Santosh Lad vs Pralhad Joshi: ಸಮೀಕ್ಷೆ ಹೆಸರಲ್ಲಿ ಸರ್ಕಾರ ಧರ್ಮ ಒಡೆಯುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಸಚಿವ ಸಂತೋಷ್ ಲಾಡ್ ತಿರುಗೇಟು ನೀಡಿದ್ದಾರೆ. ಧರ್ಮ ಒಡೆಯುತ್ತಿರುವುದು ಬಿಜೆಪಿ, ಅವರು ತಮ್ಮ ಮಕ್ಕಳನ್ನು ವಿದೇಶಕ್ಕೆ ಕಳುಹಿಸಿ ಬಡ ಹಿಂದೂ ಮಕ್ಕಳನ್ನು ಬೀದಿಗೆ ತರುತ್ತಾರೆ ಎಂದು ಆರೋಪಿಸಿದರು.

ಧಾರವಾಡ (ಅ.6): ಧರ್ಮವನ್ನು ಯಾರು ಒಡೆಯುತ್ತಿದ್ದಾರೆ? ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿ ನೀಡಿದ್ದು ಯಾರಿಗೆ? ಅದನ್ನು ಜೋಶಿ ಸಾಹೇಬರನ್ನೇ ಕೇಳಬೇಕು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿರುಗೇಟು ನೀಡಿದರು.

ಸಮೀಕ್ಷೆ ಹೆಸರಲ್ಲಿ ರಾಜ್ಯ ಸರ್ಕಾರ ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂಬ ಬಿಜೆಪಿ ನಾಯಕರ ಆರೋಪ ಸಂಬಂಧ ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಧರ್ಮ ಒಡೆಯುತ್ತಿರುವವರು ಬಿಜೆಪಿ. ಬಡ ಹಿಂದೂ ಮಕ್ಕಳನ್ನು ರಸ್ತೆಯಲ್ಲಿ ನಿಲ್ಲಿಸಿ ತಮ್ಮ ಮಕ್ಕಳನ್ನು ವಿದೇಶಕ್ಕೆ ಕಳುಹಿಸುತ್ತಾರೆ. ಹಿಂದೂ-ಮುಸ್ಲಿಂ ಜಗಳ ಹಚ್ಚುತ್ತಾರೆ. ಇವರಿಂದ ಯಾವ ಹಿಂದೂಗಳಿಗೆ ಲಾಭವಾಗಿದೆ ಎಂಬುದರ ಬಗ್ಗೆ ಚರ್ಚೆಯಾಗಲಿ ಎಂದರು.

ಇದನ್ನೂ ಓದಿ: ಸಮೀಕ್ಷೆಗೆ ವಿರೋಧ ಮಾಡಿದ್ರೆ ಅದು ಸಂವಿಧಾನಕ್ಕೆ ವಿರೋಧ: ಸಚಿವ ಕೃಷ್ಣಬೈರೇಗೌಡ

ಪ್ರಹ್ಲಾದ್ ಜೋಶಿಯವರ ತಲೆ ಸರಿ ಇದೆಯಾ?

ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯ ಗಣತಿಯನ್ನು ಜಾತಿ-ಜಾತಿಗಳನ್ನು ಒಡೆಯಲು ಮಾಡುತ್ತಿದೆ ಎಂದು ಹೇಳಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ತಲೆ ಸರಿ ಇದೆಯಾ ಎನ್ನುವುದನ್ನು ಕೇಳಿಕೊಳ್ಳಿ ಎಂದು ಕಿಡಿಕಾರಿದರು. ಸರ್ಕಾರ ಖಾತೆ ಬಗ್ಗೆ ಮಾಹಿತಿ ಕೇಳಿದರೆ ತಪ್ಪೇನು? ಈಗ ಕೇಂದ್ರ ಸರ್ಕಾರ ಇದನ್ನೆಲ್ಲ ಕೇಳುತ್ತಿಲ್ಲವೇ? ಇದರಿಂದಾಗಿ ಆರ್ಥಿಕ ಸ್ಥಿತಿ ಹೇಗಿದೆ ಎನ್ನುವುದು ಗೊತ್ತಾಗಲಿದೆ ಎಂದರು.