ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಿವಾಸದ ಬಳಿ ನಕಲಿ ನಂಬರ್ ಪ್ಲೇಟ್ ಹೊಂದಿದ್ದ ಫಾರ್ಚೂನರ್ ಕಾರು ಪತ್ತೆ. ಕಾರಿನ ನಿಜವಾದ ಮಾಲೀಕ ಯಾರು ಎಂಬುದು ತನಿಖೆಯಿಂದ ಬಹಿರಂಗ.

ಬೆಂಗಳೂರು (ಸೆ.12): ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸದಾಶಿವನಗರ ನಿವಾಸದ ಬಳಿ ನಕಲಿ ನಂಬರ್ ಪ್ಲೇಟ್ ಹೊಂದಿರುವ ಟೊಯೋಟಾ ಫಾರ್ಚೂನರ್ ಕಾರು ಪತ್ತೆಯಾಗಿದ್ದು ಇದರಿಂದಾಗಿ ಕೆಲಕಾಲ ಆತಂಕ ಸೃಷ್ಟಿಸಿತು.

ಸೆಪ್ಟೆಂಬರ್ 7 ರಂದು, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನಿವಾಸದ ಬಳಿ ನಿಂತಿದ್ದ ಬಿಳಿ ಬಣ್ಣದ ಫಾರ್ಚೂನರ್ ಕಾರು ಸದಾಶಿವನಗರ ಟ್ರಾಫಿಕ್ ಪೊಲೀಸರು ಇದನ್ನೂ ಗಮನಿಸಿದ್ದಾರೆ. ಸುತ್ತಮುತ್ತ ಚಾಲಕನನ್ನು ಹುಡುಕಿದರೂ ಯಾರೂ ಇರಲಿಲ್ಲ. ಕಾರನ್ನು ಟೋಯಿಂಗ್ ಮಾಡುವ ಸಂದರ್ಭದಲ್ಲಿ, ಮುಂದಿನ ನಂಬರ್ ಪ್ಲೇಟ್‌ನಲ್ಲಿ KA51MW6814 ಸಂಖ್ಯೆಯನ್ನು ಗಮನಿಸಿದ ಪೊಲೀಸರು, ಮಾಲೀಕರ ಮಾಹಿತಿ ಪತ್ತೆ ಹಚ್ಚಿ ಮೊಬೈಲ್‌ ನಂಬರ್ಗೆ ಕರೆ ಮಾಡಿದ್ದಾರೆ. ಆದರೆ ಕಾರಿನ ಮಾಲೀಕಾರದ ದೀಪಕ್ ಎಂಬವರಿಗೆ ಕರೆ ಮಾಡಿದಾಗ, ದೀಪಕ್ ನನ್ನ ಕಾರು ನಮ್ಮ ಮನೆಯ ಬೇಸ್‌ಮೆಂಟ್‌ನಲ್ಲೇ ನಿಂತಿದೆ' ಎಂದು ಉತ್ತರಿಸಿದ್ದಾರೆ 

ಡಿಕೆಶಿ ಮನೆ ಬಳಿ ಪತ್ತೆಯಾದ ಕಾರಿನ ಮಾಲೀಕ ಯಾರು?

ಇದು ಪೊಲೀಸರಿಗೆ ಆಶ್ಚರ್ಯತರಿಸಿದೆ. ಬಳಿಕ ಇದರಿಂದ ಸಂದೇಹಗೊಂಡ ಪೊಲೀಸರು ಕಾರಿನ ಹಿಂಭಾಗವನ್ನು ಪರಿಶೀಲಿಸಿದಾಗ, ಮೂಲ ನಂಬರ್ ಪ್ಲೇಟ್‌ನ ಮೇಲೆ ನಕಲಿ ಪ್ಲೇಟ್ ಅಂಟಿಸಲಾಗಿರುವುದು ಬಹಿರಂಗವಾಗಿದೆ.

ಹಿಂಭಾಗದಲ್ಲಿ KA42P6606 ಸಂಖ್ಯೆಯ ನಂಬರ್ ಪ್ಲೇಟ್ ಪತ್ತೆಯಾಗಿದೆ. ಇದು ರಾಮನಗರ ಆರ್‌ಟಿಒದಲ್ಲಿ ಮಂಜುನಾಥ್ ಎಂಬವರ ಹೆಸರಿನಲ್ಲಿ ನೋಂದಾಯಿತಾಗಿದೆ ಎಂಬುದು ತಿಳಿದುಬಂದಿದೆ. ಸದ್ಯ ಈ ಫಾರ್ಚೂನರ್ ಕಾರನ್ನು ಸೀಜ್ ಮಾಡಿ, ಮಾಲೀಕ ಮಂಜುನಾಥ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಸದ್ಯ ಕಾರನ್ನ ಸೀಜ್ ಮಾಡಿ ಕಾರಿನ ಮಾಲೀಕ ಮಂಜುನಾಥ್ ಗೆ ನೋಟಿಸ್ ನೀಡಿರುವ ಪೊಲೀಸರು. ಫಾರ್ಚೂನರ್ ಕಾರು ಮಾಲೀಕ ಮಂಜುನಾಥ ವಿರುದ್ಧ ಪ್ರಕರಣ ದಾಖಲಿಸಲಾಗಿದ. ಆದರೆ ಕಾರು ಸೀಜ್ ಮಾಡಿ ಐದು ದಿನಗಳಾದರೂ ಕಾರನ್ನ್ಉ ಬಿಡಿಸಿಕೊಳ್ಳಲು ಕಾರಿನ ಮಾಲೀಕ ಬಾರದಿರುವುದು ಅನುಮಾನಕ್ಕೆಡೆಮಾಡಿಕೊಟ್ಟಿದೆ.