ಧರ್ಮಸ್ಥಳದ ಬುರುಡೆ ಪ್ರಕರಣದಲ್ಲಿ ಸತ್ಯದ ಪರ ನಿಲ್ಲುವುದಾಗಿ ಯೂಟ್ಯೂಬರ್ ಮನಾಫಾ ಹೇಳಿದ್ದಾರೆ. ತಪ್ಪಿತಸ್ಥ ಯಾರೇ ಆಗಲಿ ತನಿಖೆಯಿಂದ ಹೊರಬರಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಎಸ್ಐಟಿಗೆ ಸಂಪೂರ್ಣ ಸಹಕಾರ ನೀಡುವುದಾಗಿಯೂ ತಿಳಿಸಿದ್ದಾರೆ.

 ಮಂಗಳೂರು (ಸೆ.11): ನಾನು ಸತ್ಯದ ಪರವಾಗಿ ಇದ್ದೇನೆ. ನಾನು ಯಾರನ್ನೂ ರಕ್ಷಣೆ ಮಾಡುವುದಕ್ಕೆ ಈ ಹೋರಾಟಕ್ಕೆ ಬಂದಿಲ್ಲ. ಯಾರು ಸುಳ್ಳು ಅಪಪ್ರಚಾರ ಮಾಡಿದ್ದಾರೋ, ಯಾರಿಗೆ ಅಪರಾಧಿ ಪ್ರಜ್ಞೆ ಇದೆಯೋ ಅವರಿಗೆ ವಿರೋಧವಾಗಿ ನಿಲ್ಲುತ್ತೇನೆ ಎಂದು ಕೇರಳದ ಯೂಟ್ಯೂಬರ್‌ ಮನಾಫಾ ತಿಳಿಸಿದ್ದಾರೆ.

ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣ ಸಂಬಂಧ ಮಂಗಳವಾರ ಎಸ್‌ಐಟಿ ಕಚೇರಿಗೆ ವಿಚಾರಣೆಗೆ ಹಾಜರಾದ ಮನಾಫ್‌, ಸುದ್ದಿಗಾರರ ಜೊತೆ ಮಾತನಾಡಿದರು. ನಾನು ಸತ್ಯದ ಪರವಾಗಿ ಇದ್ದೇನೆ. ನಾನು ಯಾರನ್ನೂ ರಕ್ಷಣೆ ಮಾಡುವುದಕ್ಕೆ ಈ ಹೋರಾಟಕ್ಕೆ ಬಂದಿಲ್ಲ. ಯಾರು ಸುಳ್ಳು ಅಪಪ್ರಚಾರ ಮಾಡಿದ್ದಾರೋ, ಯಾರಿಗೆ ಅಪರಾಧಿ ಪ್ರಜ್ಞೆ ಇದೆಯೋ ಅವರಿಗೆ ವಿರೋಧವಾಗಿ ನಿಲ್ಲುತ್ತೇನೆ. ಯಾವುದೇ ಸೈಡ್ ಅಂತ ಅಲ್ಲ, ನನಗಿರುವ ಸತ್ಯದ ಮಾಹಿತಿ ಪರ ನಿಲ್ಲುತ್ತೇನೆ. ನಾನು ಸತ್ಯದ ಪರ ಹೋರಾಟ ಮಾಡುತ್ತಿದ್ದೇನೆ. ಅದರಲ್ಲಿ ನಮ್ಮವರೇ ತಪ್ಪು ಮಾಡಿದ್ದರೂ ಹೊರಗಡೆ ಬರಲಿ. ನಮ್ಮಲ್ಲೇ ಯಾರಾದ್ರೂ ಸುಳ್ಳು ಅಥವಾ ಕಿತಾಪತಿ ಮಾಡಿದ್ರೂ ಹೊರಗೆ ಬರಲಿದೆ ಎಂದರು.

ನಮ್ಮ ಕಡೆಯಿಂದ ಕೊಡಬೇಕಾದ ಎಲ್ಲ ಮಾಹಿತಿಗಳನ್ನು ಎಸ್ಐಟಿಗೆ ಕೊಡುತ್ತಿದ್ದೇವೆ. ಎಸ್ಐಟಿಯವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಮತ್ತೆ ಬಂಗ್ಲೆಗುಡ್ಡೆ ಕಾಡಲ್ಲಿ ಮಹಜರು

ಮಂಗಳೂರು: ನಾಲ್ಕು ದಿನಗಳ ಹಿಂದೆ ಧರ್ಮಸ್ಥಳ ಸಮೀಪದ ಬಂಗ್ಲೆಗುಡ್ಡೆ ಕಾಡಿನಲ್ಲಿ ಮಹಜರು ನಡೆಸಿದ್ದ ಎಸ್‌ಐಟಿ ಅಧಿಕಾರಿಗಳು, ಬುಧವಾರ ಮತ್ತೆ ಸೌಜನ್ಯಾ ಮಾವ ವಿಠಲ ಗೌಡರನ್ನು ಕರೆದುಕೊಂಡು ಹೋಗಿ ಸ್ಥಳದ ಮಹಜರು ನಡೆಸಿದರು. ಎಸ್ಪಿ ಸೈಮನ್ ನೇತೃತ್ವದಲ್ಲಿ ಬಂಗ್ಲೆಗುಡ್ಡೆ ಕಾಡಿಗೆ ತೆರಳಿದ ಎಸ್ಐಟಿ ತಂಡ, ವಿಠಲ ಗೌಡ ಬುರುಡೆ ತಂದ ಕಾಡಿನಲ್ಲಿ ಸ್ಥಳ ಮಹಜರು ನಡೆಸಿದೆ. ಸೆ.6ರಂದು ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಮಹಜರು ನಡೆಸಿದ್ದಾಗ ಎರಡು ತಲೆಬುರುಡೆ ಪತ್ತೆಯಾಗಿ, ಅದನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು.