ಚಿನ್ನದ ಅಕ್ರಮ ಸಾಗಾಟ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಸೇರಿದಂತೆ ನಾಲ್ವರು ಆರೋಪಿಗಳಿಗೆ ಡಿ.ಆರ್.ಐ.  ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಒಟ್ಟು 127.3 ಕೆಜಿ ಚಿನ್ನ ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳಿಗೆ ಕೋಟ್ಯಂತರ ರೂಪಾಯಿ ದಂಡ ವಿಧಿಸಲಾಗಿದೆ.

ಬೆಂಗಳೂರು: ಚಿನ್ನದ ಅಕ್ರಮ ಸಾಗಾಟ ಪ್ರಕರಣದಲ್ಲಿ ಬಂಧಿತೆಯಾದ ನಟಿ ರನ್ಯಾ ರಾವ್ ಮತ್ತೊಮ್ಮೆ ಡಿ.ಆರ್.ಐ. (Directorate of Revenue Intelligence) ಶಾಕ್ ನೀಡಿದೆ. ಅಡ್‌ಜುಡಿಕೇಷನ್ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಡಿ.ಆರ್.ಐ. ಆರೋಪಿಗಳಿಗೆ ಷೋಕಾಸ್ ನೋಟಿಸ್‌ಗಳನ್ನು ನೀಡಿದೆ. ಮಾರ್ಚ್ 4ರಂದು ಡಿ.ಆರ್.ಐ. ತಂಡವು ಚಿನ್ನದ ಅಕ್ರಮ ಸಾಗಾಟ ಪ್ರಕರಣವನ್ನು ಪತ್ತೆಹಚ್ಚಿ, 127.3 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿತ್ತು. ಈ ವೇಳೆ ರನ್ಯಾ ರಾವ್ ಸೇರಿದಂತೆ ಹಲವು ಮಂದಿ ಬಂಧಿತರಾಗಿದ್ದರು. ತನಿಖೆಯ ವೇಳೆ ಆರೋಪಿಗಳು ಚಿನ್ನವನ್ನು ಕಳ್ಳಸಾಗಣೆ ಮಾಡಿರುವುದು ದೃಢಪಟ್ಟಿದೆ.

ಶೋಕಾಸ್ ನೋಟಿಸ್ ವಿವರಗಳು

  • ರನ್ಯಾ ರಾವ್ ವಿರುದ್ಧ 127.3 ಕೆಜಿ ಚಿನ್ನದ ಕಳ್ಳಸಾಗಣೆ ಆರೋಪ ದೃಢವಾಗಿದೆ. ಅವರಿಗೆ ₹102.55 ಕೋಟಿ ದಂಡ ಪಾವತಿಸುವಂತೆ ನೋಟಿಸ್ ನೀಡಲಾಗಿದೆ.
  • ಎ2 ಆರೋಪಿ ತರುಣ್ ಕೊಂಡುರು ರಾಜು ವಿರುದ್ಧ 67.6 ಕೆಜಿ ಚಿನ್ನದ ಕಳ್ಳಸಾಗಣೆ ಆರೋಪ ಸಾಬೀತಾಗಿದೆ. ಅವರಿಗೆ ₹62 ಕೋಟಿ ದಂಡ ವಿಧಿಸಲಾಗಿದೆ.
  • ಭರತ್ ಜೈನ್ ಮತ್ತು ಸಾಹಿಲ್ ಜೈನ್ ತಲಾ 63.61 ಕೆಜಿ ಚಿನ್ನ ಕಳ್ಳಸಾಗಣೆ ಮಾಡಿರುವುದು ದೃಢಪಟ್ಟಿದೆ. ಇವರಿಗೆ ತಲಾ ₹53 ಕೋಟಿ ದಂಡ ಪಾವತಿಸಲು ಸೂಚಿಸಲಾಗಿದೆ.
  • 127.3ಕೆಜಿ ಚಿನ್ನ ಕಳ್ಳಸಾಗಣೆ ಮಾಡಿರೋದು ತನಿಖೆಯಲ್ಲಿ ದೃಢ. 102.55 ಕೋಟಿ ರೂಪಾಯಿ ದಂಡ ಪಾವತಿಸುವಂತೆ ಜೈಲಿಗೆ ತೆರಳಿ ನೋಟಿಸ್ ಕೊಟ್ಟ ಅಧಿಕಾರಿಗಳು

ಮುಂದಿನ ಕ್ರಮವೇನು?

ಡಿ.ಆರ್.ಐ. ನಿಯಮಾವಳಿ ಪ್ರಕಾರ, ಕಳ್ಳಸಾಗಣೆ ವಸ್ತುಗಳನ್ನು ಆರು ತಿಂಗಳೊಳಗೆ ವಸೂಲಿ ಮಾಡಬೇಕಾಗುತ್ತದೆ. ಹೀಗಾಗಿ, ಒಂದು ವೇಳೆ ದಂಡ ಪಾವತಿಸದಿದ್ದರೆ, ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶ ಇದೆ.

ಇದೇ ವೇಳೆ, ಕ್ರಿಮಿನಲ್ ಪ್ರಕರಣಗಳೂ ಪ್ರತ್ಯೇಕವಾಗಿ ಮುಂದುವರಿಯಲಿವೆ. ನೋಟಿಸ್‌ಗಳೊಂದಿಗೆ 2,500 ಪುಟಗಳ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಲಾಗಿದೆ.

ಹೈಕೋರ್ಟ್ ವಿಚಾರಣೆ

ಇಂದು ಹೈಕೋರ್ಟ್‌ನಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದ COFEPOSA ಅರ್ಜಿಯ ವಿಚಾರಣೆ ಕೂಡ ನಡೆಯಿತು. ಆದರೆ ವಿಚಾರಣೆಯನ್ನು ಸೆಪ್ಟೆಂಬರ್ 11ಕ್ಕೆ ಮುಂದೂಡಲಾಗಿದೆ. ಅತ್ಯಂತ ತ್ವರಿತಗತಿಯಲ್ಲಿ ತನಿಖೆ ನಡೆಸುತ್ತಿರುವ ಡಿ.ಆರ್.ಐ. ತಂಡವು ಈಗಾಗಲೇ ಸಾಕ್ಷ್ಯಾಧಾರ ಸಂಗ್ರಹಿಸಿದ್ದು, ರಿಕವರಿ ಪ್ರಕ್ರಿಯೆಗೆ ಮುಂದಾಗಿದೆ.