ಧರ್ಮಸ್ಥಳ ಪ್ರಕರಣದ ಬಗ್ಗೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಮಂಜುನಾಥನ ಮಹಾಶಕ್ತಿಯನ್ನು ಯಾರೂ ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಅಪಪ್ರಚಾರ ಮಾಡುವವರು ಪ್ರತಿಫಲ ಅನುಭವಿಸುತ್ತಾರೆ ಎಂದು ಎಚ್ಚರಿಸಿದ್ದಾರೆ.

ಬೆಂಗಳೂರು: ಧರ್ಮಸ್ಥಳ ಪ್ರಕರಣದ ಬಗ್ಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ನಾಯಕ ಎಚ್.ಡಿ. ದೇವೇಗೌಡರು ಮೊದಲ ಬಾರಿಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. “ಮಂಜುನಾಥ ಮಹಾಶಕ್ತ ದೇವರು. ಅವರ ಬಗ್ಗೆ ಅಪಪ್ರಚಾರ ಮಾಡುವುದು ಸರಿಯಲ್ಲ. ಇಂತಹ ಅಪಪ್ರಚಾರ ಮಾಡುವವರೇ ಮುಂದೆ ಅದರ ಪ್ರತಿಫಲ ಅನುಭವಿಸುತ್ತಾರೆ. ಅಂತಿಮ ತೀರ್ಪು ಮಂಜುನಾಥನ ಅನುಗ್ರಹದಿಂದಲೇ ಒಳ್ಳೆಯದಾಗುತ್ತದೆ” ಎಂದು ದೇವೇಗೌಡರು ಹೇಳಿದ್ದಾರೆ.

“ಮಂಜುನಾಥನೇ ಎಲ್ಲಕ್ಕೂ ಉತ್ತರ” – ದೇವೇಗೌಡ

ಏಷ್ಯಾ ನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ದೇವೇಗೌಡರು, “ಈಗ ನಡೆಯುತ್ತಿರುವ ಎಲ್ಲ ಘಟನೆಗಳಿಗೆ ಮಂಜುನಾಥನೇ ಉತ್ತರ ಕೊಡುತ್ತಾರೆ. ಏನೇ ಏರುಪೇರುಗಳಾದರೂ ಅವು ತಾತ್ಕಾಲಿಕ. ಮಂಜುನಾಥನ ಶಕ್ತಿಯನ್ನು ಯಾರೂ ಕಡಿಮೆ ಮಾಡಲು ಸಾಧ್ಯವಿಲ್ಲ. ಸಮಾಜದಲ್ಲಿ ಎಲ್ಲ ರೀತಿಯ ಜನರಿರುತ್ತಾರೆ. ಆದ್ದರಿಂದ ನಾವು ಗಂಭೀರವಾಗಿ ಪ್ರಾರ್ಥನೆ ಮಾಡಬೇಕು. ಅಂತಿಮ ನಿರ್ಣಯ ದೇವರ ಕೈಯಲ್ಲಿದೆ” ಎಂದು ಸ್ಪಷ್ಟಪಡಿಸಿದರು.

“ಅಪಪ್ರಚಾರ ಮಾಡುವವರೇ ಮುಂದೆ ಕಷ್ಟ ಅನುಭವಿಸುತ್ತಾರೆ”

ಧರ್ಮಸ್ಥಳದ ಕುರಿತು ನಡೆಯುತ್ತಿರುವ ಚರ್ಚೆಗಳ ನಡುವೆ, ದೇವೇಗೌಡರು ಅಪಪ್ರಚಾರದ ವಿರುದ್ಧವಾಗಿ ಸ್ಪಷ್ಟವಾದ ಸಂದೇಶವನ್ನು ನೀಡಿದ್ದಾರೆ. “ಏನೇ ಏರುಪೇರು ಆದರೂ ಎಲ್ಲವೂ ತಾತ್ಕಾಲಿಕ ಅಂತಿಮ ಫಲಿತಾಂಶ ಇದೆಯಲ್ಲವೇ ಅದು ಅವನ ಅನುಗ್ರಹ ದಿಂದ ಒಳ್ಳೆಯದೇ ಆಗಲಿದೆ. ಮಂಜುನಾಥ ನ ಶಕ್ತಿ ಯನ್ನು ಯಾರೂ ಕಡಿಮೆ ಮಾಡಲು ಆಗಲ್ಲ.ಅಪ ಪ್ರಚಾರ ಮಾಡುವವರೇ ಮುಂದೆ ಕಷ್ಟ ಕ್ಕೆ ಸಿಲುಕುತ್ತಾರೆ ಕಾದು ನೋಡಿ ಇವತ್ತು ಅಪ ಪ್ರಚಾರ ಮಾಡುತ್ತಿರುವ ವರು ಮುಂದೆ ಪ್ರತಿಫಲ ಅನುಭವಿಸುತ್ತಾರೆ ಸಮಾಜದಲ್ಲಿ ಎಲ್ಲ ರೀತಿಯ ಜನ ಇದ್ದಾರೆ. ನಾವು ಗಂಭೀರ ವಾಗಿ ಪ್ರಾರ್ಥನೆ ಮಾಡಬೇಕು ಅಷ್ಟೇ ಅಂತಿಮ ತೀರ್ಮಾನ ನೀನೇ ಕೊಡಪ್ಪಾ ಅಂತಾ ಕೇಳಬೇಕು ಅಷ್ಟೇ ” ಎಂದು ದೇವೇಗೌಡರು ಎಚ್ಚರಿಸಿದರು.

“ಅಂತಿಮ ನಿರ್ಣಯ ದೇವರದು”

ಧರ್ಮಸ್ಥಳದ ಕುರಿತು ನಡೆಯುತ್ತಿರುವ ವಿಚಾರಗಳ ಅಂತ್ಯದಲ್ಲಿ ದೇವೇಗೌಡರು ಮತ್ತೊಮ್ಮೆ ಸ್ಪಷ್ಟ ಸಂದೇಶ ನೀಡಿದರು: “ನಾವು ಗಂಭೀರವಾಗಿ ಪ್ರಾರ್ಥಿಸಬೇಕು. ದೇವರೇ ಅಂತಿಮ ತೀರ್ಪು ಕೊಡುತ್ತಾರೆ. ಎಲ್ಲವೂ ಅವನ ಅನುಗ್ರಹದಿಂದಲೇ ನಡೆಯುತ್ತದೆ” ಎಂದು ಹೇಳಿದರು.

ಗಣೇಶ ಹಬ್ಬದ ಸಂಭ್ರಮದಲ್ಲಿ ದೇವೇಗೌಡ

ಈ ನಡುವೆ, ತಮ್ಮ ಮನೆಯಲ್ಲಿ ಪತ್ನಿ ಚೆನ್ನಮ್ಮ ದೇವೇಗೌಡರೊಂದಿಗೆ ಗಣೇಶ ಹಬ್ಬವನ್ನು ಆಚರಿಸಿದ ಮಾಜಿ ಪ್ರಧಾನಿ, ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದರು. ನಾಡಿನ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಿದ ದೇವೇಗೌಡರು, “ಗಣಪತಿಯ ಮೇಲಿನ ನಮ್ಮ ವಿಶ್ವಾಸವು ಕಳೆದ ಎಪ್ಪತ್ತು ವರ್ಷಗಳಿಂದ ಅಚಲವಾಗಿದೆ” ಎಂದರು.

ಗಣೇಶನ ಜನ್ಮಕಥೆ ನೆನೆಸಿದ ಮಾಜಿ ಪ್ರಧಾನಿ

ಪೂಜಾ ಸಂದರ್ಭದಲ್ಲಿ ದೇವೇಗೌಡರು ಗಣೇಶನ ಜನ್ಮಕಥೆಯನ್ನು ನೆನೆಸಿಕೊಂಡರು. “ಪಾರ್ವತಿ ದೇವಿ ಗಣೇಶನನ್ನು ಸೃಷ್ಟಿಸಿದರು. ತಂದೆ ಶಿವನ ಕೈಯಿಂದಲೇ ತಲೆ ಕಳೆದುಕೊಂಡ ಗಣೇಶನಿಗೆ ನಂತರ ಆನೆಯ ಮುಖ ದೊರಕಿತು. ಆತನಲ್ಲಿ ಅಪಾರ ಶಕ್ತಿ ನೆಲೆಸಿದೆ. ಅದೆ ಕಾರಣಕ್ಕೆ ಗಣೇಶನನ್ನು ಎಲ್ಲರೂ ವಿಘ್ನ ವಿನಾಶಕ ಎಂದು ಕರೆಯುತ್ತಾರೆ” ಎಂದು ವಿವರಿಸಿದರು.