಂದೂಗಳನ್ನ ಪ್ರವೇಶ ಮಾಡಲು ಬಿಡುತ್ತಿಲ್ಲ. ಹೀಗಾಗಿ, ನೀವೆಲ್ಲ ಶಿವಾಜಿ ಮಹಾರಾಜರಾಗಬೇಕು ಎಂದು ಕರೆ ನೀಡಿದರು.
ಹಿಂದೂ ಸರ್ಕಾರ ಅಧಿಕಾರಕ್ಕೆ ತನ್ನಿ:
ನೀವೆಲ್ಲರೂ ಒಂದಾಗಿ, ಮುಂಬರುವ ದಿನಗಳಲ್ಲಿ ಹಿಂದೂ ಸರ್ಕಾರ ತನ್ನಿ. ನನ್ನನ್ನು ಕಾಂಗ್ರೆಸ್‌ನವರು ಎನ್ ಕೌಂಟರ್ ಮಾಡಲು ಪ್ರಯತ್ನ ಪಟ್ಟರು. ಜೈಲಿನಲ್ಲಿ ಸಾಕಷ್ಟು ಹಿಂಸೆ ಕೊಟ್ಟರು. ಆದರೆ ಅವರಿಂದ ಆಗಲಿಲ್ಲ, ಏಕೆಂದರೆ ನನ್ನನ್ನು ಶ್ರೀರಾಮ ಕಾಪಾಡುತ್ತಿದ್ದ. ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕರ್ನಾಟಕದಿಂದ ಲಕ್ಷಾಂತರ ಮಂದಿ ಹೋಗಿದ್ದರು. ಕಾಂಗ್ರೆಸ್ ಸರ್ಕಾರ ರಾಮನೇ ಇಲ್ಲ ಎಂದಿದ್ದರು. ಯುವಕರೇ ನಿಮ್ಮ ಸಂಖ್ಯೆ ಹೆಚ್ಚಿಸಿ. ಹೆಚ್ಚು ಹೆಚ್ಚು ಮಕ್ಕಳು ಮಾಡಿಕೊಳ್ಳಿ. ಹಿಂದೂಗಳು ಹೆಚ್ಚು ಮಕ್ಕಳಿಗೆ ಜನ್ಮ ನೀಡಬೇಕು ಎಂದು ಹೇಳಿದರು.
ಮುಸ್ಲಿಮರು ದೇಶ ಭಕ್ತರಾ..? ಇಲ್ಲಿ ತಿಂದು, ಇಲ್ಲಿನ ನೀರು ಕುಡಿದು ಬೇರೆ ದೇಶದ ಪರ ನಿಲ್ಲುವ ಮುಸ್ಲಿಮರು ಭಾರತೀಯರೇ..? ನಮ್ಮ ಯಾತ್ರೆ ನಡೆದರೆ ಸಾಕಷ್ಟು ನಿರ್ಬಂಧ ಹಾಕುತ್ತಾರೆ. ಸೌಂಡ್ ಹಾಕುವ ಹಾಗಿಲ್ಲ, ಡಿಜೆ ಹಾಕುವ ಹಾಗಿಲ್ಲ ಎಂದು ನಿರ್ಬಂಧ ಹಾಕ್ತಾರೆ. ನಮ್ಮ ಯಾತ್ರೆ ಮೇಲೆ ಕಲ್ಲು ಎಸೆಯುವ ಕೆಲಸ ಮಾಡ್ತಾರೆ. ಕಲ್ಲು ಎಸೆಯುವವರಿಗೆ ಕಲ್ಲಿನಿಂದಲೇ ಉತ್ತರ ನೀಡಬೇಕು. ನಮ್ಮ ಚಿಕ್ಕಚಿಕ್ಕ ಹೆಣ್ಣು ಮಕ್ಕಳನ್ನ ಕರೆದೊಯ್ದು ಲವ್ ಜಿಹಾದ್ ಮಾಡುತ್ತಿದ್ದಾರೆ. ಅವರನ್ನು ಕೊಂದು ಹಾಕುತ್ತಿದ್ದಾರೆ. ಇದನ್ನು ತಡೆಯಲು ಸಿದ್ದರಾಮಯ್ಯ ಸರ್ಕಾರ ಕಿತ್ತು ಎಸೆದು ಹಾಕಿ ಎಂದರು.
ಮೋದಿ ಹೆಸರು ಕೇಳಿದರೆ ಪೈಜಾಮ ಒದ್ದೆ:
ಜಮ್ಮು ಕಾಶ್ಮೀರದ ಪೆಹಲ್ಗಾಂನಲ್ಲಿ ಹಿಂದೂಗಳ ಮೇಲೆ ಗುಂಡು ಹಾರಿಸಿದರು. ಮುಸ್ಲಿಂ ಅನ್ನೋದಕ್ಕೆ ಸಾಕ್ಷಿ ಕೇಳಿ ಕೊಂದು ಹಾಕಿದ್ದರು. ಈಗಾಗಲೇ ಈ ಬಗ್ಗೆ ಸಾಕ್ಷಿ ಕೇಳಿದವರಿಗೆ ಆಪರೇಷನ್ ಸಿಂಧೂರ ಮುಖಾಂತರ ಉತ್ತರ ನೀಡಲಾಗಿದೆ ಎಂದರು. ಈ ವೇಳೆ ಶೋಭಾಯಾತ್ರೆ ಕಾರ್ಯಕ್ರಮದಲ್ಲಿದ್ದ ಜನರು ಮೋದಿ..., ಮೋದಿ... ಎಂದು ಘೋಷಣೆ ಕೂಗಿದರು. ಆಗ ನೀವೆಲ್ಲರೂ ಮೋದಿ ಹೆಸರು ಹೇಳಿದರೆ, ಅದನ್ನು ಕೇಳುವ ಇಲ್ಲಿನ ಕೆಲವರ ಪೈಜಾಮ್ ಒದ್ದೆಯಾಗುತ್ತದೆ ಎಂದು ಹೇಳಿದರು.
