ಆರೆಸ್ಸೆಸ್ ಕುರಿತು ಬೇಜವಾಬ್ದಾರಿ ಹೇಳಿಕೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆಯನ್ನು ಸಂಸದ ರಮೇಶ ಜಿಗಜಿಣಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಖರ್ಗೆಯವರು ಪಾಪ ಮಾಡಿದ್ದು, ಜನರಲ್ಲಿ ಕ್ಷಮೆಯಾಚಿಸಬೇಕು ಮತ್ತು ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ವಿಜಯಪುರ (ಅ.22): ದೇಶ ಸೇವೆಯನ್ನೇ ಉಸಿರಾಗಿಸಿಕೊಂಡ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಬೇಜವಾಬ್ದಾರಿತನದ ಹೇಳಿಕೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ ದೊಡ್ಡ ಪಾಪ ಮಾಡಿದ್ದು, ಸ್ವಪಕ್ಷದಲ್ಲಿಯೇ ಒಂಟಿಯಾಗುವಂತಾಗಿದ್ದಾರೆ. ಇನ್ನಾದರೂ ಪಾಪಕ್ಕೆ ಪ್ರಾಯಶ್ಚಿತ್ತಪಟ್ಟು ಜನರಲ್ಲಿ ಕ್ಷಮೆಯಾಚಿಸಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಒತ್ತಾಯಿಸಿದ್ದಾರೆ. ಈ ಕುರಿತು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಆರೆಸ್ಸೆಸ್ ಬಗ್ಗೆ ನೆಹರು ಶ್ಲಾಘಿಸಿದ್ದರು:
ಈ ಕುರಿತು ಪ್ರಕಟಣೆ ನೀಡಿರುವ ಅವರು, ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಸಂಘ ಪರಿವಾರದ ಕಾರ್ಯದಕ್ಷತೆ, ಸೇವಾ ಮನೋಭಾವವನ್ನು ಶ್ಲಾಘಿಸಿದ್ದನ್ನು ಪ್ರಿಯಾಂಕ್ ಖರ್ಗೆ ಮರೆತಂತೆ ಕಾಣುತ್ತಿದೆ. ಸಂಘ ಪರಿವಾರಕ್ಕೆ ಅಗೌರವ ತೋರುವ ಪ್ರಿಯಾಂಕ್‌ಗೆ ಪಕ್ಷದಲ್ಲಿಯೇ ಬೆಂಬಲ ಇಲ್ಲ.
ಇದನ್ನೂ ಓದಿ: ಸಂವಿಧಾನ, ಕಾನೂನು ಪಾಠ ಮಾಡುವ ಖರ್ಗೆ ಚಿತ್ತಾಪುರ ಗೋ ಹಂತಕರ ಕೇಸ್ ಪಾಪಸ್ ಪಡೆದಿದ್ದೇಕೆ? ಆರ್ ಅಶೋಕ್ ಕಿಡಿ
ಸಚಿವ ಸಂಪುಟದಿಂದ ವಜಾಗೊಳಿಸಿ:
ಅವರ ಹೇಳಿಕೆಯನ್ನೂ ಯಾರೂ ಸಮರ್ಥಿಸಿಕೊಂಡಿಲ್ಲ. ಮುಗ್ದ ಸರ್ಕಾರಿ ನೌಕರರ ಮೇಲೆ ದಬ್ಬಾಳಿಕೆ ಮಾಡುವುದನ್ನು ಬಿಟ್ಟು ರಾಜ್ಯ ಸರ್ಕಾರ ಮೊದಲು ಸಂಘ ಪರಿವಾರದ ಬಗ್ಗೆ ಅಗೌರವ ತೋರಿದ ಪ್ರಿಯಾಂಕ್ ಖರ್ಗೆ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಲಿ ಎಂದು ಆಗ್ರಹಿಸಿದ್ದಾರೆ.
