ದಸರಾ ಹಬ್ಬದ ಕುರಿತು ನೀಡಿದ ಹೇಳಿಕೆ ದಲಿತ ಮಹಿಳೆಯರಿಗೆ ಅಪಮಾನವೆಸಗಿದೆ ಎಂದು ಆರೋಪಿಸಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕೊಪ್ಪಳ ನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ದಲಿತ ಮುಖಂಡ ಮಲ್ಲಿಕಾರ್ಜುನ ಪೂಜಾರ ಅವರು ಈ ದೂರು ನೀಡಿದ್ದಾರೆ.

ಕೊಪ್ಪಳ (ಸೆ.18): ದಲಿತ ಮಹಿಳೆಗೆ ಅಪಮಾನ ಮಾಡಿದ್ದಾರೆ ಎನ್ನುವ ಆರೋಪದಡಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮಂಗಳವಾರ ನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. 

ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡುವಾಗ ದಸರಾ ಹಬ್ಬದಲ್ಲಿ ಚಾಮುಂಡಿ ದೇವಿಗೆ ಸನಾತನ ಧರ್ಮದವರು ಮಾತ್ರ ಹೂವು ಮುಡಿಸಬೇಕು‌. ನಮ್ಮಲ್ಲಿ ದಲಿತ ಹೆಣ್ಣು ಮಕ್ಕಳಿಗೂ ಅವಕಾಶವಿಲ್ಲ. ಹೀಗಿರುವಾಗ ಸಾಹಿತಿ ಬಾನು ಮುಷ್ತಾಕ್‌ ಅವರಿಗೆ ಅವಕಾಶ ನೀಡಿರುವ ಕ್ರಮ ಸರಿಯಲ್ಲ ಎಂದು ಹೇಳಿಕೆ ನೀಡಿದ್ದರು‌

ಇದನ್ನೂ ಓದಿ: ನಾಳೆ ನಾನು ಸಿಎಂ ಆಗುವಾಗ ಜೆಸಿಬಿ ಸಮೇತ ಪ್ರಮಾಣ ವಚನ ಸ್ವೀಕರಿಸುವೆ: ಯತ್ನಾಳ್

ಈ ಮೂಲಕ ಸಾರ್ವಜನಿಕವಾಗಿ ದಲಿತ ಹೆಣ್ಣು ಮಕ್ಕಳಿಗೆ ಹಾಗೂ ಇಡೀ ದಲಿತ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಗುತ್ತಿಗೆದಾರ, ದಲಿತ ಮುಖಂಡ ಮಲ್ಲಿಕಾರ್ಜುನ ಪೂಜಾರ ದೂರಿನನ್ವಯ ಕೇಸ್‌ ದಾಖಲಾಗಿದೆ.