ನಟ ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲಾ ಆರೋಪಿಗಳು ನ.3ಕ್ಕೆ ಕೋರ್ಟ್‌ಗೆ ಹಾಜರಾಗಲು ಸೂಚನೆ ನೀಡಲಾಗಿದೆ. ಜಾಮೀನು ಪಡೆದಿರುವ ಆರೋಪಿಗಳು ಹಾಜರಾಗಬೇಕು, ಹಾಜರಾಗದಿದ್ದರೆ ಅರೆಸ್ಟ್ ಎಂದು ಕೋರ್ಟ್ ಎಚ್ಚರಿಸಿದೆ.
ಬೆಂಗಳೂರು (ಅ.31) ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಇಂದು ಸೆಷನ್ಸ್ ಕೋರ್ಟ್‌ನಲ್ಲಿ ವಿಚಾರಣೆ ನಡೆದಿದೆ. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ನವೆಂಬರ್ 3ರಂದು ಎಲ್ಲಾ ಆರೋಪಿಗಳು ಖುದ್ದು ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸಿದೆ. ಜೈಲಿನಲ್ಲಿರುವ ಆರೋಪಿಗಳು ಹಾಗೂ ಜಾಮೀನು ಮೇಲಿರುವ ಆರೋಪಿಗಳು ಖುದ್ದು ಹಾಜರಾಗಬೇಕು. ಗೈರಾದರೆ ಇದ್ದಲ್ಲೇ ಬಂದು ಪೊಲೀಸರು ಅರೆಸ್ಟ್ ಮಾಡುತ್ತಾರೆ ಎಂದು ಕೋರ್ಟ್ ಎಚ್ಚರಿಸಿದೆ. ಇದರೊಂದಿಗೆ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಿಗಳ ಸಂಕಷ್ಟ ಹೆಚ್ಚಾಗಿದೆ. ನ.3ಕ್ಕೆ ಆರೋಪಿಗಳ ವಿರುದ್ಧ ಕೋರ್ಟ್ ಆರೋಪ ನಿಗದಿ ಪಡಿಸಲಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಚಾರ್ಜ್ ಫ್ರೇಮ್ ಮಾಡದಂತಡ ದರ್ಶನ್ ಪರ ವಕೀಲ ಮನವಿ
ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆದಿದೆ. ಆರಂಭದಲ್ಲಿ ನಾನು ಮಾತಾಡೋದು ಕ್ಲಿಯರ್ ಆಗಿ ಕೇಳ್ತಾ ಇದಿಯಾ? ಎಂದು ಜಡ್ಜ್ ಪ್ರಶ್ನಿಸಿದ್ದಾರೆ. ನಿಮಗೆ ಕೇಳ್ತಾ ಇಲ್ಲ ಅಂದರೆ ಹೇಳಿ ಚಾರ್ಜ್ ಫ್ರೇಮ್ ಮಾಡಬೇಕು. ನಿಮಗೆ ಕೇಳಲಿಲ್ಲ ಅಂದ್ರೆ ಫಿಸಿಕಲ್ ಪ್ರೆಸೆನ್ಸ್ ಗೆ ಹೇಳಬೇಕಾಗುತ್ತೆ ಎಂದಿದ್ದಾರೆ. ಪ್ರತಿ ಆರೋಪಿಗಳ ಹೆಸರು ಕೂಗಿ ಹಾಜರು ಖಚಿತಪಡಿಸಿದ್ದರೆ. ಈ ವೇಳೆ ಆರೋಪಿ ನಂಬರ್ 16 ಹಾಗೂ ಆರೋಪಿ ನಂಬರ್ 17 ಗೈರಾಗಿದ್ದರು. ಚಾರ್ಜ್ ಫ್ರೇಮ್ ಮಾಡುವ ಕುರಿತು ಜಡ್ಜ್ ಹೇಳುತ್ತಿದ್ದಂತೆ ಇವತ್ತು ಮಾಡದಂತೆ ದರ್ಶನ್ ಪರ ವಕೀಲ ಸುನಿಲ್ ಮನವಿ ಮಾಡಿದ್ದಾರೆ. ಚಾರ್ಜ್ ಫ್ರೇಮ್ ಮಾಡಬೇಕಾದರೆ ಆರೋಪಿಗಳ ಖುದ್ದು ಹಾಜರಿ ಕಡ್ಡಾಯವಾಗಿದೆ. ಹೀಗಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾರ್ಜ್ ಫ್ರೇಮ್ ಮಾಡದಂತಡ ದರ್ಶನ್ ಪರ ವಕೀಲ ಸುನಿಲ್ ಕೋರ್ಟ್ ಗೆ ಮನವಿ ಮಾಡಿದ್ದಾರೆ.
ನಾಳೆ ದರ್ಶನ್ ಭೇಟಿಯಾಗಲಿರುವ ವಕೀಲ
ವಿಚಾರಣೆ ವೇಳೆ ಜಡ್ಜ್ ಕೆಲ ಅಂಶಗಳನ್ನು ಉಲ್ಲೇಖಿಸಿದ್ದಾರೆ. ನಾಳೆ ವಕೀಲರು ಜೈಲಿಗೆ ತೆರಳಿ ತಮ್ಮ ಕ್ಲೈಂಟ್ (ಆರೋಪಿಗಳ) ಭೇಟಿ ಮಾಡಬಹುದು ಎಂದಿದೆ. ಹೀಗಾಗಿ ಜೈಲು ಅಧಿಕಾರಿಗಳಿಗೆ ಕೋರ್ಟ್ ಸೂಚನೆ ನೀಡಿದ್ದು, ವಕೀಲರಿಗೆ ಆರೋಪಿಗಳ ಭೇಟಿಯಾಗಲು ಅವಕಾಶ ಕಲ್ಪಿಸಲು ಸೂಚಿಸಿದೆ.
ಜಾಮೀನು ರಹಿತ ವಾರೆಂಟ್ ಎಚ್ಚರಿಕೆ
ಎಲ್ಲಾ ಆರೋಪಿಗಳು ಖುದ್ದು ಕೋರ್ಟ್‌ಗೆ ಹಾಜರಾಗಲು ಸೂಚನೆ ನೀಡಿದ ಕೋರ್ಟ್, ಜಾಮೀನು ಪಡೆದಿರುವ ಆರೋಪಿಗಳೂ ಹಾಜರಾಗಬೇಕು ಎಂದಿದೆ. ಇಲ್ಲದಿದ್ದರೆ ಜಾಮೀನು ರಹಿತ ವಾರೆಂಟ್ ನೀಡಲಾಗಿದೆ. ಹೀಗಾಗಿ ಪೊಲೀಸರು ಬಂದು ಅರೆಸ್ಟ್ ಮಾಡುತ್ತಾರೆ ಎಂದು ಎಚ್ಚರಿಸಿದ್ದಾರೆ.
