ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಅಧ್ಯಕ್ಷರು, ತಮ್ಮ ಜರ್ಮನಿ, ನೆದರ್‌ಲ್ಯಾಂಡ್ ಸ್ವಿಟ್ಜರ್‌ಲ್ಯಾಂಡ್ ಪ್ರವಾಸದ ಅಧ್ಯಯನ ವರದಿ ಸಚಿವರಿಗೆ ಸಲ್ಲಿಸಿದ್ದಾರೆ. ಬಯೋಡೀಸಲ್, ಗ್ರೀನ್ ಹೈಡ್ರೋಜನ್, ಮತ್ತು ವೇಸ್ಟ್ ಟು ಎನರ್ಜಿ ಯೋಜನೆಗಳ ಅನುಷ್ಠಾನದ ಮೂಲಕ ಬೃಹತ್ ಬಂಡವಾಳ ಹೂಡಿಕೆ ಸಾಧ್ಯತೆ ವಿವರಿಸುತ್ತದೆ.

ಬೆಂಗಳೂರು (ಸೆ.19): ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಎಸ್ ಈ ಸುಧೀಂದ್ರ ಅವರು ಇಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರನ್ನು ಭೇಟಿಯಾಗಿ ಮಂಡಳಿಯ ನಿಯೋಗವು ಇತ್ತೀಚಿಗೆ ಜರ್ಮನ್ ದೇಶಕ್ಕೆ ಭೇಟಿ ನೀಡಿದ್ದರ ಕುರಿತ ವರದಿಯನ್ನು ಸಲ್ಲಿಸಿದರು.

ಅನುಷ್ಠಾನ ಪ್ರಕ್ರಿಯೆಗೆ ಪೂರಕ ವಾತಾವರಣ:

ಈ ಸಂದರ್ಭದಲ್ಲಿ ಸಚಿವರಿಗೆ ಮಂಡಳಿ ಅಧ್ಯಕ್ಷರು ಜರ್ಮನ್‌, ನೆದರ್‌ ಲ್ಯಾಂಡ್‌ ಮತ್ತು ಸ್ವಿಟ್ಜರ್‌ ಲ್ಯಾಂಡ್‌ ದೇಶಗಳಲ್ಲಿ ಜೈವಿಕ ಇಂಧನ ಕ್ಷೇತ್ರಗಳಾದ ಬಯೋಡೀಸಲ್, ಗ್ರೀನ್ ಹೈಡ್ರೋಜನ್, ವೇಸ್ಟ್ ಟು ಎನರ್ಜಿ ಪ್ರಾಜೆಕ್ಟ್ ಗಳಿಗೆ ಭೇಟಿ ನೀಡಿದ್ದು ಅಲ್ಲಿನ ತಾಂತ್ರಿಕತೆ, ಅಪಾರ ಪ್ರಮಾಣದಲ್ಲಿ ನಾವು ಉತ್ಪಾದನೆ ಹಾಗೂ ದೀರ್ಘಾವಧಿ ಯೋಜನೆಗಳ ಕುರಿತು ಅಧ್ಯಯನ ನಡೆಸಿ ವರದಿಯನ್ನು ಸಿದ್ಧಗೊಳಿಸಿದ್ದು ರಾಜ್ಯದಲ್ಲಿ ಅನುಷ್ಠಾನ ಪ್ರಕ್ರಿಯೆಗೆ ಪೂರಕ ವಾತಾವರಣ ನಿರ್ಮಿಸುವುದು ಇಂದಿನ ಅವಶ್ಯಕತೆಯಾಗಿದೆ ಎಂದು ತಿಳಿಸಿದರು.

ಜೈವಿಕ ಇಂಧನ ಕ್ಷೇತ್ರದ ಬೆಳವಣಿಗೆಗೆ ಪಣ:

ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ಮುಂದಿನ ಜೈವಿಕ ಇಂಧನ ಕ್ಷೇತ್ರದ ಬೆಳವಣಿಗೆಯನ್ನು ನಿರ್ಧರಿಸಲಿದ್ದು ರಾಜ್ಯವು ಈ ದಿಶೆಯಲ್ಲಿ ಮಾದರಿಯಾಗಲಿದೆ ಎಂದು ತಿಳಿಸಿದರು. ಈ ಪ್ರವಾಸದ, ಪರಿಣಾಮವಾಗಿ ಜೈವಿಕ ಇಂಧನ ಕ್ಷೇತ್ರದಲ್ಲಿ ಸುಸ್ಥಿರತೆ, ನೂತನ ಅವಿಕ್ಷಾರಗಳು ಹಾಗೂ ಸಂಪನ್ಮೂಲ ಸೃಜನೆಗೆ ರಾಜ್ಯದಲ್ಲಿ ದಾರಿಯಾಗಲಿದೆ ಎಂದು ವಿವರಿಸಿದರು. ಕರ್ನಾಟಕ ರಾಜ್ಯದ ಜೈವಿಕ ಇಂಧನ ಕ್ಷೇತ್ರದಲ್ಲಿನ ಅಭಿವೃದ್ಧಿ ಯೋಜನೆಗಳು ಸದಾ ನೂತನ ನಿರ್ವಹಣಾ ಮಾದರಿಗಳ ಸೃಜನೆಗೆ ಮಾರ್ಗಸೂಚಿಯಾಗಲಿದೆ.

ಪ್ರಸ್ತುತ ಕಾಲಘಟ್ಟದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ.ಸಿದ್ದರಾಮಯ್ಯನವರ ದೂರದೃಷ್ಟಿ, ಚಿಂತನೆಗಳು ಹಾಗೂ ಪ್ರೋತ್ಸಾಹಗಳು ಜೈವಿಕ ಇಂಧನ ಕ್ಷೇತ್ರದ ಬೆಳವಣಿಗೆಯಲ್ಲಿ ವೇಗವರ್ಧಕಗಳಾಗಿದ್ದು ಮುಂದಿನ ದಿನಗಳಲ್ಲಿ ಅಪಾರ ಬಂಡವಾಳ ಹೂಡಿಕೆಗೆ ಆಕರ್ಷಣೆಯಾಗಲಿದೆ. ಮುಖ್ಯಮಂತ್ರಿಗಳ ಅವಿರತ ಪ್ರಯತ್ನ ದಿಂದ ರಾಜ್ಯದಲ್ಲಿ ಜೈವಿಕ ಇಂಧನ ಕ್ಷೇತ್ರದ ಉನ್ನತೀಕರಣ ಹಾಗೂ ವಾಣಿಜ್ಯೀಕರಣದೊಂದಿಗೆ ಹಸಿರು ಮನೆ ಇಂಧನಗಳ ಹೊರಸೂಸುವಿಕೆಯನ್ನು ತಗ್ಗಿಸುವಿಕೆ; ಶುದ್ಧ ಇಂಧನ; ವರ್ತುಲಾಕಾರದ ಅರ್ಥಿಕತಯನ್ನು ಸಾಧಿಸುವಲ್ಲಿ ಮುನ್ನಡಿಯಾಗಲಿದೆ. ಉದ್ದಿಮೆ ಸ್ನೇಹಿ ವಾತಾವರಣದ ಸೃಜನೆ ರೂ.1.00 ಲಕ್ಷ ಕೋಟಿಗೂ ಅಧಿಕ ಬಂಡವಾಳ ಹೂಡಿಕೆ; 03 ಲಕ್ಷಕ್ಕೂ ಹೆಚ್ಚು ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳ ಸೃಜನೆಗೆ ನಾಂದಿಯಾಗಲಿದೆ.

02 ವಿಶ್ವವಿದ್ಯಾಲಯಗಳೊಂದಿನ ಒಡಂಬಡಿಕೆ;

ಸಂಶೋಧನೆ, ತಾಂತ್ರಿಕತೆ ಹಾಗೂ ಕೌಶಲ್ಯಾಭಿವೃದ್ಧಿಯಲ್ಲಿ ಸಹಭಾಗಿತ್ವಕ್ಕೆ ನೆರವಾಗಲಿದೆ ಎಂದು ಪ್ರತಿಪಾದಿಸಿದರು.

Fachhochschule Dortmund and TH OWL ವಿಶ್ವವಿದ್ಯಾಲಯಗಳು,ಕೈಗಾರಿಕೆಗಳ ಭೇಟಿ HYGEAR; Hydrogen TECOSOL; Biodiesel ,Waste to Energy Projects; Remondis; Waste to Energy Circular Economy ಕುರಿತು ಮಾತನಾಡಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಹಾಗೂ ಐಟಿಬಿಟಿ ಸಚಿವರು ಜರ್ಮನ್ ದೇಶದ ಪ್ರವಾಸ ಹಾಗೂ ವರದಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಸಮುದಾಯ ಆಧಾರಿತ- 6000 ಗ್ರಾಮ ಪಂಚಾಯಿತಿಗಳಲ್ಲಿ ಬಯೋಗ್ಯಾಸ್‌ ಸಿಬಿಜಿ – ಗ್ರಾಮೀಣ ಇಂದನ ಅಭಿವೃದ್ಧಿ ಕುರಿತು ಕೂಡಲೇ ಕಾರ್ಯವನ್ನು ಸೂಚಿಸಿದರು. ಕಲ್ಬುರ್ಗಿ ಜಿಲ್ಲೆಯಲ್ಲಿ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಇಲಾಖೆಯಿಂದ ಜೈವಿಕ ಇಂಧನ ಉತ್ಪಾದನಾ ಘಟಕಗಳ ನಿರ್ಮಾಣಕ್ಕೆ ಒದಗಿಸಲಾಗಿರುವ ಜಾಗ, ಮೂಲಸೌಕರ್ಯಗಳ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲು ಸೂಚಿಸಿದರು.

ಸಾರ್ವಜನಿಕ – ಖಾಸಗಿ ಸಹಭಾಗಿತ್ವ ಔದ್ಯೋಗಿಕ ನೀತಿಗಳ ಬೆಂಬಲ ದೊಂದಿಗೆ ಕಾರ್ಯನಿರ್ವಹಿಸಲು ಸಲಹೆ ನೀಡಿದರು.ಗ್ರಾಮೀಣ ಜನತೆಯ ಅಭಿವೃದ್ಧಿ; ಸಂಶೋಧನೆ; ಮುಂದಿನ ದಿನಗಳಲ್ಲಿ ಬೆಳವಣಿಗೆ,ಜಾಗತಿಕ ಸಂಶೋಧನೆ ಸಹಯೋಗ,ಒಡಂಬಡಿಕೆ ಪತ್ರಗಳು ಗ್ರಾಮೀಣ ಕೇಂದ್ರೀಕೃತ ಅಭಿವೃದ್ಧಿ ಹಾಗೂ ಜೈವಿಕ ಇಂಧನ ಕ್ಷೇತ್ರದಲ್ಲಿ ಹೂಡಿಕೆದಾರರು ಬಂಡವಾಳ ಹೂಡಿ ಈ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗೆ ಪೂರಕ ವಾತಾವರಣ ಸೃಜನೆ ಮಾಡುವುದು ಅಗತ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾದ ಶಿವಶಂಕರ್ ಎಲ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಲೋಹಿತ್ ಬಿ ಆರ್ , ಯೋಜನಾ ಸಲಹೆಗಾರಾದ ಡಾ. ದಯಾನಂದ ಜಿ ಎನ್, ಅಧ್ಯಕ್ಷರ ಸಲಹೆಗಾರರುಗಳಾದ ಭರತ್ ಸುಬ್ರಹ್ಮಣ್ಯ, ನಿಮೆನ್ ದೀಪ್ ಸಿಂಗ್, ಸಂತೋಷ್ ಬಿ, ಆಪ್ತ ಕಾರ್ಯದರ್ಶಿಗಳಾದ ಲೋಕೇಶ್ ಬಿ ಗೌಡ, ಕಿಶೋರ್ ಕುಮಾರ್ ಭಾಗವಹಿಸಿದ್ದರು.