ಧರ್ಮಸ್ಥಳದ ಶವಗಳ ಪ್ರಕರಣದಲ್ಲಿ ಎಸ್‌ಐಟಿ ತನಿಖೆಯ ದಿಕ್ಕು ಬದಲಾಗಿದೆ. ದೂರುದಾರ ಚಿನ್ನಯ್ಯನೇ ಪ್ರಮುಖ ಆರೋಪಿಯಾಗಿ ಗುರುತಿಸಲ್ಪಟ್ಟಿದ್ದು, ಸುಳ್ಳು ಸಾಕ್ಷ್ಯ ಮತ್ತು ಕೃತಕ ದಾಖಲೆಗಳ ಆರೋಪದಡಿ ತನಿಖೆ ನಡೆಯುತ್ತಿದೆ.

ಧರ್ಮಸ್ಥಳದ ನೂರಾರು ಶವಗಳ ಹೂತಿಟ್ಟ ಪ್ರಕರಣ ರಾಜ್ಯದಾದ್ಯಂತ ದೊಡ್ಡ ಸಂಚಲನ ಮೂಡಿಸಿರುವ ಬೆನ್ನಲ್ಲೇ, ಇದೀಗ ವಿಶೇಷ ತನಿಖಾ ದಳ (SIT) ತನಿಖೆಯ ದಿಕ್ಕು ಬದಲಿಸಿದೆ. ಈ ಹಿಂದೆ ದಾಖಲಾಗಿದ್ದ ಹಲವು ಸೆಕ್ಷನ್‌ಗಳನ್ನು ಕೈಬಿಟ್ಟಿರುವ ಎಸ್‌ಐಟಿ, ಇದೀಗ ಹೊಸ ಕಾನೂನು ಪ್ರಕ್ರಿಯೆಗಳ ಅಡಿಯಲ್ಲಿ ಆಳವಾದ ತನಿಖೆ ಆರಂಭಿಸಿದೆ. ಈ ಪ್ರಕರಣದಲ್ಲಿ ಅತಿ ಮುಖ್ಯ ಆರೋಪಿಯಾಗಿ (Accused No.1) ಗುರುತಿಸಲ್ಪಟ್ಟಿರುವ ಚಿನ್ನಯ್ಯ, ಹಿಂದೆ ದೂರುದಾರನಾಗಿಯೇ ಪ್ರಕರಣ ದಾಖಲಿಸಿದ್ದಾನೆ. ಆದರೆ, ಇದೀಗ ಎಸ್‌ಐಟಿ ಸಲ್ಲಿಸಿದ ಅಧಿಕೃತ ಮಾಹಿತಿಯ ಪ್ರಕಾರ, ಚಿನ್ನಯ್ಯ ದಾಖಲಿಸಿದ್ದ ದೂರು ಸಂಪೂರ್ಣ ಕಪೋ ಕಲ್ಪಿತ ಷಡ್ಯಂತ್ರ ಎಂದು ಹೊರಬಂದಿದೆ. ಇದರ ಆಧಾರದ ಮೇಲೆ ನ್ಯಾಯಾಲಯಕ್ಕೆ ವಿವರ ನೀಡಿದ ಎಸ್‌ಐಟಿ, ಈಗ ತನಿಖೆಯನ್ನು ಮತ್ತಷ್ಟು ಗಂಭೀರ ಹಂತಕ್ಕೆ ಕೊಂಡೊಯ್ದಿದೆ.

ಎಸ್‌ಐಟಿ ಬಳಸಿರುವ ಹೊಸ ಸೆಕ್ಷನ್‌ಗಳು

ಕೋರ್ಟ್ ಅನುಮತಿ ಪಡೆದು, ಎಸ್‌ಐಟಿ ಹತ್ತು ಬಿಎನ್‌ಎಸ್ (Bharatiya Nyaya Sanhita – ಭಾರತೀಯ ನ್ಯಾ.ಸಂಹಿತೆ) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದೆ. ಅವುಗಳಲ್ಲಿ ಪ್ರಮುಖವಾಗಿ:

BNS 336 – ಕೃತಕ ದಾಖಲೆ (Forgery)

ದಾಖಲೆ ಅಥವಾ ಎಲೆಕ್ಟ್ರಾನಿಕ್ ದಾಖಲೆಗಳನ್ನು ಕೃತಕವಾಗಿ ಸೃಷ್ಟಿಸಿದರೆ ಅಥವಾ ಬದಲಾವಣೆ ಮಾಡಿದರೆ ಇದು Forgery ಎಂದು ಪರಿಗಣಿಸಲಾಗುತ್ತದೆ.

ಸಾಮಾನ್ಯ Forgery → ಗರಿಷ್ಠ 2 ವರ್ಷ ಜೈಲು ಅಥವಾ ದಂಡ.

ಮೋಸದ ಉದ್ದೇಶದಿಂದ Forgery → ಗರಿಷ್ಠ 7 ವರ್ಷ ಜೈಲು + ದಂಡ.

ಹೆಸರು/ಕೀರ್ತಿ ಹಾಳು ಮಾಡಲು Forgery → ಗರಿಷ್ಠ 3 ವರ್ಷ ಜೈಲು + ದಂಡ.

ಸೆಕ್ಷನ್ 227–248 – ಸುಳ್ಳು ಸಾಕ್ಷಿ ಮತ್ತು ಸಂಬಂಧಿತ ಅಪರಾಧಗಳು

227 – ಸುಳ್ಳು ಸಾಕ್ಷಿ ನೀಡುವುದು: ಕಾನೂನಾತ್ಮಕವಾಗಿ ನಿಜ ಹೇಳಬೇಕಾದ ಸಂದರ್ಭದಲ್ಲಿ ಸುಳ್ಳು ಹೇಳಿಕೆ ನೀಡುವುದು ಅಪರಾಧ.

228 – ಸುಳ್ಳು ಸಾಕ್ಷಿ ಸೃಷ್ಟಿಸುವುದು: ಸುಳ್ಳು ದಾಖಲೆ ಸೃಷ್ಟಿಸಿ ಅದನ್ನು ನ್ಯಾಯಾಂಗದಲ್ಲಿ ಬಳಸುವ ಉದ್ದೇಶ ಅಪರಾಧ.

229 – ಸುಳ್ಳು ಸಾಕ್ಷಿಗೆ ಶಿಕ್ಷೆ:

ನ್ಯಾಯಾಂಗ ವಿಚಾರಣೆಯಲ್ಲಿ → ಗರಿಷ್ಠ 7 ವರ್ಷ ಜೈಲು + ₹10,000 ದಂಡ.

ನ್ಯಾಯಾಂಗೇತರ ಪ್ರಕರಣಗಳಲ್ಲಿ → ಗರಿಷ್ಠ 3 ವರ್ಷ ಜೈಲು + ₹5,000 ದಂಡ.

230 – ಮರಣದಂಡನೆ ಪ್ರಕರಣದಲ್ಲಿ ಸುಳ್ಳು ಸಾಕ್ಷಿ:

ಯಾರನ್ನಾದರೂ ಮರಣದಂಡನೆಗೆ ಗುರಿಮಾಡುವ ಉದ್ದೇಶದಿಂದ ಸುಳ್ಳು ಸಾಕ್ಷಿ ಕೊಟ್ಟರೆ → ಆಜೀವ ಶಿಕ್ಷೆ ಅಥವಾ 10 ವರ್ಷ ಕಠಿಣ ಕಾರಾಗೃಹ.

ಆ ಸುಳ್ಳು ಸಾಕ್ಷಿಯಿಂದ ನಿಜವಾಗಿಯೇ ಮರಣದಂಡನೆ ನಡೆದರೆ → ಅಪರಾಧಿಗೆ ಮರಣದಂಡನೆ ಕೂಡ ವಿಧಿಸಬಹುದು.

231 – ಆಜೀವ ಶಿಕ್ಷೆ/7 ವರ್ಷಕ್ಕಿಂತ ಹೆಚ್ಚು ಶಿಕ್ಷೆಯ ಪ್ರಕರಣಕ್ಕೆ ಸುಳ್ಳು ಸಾಕ್ಷಿ: ಇದೇ ಶಿಕ್ಷೆ ಸುಳ್ಳು ಸಾಕ್ಷಿದಾರನಿಗೂ ಅನ್ವಯವಾಗುತ್ತದೆ.

232 – ಸುಳ್ಳು ಸಾಕ್ಷಿ ಕೊಡಲು ಬೆದರಿಕೆ: ಗರಿಷ್ಠ 7 ವರ್ಷ ಜೈಲು + ದಂಡ.

233 – ಸುಳ್ಳು ಸಾಕ್ಷಿಯನ್ನು ಬಳಸುವುದು: ತಿಳಿದಿದ್ದರೂ ಬಳಸಿದರೆ, ನೀಡಿದವರಂತೆ ಶಿಕ್ಷೆ.

234 – ಸುಳ್ಳು ಪ್ರಮಾಣಪತ್ರ ನೀಡುವುದು: ಸುಳ್ಳು ಪ್ರಮಾಣಪತ್ರ ನೀಡಿದರೆ, ಸುಳ್ಳು ಸಾಕ್ಷಿಯ ಶಿಕ್ಷೆ.

235 – ಸುಳ್ಳು ಪ್ರಮಾಣಪತ್ರ ಬಳಸುವುದು: ಬಳಸಿದವರಿಗೂ ಅದೇ ಶಿಕ್ಷೆ.

236 – ಸುಳ್ಳು ಘೋಷಣಾ ದಾಖಲೆ: ಸುಳ್ಳು ಹೇಳಿಕೆ ಮಾಡಿದರೆ → ಶಿಕ್ಷೆ.

237 – ಸುಳ್ಳು ಘೋಷಣೆಯನ್ನು ಸಾಕ್ಷಿಯಾಗಿ ಬಳಸುವುದು: ತಿಳಿದುಕೊಂಡೂ ಬಳಸಿದರೆ → ಶಿಕ್ಷೆ.

238 – ಸಾಕ್ಷಿ ನಾಶಪಡಿಸುವುದು/ತಪ್ಪು ಮಾಹಿತಿ ನೀಡುವುದು:

ಮರಣದಂಡನೆ ಪ್ರಕರಣಗಳಲ್ಲಿ → ಗರಿಷ್ಠ 7 ವರ್ಷ ಜೈಲು + ದಂಡ.

ಆಜೀವ/10 ವರ್ಷ ಶಿಕ್ಷೆಯ ಪ್ರಕರಣಗಳಲ್ಲಿ → ಗರಿಷ್ಠ 3 ವರ್ಷ ಜೈಲು + ದಂಡ.

ತನಿಖೆಯ ಹೊಸ ದಿಕ್ಕು

ಎಸ್‌ಐಟಿ ನೀಡಿರುವ ವಿವರಗಳ ಪ್ರಕಾರ, ಈ ಪ್ರಕರಣದ ಮೂಲ ಉದ್ದೇಶವೇ ಜನರನ್ನು ತಪ್ಪುದಾರಿಗೆಳೆದು ಸಮಾಜದಲ್ಲಿ ಆತಂಕ ಮೂಡಿಸುವ ಪ್ರಯತ್ನ ಎಂದು ಹೊರಬಂದಿದೆ. ಸುಳ್ಳು ಸಾಕ್ಷಿ, ಕೃತಕ ದಾಖಲೆ, ಹಾಗೂ ಕಾನೂನುಬಾಹಿರ ಪ್ರಚಾರಗಳ ಮೂಲಕ ಪ್ರಕರಣವನ್ನು ರಾಜಕೀಯ/ಸಾಮಾಜಿಕವಾಗಿ ದುರುಪಯೋಗಪಡಿಸಿಕೊಳ್ಳುವ ಯತ್ನ ನಡೆದಿದೆ.

ಮುಂದಿನ ಹಂತ

ಕೋರ್ಟ್ ಅನುಮತಿ ಪಡೆದು ಎಸ್‌ಐಟಿ ಈಗ ಗಂಭೀರ ಹಂತದಲ್ಲಿ ತನಿಖೆ ನಡೆಸುತ್ತಿದೆ. ಚಿನ್ನಯ್ಯ ಹಾಗೂ ಇತರರ ವಿರುದ್ಧ ಈಗಾಗಲೇ ಸಾಕಷ್ಟು ಸುಳಿವುಗಳು ದೊರೆತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಧನಗಳು ಹಾಗೂ ದೊಡ್ಡ ಬಯಲಾತಗಳು ನಡೆಯುವ ಸಾಧ್ಯತೆ ಇದೆ. ಧರ್ಮಸ್ಥಳ ಪ್ರಕರಣ ಇದೀಗ ಸಾಮಾನ್ಯ ಕಾನೂನು ಪ್ರಕರಣವಲ್ಲ, ಬದಲಾಗಿ ಸಮಾಜದಲ್ಲಿ ಸುಳ್ಳು ಪ್ರಚಾರದ ಮೂಲಕ ಗಲಭೆ ಸೃಷ್ಟಿಸುವ ಒಂದು ಶಡ್ಯಂತ್ರ ಎಂಬುದಾಗಿ ಹೊರಬರುತ್ತಿದೆ.