ಪೇಸ್‌ಮೇಕರ್ ಅಳವಡಿಕೆ ಬಳಿಕ ವಿಶ್ರಾಂತಿಯಲ್ಲಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತೆ ರಾಜಕೀಯವಾಗಿ ಸಕ್ರಿಯರಾಗಿದ್ದಾರೆ. ರಾಜ್ಯದಲ್ಲಿ ಸಚಿವ ಸಂಪುಟ ಪುನರ್ ರಚನೆಯಂತಹ ಮಹತ್ವದ ಬೆಳವಣಿಗೆಗಳ ನಡುವೆಯೇ ಅವರು ದೆಹಲಿಗೆ ತೆರಳಿರುವುದು ಕುತೂಹಲ ಮೂಡಿಸಿದೆ.
ಬೆಂಗಳೂರು (ಅ.10): ಪೇಸ್‌ಮೇಕರ್ ಅಳವಡಿಸಿದ್ದಕ್ಕಾಗಿ ವಿಶ್ರಾಂತಿಯಲ್ಲಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮತ್ತೆ ರಾಜಕೀಯವಾಗಿ ಸಕ್ರಿಯರಾಗಿದ್ದಾರೆ. ಗುರುವಾರ ಮಧ್ಯಾಹ್ನ ದೆಹಲಿಗೆ ತೆರಳಿದ್ದಾರೆ. ರಾಜ್ಯದಲ್ಲಿ ಸಚಿವ ಸಂಪುಟ ಪುನರ್ ರಚನೆ ಸದ್ದು, ಮುಖ್ಯಮಂತ್ರಿಗಳ ಔತಣಕೂಟಕ್ಕೆ ಸಚಿವರಿಗೆ ಆಹ್ವಾನದ ಬೆಳವಣಿಗೆ ನಡುವೆಯೇ ಖರ್ಗೆ ಅವರು ದೆಹಲಿಗೆ ಭೇಟಿ ನೀಡಿದ್ದಾರೆ.
ಪೇಸ್‌ಮೇಕರ್ ಅಳವಡಿಕೆ ಬಳಿಕ ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿಯೇ ಖರ್ಗೆ ಅವರು ವಿಶ್ರಾಂತಿಯಲ್ಲಿದ್ದರು. ಈ ವೇಳೆ ಯಾವುದೇ ಅಧಿಕೃತ ಕಾರ್ಯಕ್ರಮಗಳಿಲ್ಲದೇ ಕೇವಲ ಆರೋಗ್ಯ ವಿಚಾರಿಸುವವರನ್ನು ಭೇಟಿಯಾಗುತ್ತಿದ್ದರು. ಸಿಜೆಐ ಗವಾಯಿ ಅವರಿಗೆ ಶೂ ಎಸೆದಿದ್ದ ಬಗ್ಗೆ ಬುಧವಾರ ಮಾತನಾಡಿದ್ದ ಖರ್ಗೆ ಅವರು, ಅಂದೇ ಬಿಹಾರ ಸೀಟು ಹಂಚಿಕೆ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ:CJI ಮೇಲೆ ಶೂ ಎಸೆದವನ ವಿರುದ್ಧ ಕ್ರಮವಾಗಲಿ: ಖರ್ಗೆ ವಾಗ್ದಾಳಿ
ಗುರುವಾರ ಪೂರ್ಣ ಪ್ರಮಾಣದಲ್ಲಿ ಪಕ್ಷದ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ರಾಜ್ಯದಲ್ಲಿ ಸಂಪುಟ ಪುನರ್‌ರಚನೆ, ಸಚಿವರ ಔತಣಕೂಟ, ಎಸ್ಸಿ-ಎಸ್ಟಿ ಸಚಿವರ ರಹಸ್ಯ ಸಭೆ ಸೇರಿದಂತೆ ಸಾಲ ಸಾಲು ಬೆಳವಣಿಗೆ ನಡುವೆ ದೆಹಲಿಗೆ ತೆರಳಿದ್ದಾರೆ.
- ಪೂರ್ಣ ಪ್ರಮಾಣದಲ್ಲಿ ರಾಜಕೀಯದಲ್ಲಿ ಭಾಗಿ
- ಹಲವು ಮಹತ್ವದ ಬೆಳವಣಿಗೆ ನಡುವೆ ಭೇಟಿ
