Mantra Mangalya wedding ceremony: ಮಂಡ್ಯದ ಯಶಸ್ವಿನಿ ಮತ್ತು ಸೋಮಶೇಖರ್ ಅವರು ಕುವೆಂಪು ಅವರ ಮಂತ್ರ ಮಾಂಗಲ್ಯದಂತೆ ಸರಳವಾಗಿ ವಿವಾಹವಾದರು. ತಮ್ಮ ಮದುವೆಯ ದಿನ ರಕ್ತದಾನ ಮಾಡಿ, ಸಸಿ ನೆಡುವ ಮೂಲಕ ಈ ಜೋಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಮಂಡ್ಯ (ಅ.25) : ಅದ್ಧೂರಿ, ಆಡಂಬರದ ಮದುವೆಗಳ ನಡುವೆಯೂ ರಾಷ್ಟ್ರಕವಿ ಕುವೆಂಪು ಅವರ ಮಂತ್ರ ಮಾಂಗಲ್ಯದ ರೀತಿಯಲ್ಲಿ ಅತ್ಯಂತ ಸರಳವಾಗಿ ಮದುವೆ ಮಾಡಿಕೊಂಡ ಜೋಡಿ ರಕ್ತದಾನ, ಪರಿಸರ ಸಂರಕ್ಷಣೆಗಾಗಿ ಸಸಿ ನೆಟ್ಟು ಮಾದರಿಯಾಗಿದ್ದಾರೆ. 

ಕುವೆಂಪು ಅವರ ಪರಿಕಲ್ಪನೆಯಂತೆ ಮದುವೆ:

ತಾಲೂಕಿನ ಎಂ.ಎಸ್.ಯಶಸ್ವಿನಿ ಮತ್ತು ಸಿ.ಸೋಮಶೇಖರ್ ಅವರು ಬೆಳಗ್ಗೆ ಸಸಿ ನೆಟ್ಟು, ರಕ್ತದಾನ ಮಾಡುವ ಮೂಲಕ ದಾಂಪತ್ಯಕ್ಕೆ ಕಾಲಿಟ್ಟ ಜೋಡಿಗಳು. ಗ್ರಾಮದ ಮಲ್ಲೇಶ್ವರಸ್ವಾಮಿ ಸಮುದಾಯ ಭವನದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಪರಿಕಲ್ಪನೆಯಂತೆ ಶ್ರೀನಾದನಂದನಾಥ ಸ್ವಾಮಿ, ನಟ ಚೇತನ್ ಅಹಿಂಸಾ, ನಟಿ ಪೂಜಾ ಗಾಂಧಿ, ಗಣ್ಯರ ಸಮ್ಮುಖದಲ್ಲಿ ಮಂತ್ರ ಮಾಂಗಲ್ಯ ಮದುವೆ ಆಗುವ ಮೂಲಕ ಸಂಸಾರಿಕ ಹಾದಿ ತುಳಿದರು. 

ಇದನ್ನೂ ಓದಿ: ವಧು-ವರರಿಬ್ಬರಿಗೂ ತಾಳಿ ಮಾದರಿಯ ವಿವಾಹ ಮುದ್ರೆ: ವಿಶಿಷ್ಟ ಮದುವೆಗೆ ಸಾಕ್ಷಿಯಾದ ಗದಗ..!

ರೈತಸಂಘ ಮುಖಂಡರಾದ ನಂದಿನಿ ಜಯರಾಂ ವಿವಾಹ ಸಂಹಿತೆ ಬೋಧಿಸಿದರು. ಯಾಚೇನಹಳ್ಳಿ ಶ್ರೀರಾಮಕೃಷ್ಣ ಸೇವಾಕೇಂದ್ರ ಟ್ರಸ್ಟ್‌ನ ಶ್ರೀನಾದನಂದನಾಥಸ್ವಾಮಿ ಸಾನ್ನಿಧ್ಯ ವಹಿಸಿದ್ದರು.