ಸಿದ್ದರಾಮಯ್ಯರ ನಂತರ ಸತೀಶ್ ಜಾರಕಿಹೊಳಿ ಸಿಎಂ ಆಗಬಹುದು ಎಂಬ ಯತೀಂದ್ರ ಹೇಳಿಕೆಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಪ್ರತಿಕ್ರಿಯಿಸಿದ್ದಾರೆ. ಸತೀಶ್ ಜಾರಕಿಹೊಳಿ ಸಮರ್ಥರಿದ್ದಾರೆ ಎಂದ ಅವರು, ಯಾರ ಹಣೆಬರಹದಲ್ಲಿ ಏನಿದೆಯೋ ಯಾರಿಗೆ ಗೊತ್ತು ಎಂದು ಹೇಳುವ ಮೂಲಕ ಗೂಢಾರ್ಥವಾಗಿ ಮಾತನಾಡಿದ್ದಾರೆ. 

ದಾವಣಗೆರೆ (ಅ.24): ಯತೀಂದ್ರ ಅವರು ಸತೀಶ್ ಜಾರಕಿಹೊಳಿಯವರು ಸಹ ಸಮರ್ಥರು ಎಂದಿದ್ದಾರೆ ಹೀ ಇಸ್ ಆಲ್ಸೋ ಕೆಪೆಬಲ್ ವಾಯ್ ಹೀ ಕಾಂಟ್ ಬಿಕಮ್ ಸಿಎಂ ಎಂದಿದ್ದಾರೆ ಅವರಲ್ಲೂ ಸಾಮರ್ಥ್ಯ ಇದೆ ಅವರೇಕೆ ಸಿಎಂ ಆಗಬಾರದು ಎಂದಿದ್ದಾರೆ ಅಷ್ಟೆ ಎಂದು ಸಚಿವ ಎಸ್‌ ಎಸ್ ಮಲ್ಲಿಕಾರ್ಜುನ ತಿಳಿಸಿದರು.

ಸಿದ್ದರಾಮಯ್ಯರ ಬಳಿಕ ಸತೀಶ್ ಜಾರಕಿಹೊಳಿ ಸಿಎಂ ಎಂಬ ಯತೀಂದ್ರ ಹೇಳಿಕೆ ವಿಚಾರವಾಗಿ ದಾವಣಗೆರೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಸತೀಶ್ ಸಹ ಸಿಎಂ ಆಕಾಂಕ್ಷಿ ಅಂತಾ ಹೇಳಿರಬಹುದು ಈಗ ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾರೆ. ಅವರೇ ಮುಂದುವರಿಯುತ್ತಾರೆ ಎಂದರು.

ಕೋಡಿಹಳ್ಳಿ ನಿಮ್ಮ ಮನೆಗೆ ಬಂದಿದ್ದೇಕೆ, ಭವಿಷ್ಯ ಹೇಳಿದ್ರಾ?

ಕೋಡಿಹಳ್ಳಿ ಶ್ರೀ ನಿಮ್ಮ ಮನೆಗೆ ಭೇಟಿ ವೇಳೆ ರಾಜಕೀಯ ಭವಿಷ್ಯ ಹೇಳಿದ್ದಾರಾ ಎಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಅವರು ನನ್ನ ಹತ್ತಿರ ಏನೂ ಮಾತನಾಡಿಲ್ಲ ತಂದೆಯವರನ್ನು ನೋಡಲು ಬಂದಿದ್ದರು. ತಂದೆಯವರನ್ನ ನೋಡಿ ಕೋಡಿಹಳ್ಳಿ ಶ್ರೀ ತೆರಳಿದ್ದಾರೆ ಎಂದರು.

ಇನ್ನು ಸಂಪುಟ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಸಂಪುಟ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ ಎಲ್ಲಾ ತೀರ್ಮಾನ ದೆಹಲಿಯಲ್ಲಿ ಹೈಕಮಾಂಡ್ ತಗೆದುಕೊಳ್ಳುತ್ತೆ ಹೈಕಮಾಂಡ್‌ನವರು ಸೂಕ್ತ ನಿರ್ಧಾರ ತಗೆದುಕೊಳ್ಳುತ್ತಾರೆ ಎಂದರು. ಇದೇ ವೇಳೆ ಬಿಹಾರ ಚುನಾವಣೆಗೆ ಕಪ್ಪ ಕಾಣಿಕೆ ಕೊಟ್ಟೋರು ಮಾತ್ರ ಸಚಿವರಾಗಿ ಇರ್ತಾರೆ ಎಂಬ ಆರ್‌.ಅಶೋಕ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅವರ ಪಕ್ಷದಲ್ಲಿ ಆ ರೀತಿ ಇದೆ ನಮ್ಮಲ್ಲಿ ಇಲ್ಲ ಎಂದು ತಿರುಗೇಟು ನೀಡಿದರು.

ನವೆಂಬರ್ ಕ್ರಾಂತಿ ಬಗ್ಗೆ ನನ್ನ ಕೇಳಿದ್ರೆ ಏನು ಹೇಳಲಿ:

ನವೆಂಬರ್ ಕ್ರಾಂತಿ ಬಗ್ಗೆ ಸದ್ಯಕ್ಕೆ ನನಗೇನೂ ಗೊತ್ತಿಲ್ಲ ನನಗೆ ಕೇಳಿದ್ರೆ ನಾನೇನು ಹೇಳಲಿ? ಕೋಡಿಹಳ್ಳಿ ಶ್ರೀ ನಿಮ್ಮ ಮನೆಗೆ ಭೇಟಿ ನೀಡಿದ್ದಾರೆ ಅಂದ್ರೆ ನೆಕ್ಸ್ಟ್ ನೀವು ಸಿಎಂ ಆಗಬಹುದು ಎಂದು ಮಾಧ್ಯಮಗಳ ಪ್ರಶ್ನೆಗೆ, 'ನೋಡಿ ಯಾರ್ಯಾರ ಹಣೆಹಬರಹದಲ್ಲಿ ಏನೇನು ಇದೆ ಅಂತಾ ಯಾರಿಗೆ ಗೊತ್ತು ನಂದೆ ಪ್ರಶ್ನೆ ಅಂತಾ ಅಲ್ಲ ಯಾರ ಹಣೆಬರಹದಲ್ಲಿ ಏನಿದೆ ಅಂತಾ ಯಾರಿಗೆ ಗೊತ್ತು ಬಸವರಾಜ ಬೊಮ್ಮಾಯಿ ಸಿಎಂ ಆದ್ರಪ್ಪಾ ಯಾರಿಗಾದರೂ ಗೊತ್ತಿತ್ತಾ? ಅದಕ್ಕೂ ಮುಂಚೆ ಜಗದೀಶ ಶೆಟ್ಟರ್ ಆದ್ರೂ ನಮ್ಮಲ್ಲೂ ಹಲವು ಜನ ಸಿಎಂ ಆದ್ರು ಗೊತ್ತಿತ್ತಾ? ಅದರ ಬಗ್ಗೆ ನನಗೇನೂ ಗೊತ್ತಿಲ್ಲ ಅದರ ಬಗ್ಗೆ ತಲೆನೂ ಕೆಡಿಸಿಕೊಂಡಿಲ್ಲ ಎಂದರು.

ಈ ವೇಳೆ ತಮ್ಮ ಪರ ಘೋಷಣೆ ಕೂಗಲು ಮುಂದಾದ ಬೆಂಬಲಿಗರಿಗೆ ಗದರಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಕುರಿತು ಸಿಎಂಗೆ ಬಸವರಾಜ ರಾಯರೆಡ್ಡಿ ಪತ್ರ ವಿಚಾರ ಅದು ಬಹಳ ದಿವಸದ ವಿಚಾರ ಅಲ್ಲಿಯ ಲೋಕಲ್ ಡಿಸ್ಪ್ಯೂಟ್ ನನ್ನ ಜೊತೆಯೂ ಮಾತನಾಡಿಲ್ಲ ಮಾತನಾಡ್ತೀನಿ ಅಂದಿದ್ದಾರೆ ನನ್ನ ಜೊತೆ ಮಾತನಾಡಿದ ಮೇಲೆ ಪ್ರತಿಕ್ರಿಯಿಸುವೆ ಎಂದರು.