Gadag Pakistan flag incident: ಈದ್ ಮಿಲಾದ್‌ನಂದು ಕಾರಿನಲ್ಲಿ ಪಾಕಿಸ್ತಾನದ ಧ್ವಜ ಪ್ರದರ್ಶಿಸಿದ ಇಬ್ಬರು ಅಪ್ರಾಪ್ತರ ವಿರುದ್ಧ ಪ್ರಕರಣ ದಾಖಲಾಗಿದ್ದು, ಗದಗ ಜಿಲ್ಲಾ ವಕೀಲರ ಸಂಘವು ಆರೋಪಿಗಳ ಪರ ವಕಾಲತ್ತು ವಹಿಸದಿರಲು ತೀರ್ಮಾನಿಸಿದೆ.

ಗದಗ (ಸೆ.12): ಈದ್ ಮಿಲಾದ್ ದಿನದಂದು ಕಾರ್ ಮೇಲೆ ಪಾಕಿಸ್ತಾನ ಧ್ವಜ ಪ್ರದರ್ಶಿಸಿ ಉದ್ಧಟತನ ಮೆರೆದ ಇಬ್ಬರು ಅಪ್ರಾಪ್ತರ ವಿರುದ್ಧ ವಕಾಲತ್ತು ವಹಿಸದಿರಲು ಗದಗ ಜಿಲ್ಲಾ ವಕೀಲರ ಸಂಘ ಒಮ್ಮತದ ನಿರ್ಧಾರ ಕೈಗೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಬಗ್ಗೆ ಸಂಘದ ಜಿಲ್ಲಾಧ್ಯಕ್ಷ ರಾಜಶೇಖರ್ ಕಲ್ಲೂರು ಏಷ್ಯನೆಟ್ ಸುವರ್ಣ ನ್ಯೂಸ್‌ಗೆ ತಿಳಿಸಿದ್ದು, ಇದೇ ಸೆಪ್ಟೆಂಬರ್ 5, 2025 ರಂದು ನಡೆದ ಈ ಘಟನೆಯಲ್ಲಿ, ಇಬ್ಬರು ಅಪ್ರಾಪ್ತರು ತಮ್ಮ ಕಾರಿನ ನಂಬರ್ ಪ್ಲೇಟ್‌ಗೆ ಪಕ್ಕದಲ್ಲಿ 5/9/25 ದಿನಾಂಕ ನಮೂದಿಸಿ ಪಾಕ್ ಧ್ವಜವನ್ನು ಪ್ರದರ್ಶಿಸಿದ್ದರು. ಈ ಘಟನೆಯ ಫೋಟೋವನ್ನು 'ತಹಸೀಮ್' ಎಂಬ ಇನ್‌ಸ್ಟಾಗ್ರಾಮ್ ಐಡಿಯಿಂದ ಹಂಚಿಕೆ ಮಾಡಲಾಗಿದ್ದು, 'ಅಬ್ದುಲ್' ಎಂಬ ಮತ್ತೊಂದು ಖಾತೆಯಿಂದಲೂ ಶೇರ್ ಮಾಡಲಾಗಿತ್ತು. 

ಫೋಟೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.ಪ್ರಕರಣಕ್ಕೆ ಸಂಬಂಧಿಸಿ ಗದಗ ಶಹರ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ಈ ಮಧ್ಯೆ, ಗದಗ ಜಿಲ್ಲಾ ವಕೀಲರ ಸಂಘವು ಆರೋಪಿಗಳ ಪರ ವಕಾಲತ್ತು ವಹಿಸದಿರಲು ತೀರ್ಮಾನಿಸಿದ್ದು, ಈ ಘಟನೆಯು ಜಿಲ್ಲೆಯಲ್ಲಿ ಮೆಚ್ಚುಗೆಗೆ ಕಾರಣವಾಗಿದೆ.