2025ರ ಯುಎಸ್ ಓಪನ್ ಫೈನಲ್‌ನಲ್ಲಿ ಕಾರ್ಲೋಸ್ ಆಲ್ಕರಜ್ ಯಾನಿಕ್ ಸಿನ್ನರ್‌ರನ್ನು ಸೋಲಿಸಿ ಪ್ರಶಸ್ತಿ ಗೆದ್ದಿದ್ದಾರೆ. ಇದರೊಂದಿಗೆ ವಿಶ್ವ ಶ್ರೇಯಾಂಕದಲ್ಲಿ ನಂ.1 ಸ್ಥಾನವನ್ನೂ ಪಡೆದಿದ್ದಾರೆ. 22ನೇ ವಯಸ್ಸಿನಲ್ಲಿ ಆಲ್ಕರಜ್‌ಗೆ ಇದು ಆರನೇ ಗ್ರ್ಯಾಂಡ್ ಸ್ಲ್ಯಾಮ್.

2025ರ ವಿಂಬಲ್ಡನ್ ಟೂರ್ನಿಯಲ್ಲಿ ಇಟಲಿಯ ಯಾನಿಕ್ ಸಿನ್ನರ್ ಸ್ಪ್ಯಾನಿಷ್ ಆಟಗಾರ ಕಾರ್ಲೋಸ್ ಆಲ್ಕರಜ್‌ರನ್ನು ಸೋಲಿಸಿ ಪ್ರಶಸ್ತಿ ಗೆದ್ದಿದ್ದು ನಿಮಗೆ ನೆನಪಿರಬಹುದು. ಈ ಇಬ್ಬರು ಆಟಗಾರರು ಮತ್ತೊಮ್ಮೆ ಯುಎಸ್ ಓಪನ್ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದರು, ಆದರೆ ಈ ಬಾರಿ ಸ್ಪೇನ್‌ನ ಆಲ್ಕರಜ್‌ ಇಟಲಿಯ ಸಿನ್ನರ್‌ರನ್ನು ಸೋಲಿಸಿ ಯುಎಸ್‌ ಓಪನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇದರ ಜತೆಗೆ ವಿಶ್ವ ಶ್ರೇಯಾಂಕದಲ್ಲಿ ನಂ. 1 ಸ್ಥಾನವನ್ನೂ ಪಡೆಯುವಲ್ಲಿ ಸ್ಪೇನ್ ಯುವ ಟೆನಿಸಿಗ ಯಶಸ್ವಿಯಾಗಿದ್ದಾರೆ. ಈ ಪಂದ್ಯವನ್ನು ವೀಕ್ಷಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಹಾಜರಿದ್ದರು, ಇದರಿಂದಾಗಿ ಪುರುಷರ ಯುಎಸ್ ಓಪನ್ ಫೈನಲ್ 50 ನಿಮಿಷ ತಡವಾಗಿ ಆರಂಭವಾಯಿತು. ಕಾರ್ಲೋಸ್ ಆಲ್ಕರಜ್‌ ಮತ್ತು ಯಾನಿಕ್ ಸಿನ್ನರ್ ನಡುವಿನ ಈ ಅದ್ಭುತ ಪಂದ್ಯದ ಬಗ್ಗೆ ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್‌

ಕಾರ್ಲೋಸ್ ಆಲ್ಕರಜ್‌ vs ಯಾನಿಕ್ ಸಿನ್ನರ್

ಯುಎಸ್ ಓಪನ್ 2025ರ ಫೈನಲ್ ಪಂದ್ಯದ ಆರಂಭದಿಂದಲೂ ಕಾರ್ಲೋಸ್ ಆಲ್ಕರಜ್‌ ಆಕ್ರಮಣಕಾರಿಯಾಗಿ ಆಡುತ್ತಿದ್ದರು. ಮೊದಲ ಸೆಟ್ ಅನ್ನು 6-2ರಿಂದ ಗೆದ್ದು ಅದ್ಭುತ ಆರಂಭ ಮಾಡಿದರು. ಆದರೆ ಯಾನಿಕ್ ಸಿನ್ನರ್ ಕೂಡ ಹಿಂದೆ ಬೀಳಲಿಲ್ಲ. ಎರಡನೇ ಸೆಟ್‌ನಲ್ಲಿ ಅವರು 6-3ರಿಂದ ಗೆದ್ದು ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಿದರು. ಮೂರನೇ ಸೆಟ್‌ನಲ್ಲಿ ಆಲ್ಕರಜ್‌ ಸಿನ್ನರ್‌ರನ್ನು 6-1ರಿಂದ ಸೋಲಿಸಿದರು. ಹೀಗಾಗಿ ನಾಲ್ಕನೇ ಸೆಟ್ ನಿರ್ಣಾಯಕವಾಯಿತು, ಅದನ್ನು ಅಲ್ಕರಾಜ್ 6-4ರಿಂದ ಗೆದ್ದು ಯುಎಸ್ ಓಪನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಕಾರ್ಲೋಸ್ ಅಲ್ಕರಾಜ್‌ ಅವರಿಗೆ ಇದು ಎರಡನೇ ಯುಎಸ್ ಓಪನ್ ಪ್ರಶಸ್ತಿ. ಇದಕ್ಕೂ ಮೊದಲು ಅವರು 2022ರಲ್ಲಿ ಈ ಪ್ರಶಸ್ತಿಯನ್ನು ಗೆದ್ದಿದ್ದರು. ಈ ಲೀಗ್‌ನ ಸೆಮಿಫೈನಲ್‌ನಲ್ಲಿ ಅವರು ದಿಗ್ಗಜ ಆಟಗಾರ ನೊವಾಕ್ ಜೊಕೊವಿಕ್‌ರನ್ನು ಸೋಲಿಸಿದ್ದರು.

Scroll to load tweet…

ಚಿಕ್ಕ ವಯಸ್ಸಿನಲ್ಲಿ 6 ಗ್ರ್ಯಾಂಡ್ ಸ್ಲ್ಯಾಮ್ ಗೆದ್ದಎರಡನೇ ಆಟಗಾರ

ಕಾರ್ಲೋಸ್ ಆಲ್ಕರಜ್‌ ಯುಎಸ್ ಓಪನ್ 2025 ಗೆಲ್ಲುವುದರೊಂದಿಗೆ ವಿಶ್ವ ಶ್ರೇಯಾಂಕದಲ್ಲಿ ನಂ. 1 ಸ್ಥಾನ ಪಡೆದಿದ್ದಾರೆ. 22ನೇ ವಯಸ್ಸಿನಲ್ಲಿ ಆಲ್ಕರಜ್‌ ಅವರಿಗೆ ಇದು ಆರನೇ ಗ್ರ್ಯಾಂಡ್ ಸ್ಲ್ಯಾಮ್. ಈ ಮೂಲಕ ಅವರು ಟೆನಿಸ್‌ನ ಪ್ರಸಿದ್ಧ ಆಟಗಾರ ಬ್ಯೋರ್ನ್ ಬೋರ್ಗ್ ನಂತರ ಅತಿ ಚಿಕ್ಕ ವಯಸ್ಸಿನಲ್ಲಿ 6 ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ಎರಡನೇ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಮೊದಲು ಬ್ಯೋರ್ನ್ ಬೋರ್ಗ್ 22 ವರ್ಷ 32 ದಿನಗಳ ವಯಸ್ಸಿನಲ್ಲಿ 1978ರಲ್ಲಿ ವಿಂಬಲ್ಡನ್ ಗೆಲ್ಲುವ ಮೂಲಕ 6ನೇ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದಿದ್ದರು. 

Scroll to load tweet…

ಇದೀಗ ಎರಡನೇ ಸ್ಥಾನದಲ್ಲಿ ಕಾರ್ಲೋಸ್ ಅಲ್ಕರಾಜ್ ಇದ್ದಾರೆ, ಅವರು 22 ವರ್ಷ 125 ದಿನಗಳ ವಯಸ್ಸಿನವರಾಗಿದ್ದು ಯುಎಸ್ ಓಪನ್‌ನಲ್ಲಿ ತಮ್ಮ 6ನೇ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದಿದ್ದಾರೆ. ಮೂರನೇ ಸ್ಥಾನದಲ್ಲಿ ರಾಫೆಲ್ ನಡಾಲ್ ಇದ್ದಾರೆ, ಅವರು 22 ವರ್ಷ 243 ದಿನಗಳಲ್ಲಿ ಆಸ್ಟ್ರೇಲಿಯನ್ ಓಪನ್ 2009ರಲ್ಲಿ 6ನೇ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದಿದ್ದರು. ನಾಲ್ಕನೇ ಸ್ಥಾನದಲ್ಲಿ ಮ್ಯಾಟ್ಸ್ ವಿಲ್ಯಾಂಡರ್ ಇದ್ದಾರೆ, ಅವರು 1988ರ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ 23 ವರ್ಷ 288 ದಿನಗಳಲ್ಲಿ 6ನೇ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದಿದ್ದರು.