ಗಣೇಶ ವಿಸರ್ಜನೆ ದುರಂತ ಘಟನಾ ಸ್ಥಳಕ್ಕೆ ದೇವೇಗೌಡರ ಭೇಟಿ, ಪೊಲೀಸರಿಗೆ ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ. ಹಾಸನದ ಮೊಸಳೇ ಹೊಸಳ್ಳಿಯಲ್ಲಿ ನಡುದೆ ಈ ದುರಂತದಲ್ಲಿ 9 ಮಂದಿ ಮೃತಪಟ್ಟಿದ್ದಾರೆ.
ಹಾಸನ (ಸೆ.14) ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಕ್ಯಾಂಟರ್ ಹರಿದು 9 ಮಂದಿ ಮೃತಪಟ್ಟು 17ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಹಾಸನದ ಮೊಸಳೆ ಹೊಸಳ್ಳಿ ನಡೆದ ಈ ದುರಂತದಲ್ಲಿ ಎಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಮೇಲೆ ಕ್ಯಾಂಟರ್ ಹರಿದಿತ್ತು. ಇದೀಗ ಈ ಘಟನಾ ಸ್ಥಳಕ್ಕೆ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಭೇಟಿ ನೀಡಿದ್ದಾರೆ. ಉಪ ರಾಷ್ಟ್ರಪತಿ ಚುನಾವಣೆ ಹಿನ್ನಲೆಯಲ್ಲಿ ಇತ್ತೀಚೆಗಷ್ಟೇ ದೆಹಲಿಗೆ ತೆರಳಿದ್ದ ದೇವೇಗೌಡ ಇದೀಗ ಮೊಸಳೆ ಹೊಸಳ್ಳಿಗೆ ಭೇಟಿ ನೀಡಿದ್ದಾರೆ. ಸ್ಥಳದಲ್ಲಿ ಪೊಲೀಸರಿಂದ ಹಲವು ಮಾಹಿತಿ ಪಡೆದಿದ್ದಾರೆ.
ಘಟನಾ ಸ್ಥಳದಲ್ಲಿ ಪೊಲೀಸರಿಗೆ ಸಾಲು ಸಾಲು ಪ್ರಶ್ನೆ
92ರ ಹರೆಯದ ದೇವೇಗೌಡರು ವ್ಹೀಲ್‌ಚೇರ್ ಮೂಲಕವೇ ಓಡಾಡುತ್ತಿದ್ದಾರೆ. ದೆಹಲಿಯಿಂದ ಬೆಂಗಳಳೂರಿಗೆ ಮರಳಿದ್ದ ಹೆಚ್‌ಡಿ ದೇವೇಗೌಡ ಇದೀಗ ಹಾಸನದ ಮೊಸಳೆ ಹೊಸಳ್ಳಿಗೆ ಭೇಟಿ ನೀಡಿದ್ದಾರೆ. ಸ್ಥಳದಲ್ಲಿ ಪೊಲೀಸರಿಗೆ ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ. ವಿದ್ಯಾರ್ಥಿಗಳ ಮೇಲೆ ಹರಿದ ವಾಹನವನ್ನು ಸೀಜ್ ಮಾಡಿದ್ದೀರಾ? ಡ್ರೈವರ್ ಎಲ್ಲಿದ್ದಾನೆ, ಮೆರಣಿಗೆ ವೇಳೆ ಎಷ್ಟು ಪೊಲೀಸರು ಸ್ಥಳದಲ್ಲಿದ್ದರು ಸೇರಿದಂತೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಹಾಸನ ದುರಂತಕ್ಕೆ ಮೋದಿ ಸಂತಾಪ, ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಘೋಷಣೆ
ರಸ್ತೆ ಮೇಲೆ ನಿಂತು ಸ್ಥಳ ವೀಕ್ಷಣೆ ಮಾಡಿ ದೇವೇಗೌಡರು
ಮೊಸಳೆ ಹೊಸಳ್ಳಿಯಲ್ಲಿ ಘಟನಾ ಸ್ಥಳಕ್ಕೆ ಆಗಮಿಸಿದ ದೇವೇಗೌಡರು, ಕಾರಿನಿಂದ ಇಳಿದು ರಸ್ತೆ ಮೇಲೆ ನಿಂತು ಘಟನಾ ಸ್ಥಳ ವೀಕ್ಷಣೆ ಮಾಡಿದ್ದಾರೆ. ಡಿವೈಡರ್ ಹತ್ತಿ ವಿದ್ಯಾರ್ಥಿಗಳ ಮೇಲೆ ಹರಿದ ಘಟನೆಯ ಬಳಿ ದೇವೇಗೌಡರು ಪ್ರಕರಣದ ಮಾಹಿತಿ ಪಡೆದಿದ್ದಾರೆ. ಡಿವೈಡರ್ ಬಳಿ ನಿಂತು ದುರ್ಗಟನೆಯ ವಿವರ ಕೇಳಿದ್ದಾರೆ.
ಎಂಜಿನೀಯರಿಂಗ್ ಕಾಲೇಜಿಗೆ ಭೇಟಿ ನೀಡಿದ ಮಾಜಿ ಪ್ರಧಾನಿ
ಮೊಸಳೆ ಹೊಸಳ್ಳಿಯ ಘಟನಾ ಸ್ಥಳಕ್ಕೆ ಭೇಟಿ ನೀಡಿದ ದೇವೇಗೌಡರು ಬಳಿಕ ಈ ಘಟನೆಯಲ್ಲಿ ಮೃತಪಟ್ಟ ಎಂಜಿನರಿಂಗ್ ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದ ಕಾಲೇಜಿಗೆ ಭೇಟಿ ನೀಡಿದ್ದಾರೆ. ಮೊಸಲೆ ಹೊಸಳ್ಳಿಯ ಎಂಜಿನೀಯರಿಂಗ್ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆಪ್ತರು, ಗೆಳೆಯರನ್ನು ಮಾತನಾಡಿದ್ದಾರೆ.
ಚಾಲಕನ ಮದ್ಯಪಾನ ದುರಂತಕ್ಕೆ ಕಾರಣವಾಯಿತಾ? ಗಣೇಶ ವಿಸರ್ಜನೆಯಲ್ಲಿ 9 ವಿದ್ಯಾರ್ಥಿಗಳ ಬಲಿ
ಮೊಸಳೆ ಹೊಸಹಳ್ಳಿ ದುರಂತ
ಕರ್ನಾಟಕದಲ್ಲಿ ನಡೆದ ಭೀಕರ ಘಟನೆಗಳಲ್ಲಿ ಮೊಸಳೆ ಹೊಸಳ್ಳಿ ಕೂಡ ಒಂದು. ಕಳೆದ 50 ವರ್ಷಗಳಿಂದ ಮೊಸಳೆ ಹೊಸಳ್ಳಿಯಲ್ಲಿ ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಬಾರಿ ಅದ್ದೂರಿ ಗಣೇಶೋತ್ಸವ ಆಯೋಜಿಸಲಾಗಿತ್ತು. ಗಣೇಶನ ಕೂರಿಸಿ ಪೂಜೆ ಮಾಡಲಾಗಿತ್ತು. ಪ್ರತಿ ದಿನ ಗ್ರಾಮಸ್ಥರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಸೆಪ್ಟೆಂಬರ್ 12ರಂದು ಮೊಸಳೆ ಹೊಸಳ್ಳಿಯ ಗಣೇಶ ವಿಸರ್ಜನೆಗೆ ಎಲ್ಲಾ ತಯಾರಿ ಮಾಡಿಕೊಳ್ಳಲಾಗಿತ್ತು. ಭಾರಿ ಸಂಖ್ತೆಯಲ್ಲಿ ಭಕ್ತರು ಸೇರಿದ್ದರು. ಅದ್ಧೂರಿಯಾಗಿ ಮೆರವಣಿಗೆ ಸಾಗಿತ್ತು. ಇನ್ನೇನು 10 ರಿಂದ 20 ನಿಮಿಷದಲ್ಲಿ ವಿಸರ್ಜನೆ ಮೆರವಣಿಗೆ ಅಂತ್ಯಗೊಳ್ಳುತ್ತಿತ್ತು. ಇದೇ ವೇಳೆ ಅತೀ ವೇಗವಾಗಿ ಸಾಗಿ ಬಂದ ಟ್ರಕ್, ಆರಂಭದಲ್ಲಿ ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಬಳಿಕ ಡಿವೈಡರ್ ದಾಟಿ ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಹರಿದಿತ್ತು.
ಎಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳು ಜೊತೆಯಾಗಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈ ಕ್ಯಾಂಟರ್ ನೇರವಾಗಿ ವಿದ್ಯಾರ್ಥಿಗಳ ಮೇಲೆ ಹರಿದಿತ್ತು. ಘಟನೆಯಲ್ಲಿ 9 ವಿದ್ಯಾರ್ಥಿಗಳು ಮೃತಪಟ್ಟಿದ್ದರೆ, 17ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
