ಸ್ಯಾಂಡಲ್ ವುಡ್ ನಟಿ ಸಂಗೀತಾ ಭಟ್ ಸರ್ಜರಿಗೊಳಗಾಗಿದ್ದಾರೆ. ಸಂಗೀತಾ ಭಟ್ ಆಸ್ಪತ್ರೆಯಲ್ಲಿರುವ ಕೆಲ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ತಮಗೇನಾಗಿತ್ತು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ.
ಸ್ಯಾಂಡಲ್ ವುಡ್ ನಟಿ ಸಂಗೀತಾ ಭಟ್ (Sangeeta Bhat) ಆರೋಗ್ಯದಲ್ಲಿ ಏರುಪೇರಾಗಿದೆ. ಸಂಗೀತಾ ಭಟ್ ಈಗಾಗ್ಲೇ ಆಪರೇಷನ್ ಗೆ ಒಳಗಾಗಿದ್ದು, ಸದ್ಯ ಅವ್ರ ಆರೋಗ್ಯ ಸುಧಾರಿಸ್ತಿದೆ. ಈ ವಿಷ್ಯವನ್ನು ಸಂಗೀತಾ ಭಟ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಗರ್ಭಾಶಯದಲ್ಲಿ ಪಾಲಿಪ್ ( ಗಡ್ಡೆ) ಇರುವುದು ಪತ್ತೆಯಾಗಿತ್ತು. ನೋವು ಹೆಚ್ಚಾದ ತಕ್ಷಣ ಆಸ್ಪತ್ರೆ ಸೇರಿದ್ದ ನಟಿಗೆ ಆಪರೇಷನ್ ಆಗಿದ್ದು, ಈಗ ಚೇತರಿಸಿಕೊಳ್ತಿದ್ದೇನೆ ಎಂದು ಸಂಗೀತಾ ತಮ್ಮ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ.
ಸಂಗೀತಾ ಭಟ್ ಆರೋಗ್ಯದಲ್ಲಿ ಏರುಪೇರು :
ಸಂಗೀತಾ ಭಟ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಏನಾಗಿತ್ತು, ಯಾವೆಲ್ಲ ಚಿಕಿತ್ಸೆ ನಡೆದಿದೆ, ಅದ್ರಿಂದ ಆದ ಸೈಡ್ ಎಫೆಕ್ಟ್ ಏನು, ಮಹಿಳೆಯರು ಏನೆಲ್ಲ ಎಚ್ಚರಿಗೆ ತೆಗೆದುಕೊಳ್ಬೇಕು ಎಂಬುದನ್ನು ಬರೆದಿದ್ದಾರೆ. ಅಷ್ಟೇ ಅಲ್ಲ ಬೆಡ್ ಮೇಲೆ ಮಲಗಿರುವ ಕೆಲ ಫೋಟೋಗಳನ್ನು ಸಂಗೀತಾ ಹಂಚಿಕೊಂಡಿದ್ದಾರೆ. ಸಂಗೀತಾ ಭಟ್ ಪತಿ ಸುದರ್ಶನ್ ರಂಗಪ್ರಸಾದ್ ಕೂಡ ಆಸ್ಪತ್ರೆಯಲ್ಲಿದ್ದು, ಸಂಗೀತಾಗೆ ಧೈರ್ಯ ತುಂಬ್ತಿದ್ದಾರೆ.
ಸಂಗೀತಾ ಭಟ್ ಪೋಸ್ಟ್ ಪ್ರಕಾರ, ಸಂಗೀತಾ ಹಿಸ್ಟರೊಸ್ಕೋಪಿಕ್ ಪಾಲಿಪೆಕ್ಟಮಿ (hysteroscopic polypectomy) ಎಂಬ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇದನ್ನು ನನಗೆ ಸರಿಯಾಗಿ ಉಚ್ಚರಿಸಲು ಬರ್ಲಿಲ್ಲ, ಆದ್ರೆ ಇದ್ರಿಂದ ತುಂಬಾ ಕಲಿತಿದ್ದೇನೆ ಎಂದು ಸಂಗೀತಾ ಬರೆದುಕೊಂಡಿದ್ದಾರೆ. ಆರಂಭದಲ್ಲಿ ಸಂಗೀತಾ ಭಟ್ ಅವರಿಗೆ ಗರ್ಭಾಶಯದಲ್ಲಿ 1.75 ಸೆಂ.ಮೀ. ಗಾತ್ರದ ಪಾಲಿಪ್ ಇರುವುದು ಪತ್ತೆಯಾಗಿತ್ತು. ಗರ್ಭಾಶಯದೊಳಗೆ ಬೆಳೆಯುವ ಇದನ್ನು ವೈದ್ಯಕೀಯ ಭಾಷೆಯಲ್ಲಿ ಗೆಡ್ಡೆ ಎಂದು ಕರೆಯುತ್ತಾರೆ. ಇದು ಭಾರೀ ರಕ್ತಸ್ರಾವ, ಮಾರಕ ನೋವು, ಅನಿಯಮಿತ ಪಿರಿಯಡ್ಸ್ ಮತ್ತು ಹಾರ್ಮೋನ್ ಏರುಪೇರು, ಮೊಡವೆ, ತೂಕ ಏರಿಕೆ, ವಿಪರೀತ ಕೂದಲು ಉದುರುವಿಕೆ ಸೇರಿದಂತೆ ಅನೇಕ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ನೀಡುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಸಮಸ್ಯೆ ಉಲ್ಬಣಗೊಳ್ಳುತ್ತದೆ.
ಕೊನೆಗೂ ನನಸಾಯ್ತು ಬಹುದಿನಗಳ ಕನಸು...ಮಂತ್ರ ಮಾಂಗಲ್ಯ ಪದ್ಧತಿಯಂತೆ ನವಜೀವನಕ್ಕೆ ಕಾಲಿಟ್ಟ ಸುಹಾನಾ -ನಿತಿನ್
ಸಂಗೀತಾ ಭಟ್ ಕೆಲ್ಸದ ಕಾರಣ, ಚಿಕಿತ್ಸೆಯನ್ನು ಮುಂದೂಡಿದ್ದರು. ಇದ್ರಿಂದ ಗಡ್ಡೆಯ ಬೆಳವಣಿಗೆ ವೇಗ ಪಡೆದಿತ್ತು. ಅಂತಿಮವಾಗಿ ಒಂದು ತಿಂಗಳ ನಂತ್ರ ಸಂಗೀತಾ ಭಟ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಆರೋಗ್ಯ ಕಾಯುವುದಿಲ್ಲ ಎಂಬುದು ನನ್ನ ಅರಿವಿಗೆ ಬಂದಿದೆ. ನಮ್ಮ ದೇಹವನ್ನು ಕೇಳುವುದಕ್ಕಿಂತ ಮುಖ್ಯವಾದುದು ಯಾವುದೂ ಇಲ್ಲ ಎಂಬುದು ಅರ್ಥವಾಗಿದೆ ಎಂದು ಸಂಗೀತಾ ಬರೆದುಕೊಂಡಿದ್ದಾರೆ.
ಸಂಗೀತಾ ಭಟ್ ತಮ್ಮ ಪೋಸ್ಟ್ ಮುಂದುವರೆಸಿ, ವೈದ್ಯರು ನೀಡಿದ ಬೆಂಬಲಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೈದ್ಯರು ನನ್ನನ್ನು ಹೆದರಿಸದೆ ನನಗೆ ಎಲ್ಲವನ್ನು ಅರಿಯಾಗಿ ವಿವರಿಸಿದರು. ಇದ್ರಿಂದ ಎಲ್ಲವನ್ನೂ ನಿಭಾಯಿಸಲು ಸಾಧ್ಯವಾಯ್ತು ಎಂದಿದ್ದಾರೆ. ಆಪರೇಷನ್ ದಿನ ಕೂಡ ಸಂಗೀತಾ ಭಟ್ ಸಾಕಷ್ಟು ಸಮಸ್ಯೆ ಎದುರಿಸಿದ್ದಾರೆ. ಅವರಿಗೆ ನೀಡಿದ ಅನಸ್ತೇಶಿಯಾದಿಂದ ಗಂಟಲು ಮತ್ತು ಎದೆಯಲ್ಲಿ ಊತ ಉಂಟಾಗಿತ್ತು. ದೀರ್ಘ ಸಮಯ ಸಂಗೀತಾ ಎಚ್ಚರಗೊಂಡಿರಲಿಲ್ಲ. ಕೆಲ ದಿನ ನೀರು ನುಂಗುವುದು ಅವರಿಗೆ ಸವಾಲಾಗಿತ್ತು.
ಅಸ್ವಸ್ಥತೆ ಮತ್ತು ನೋವು, ಪೆಲ್ವಿಕ್ ಪ್ರದೇಶದಲ್ಲಿ ತೀವ್ರವಾದ ಸೆಳೆತ, ಶಸ್ತ್ರಚಿಕಿತ್ಸೆಯ ನಂತರ ಆಂತರಿಕ ರಕ್ತಸ್ರಾವ ಮತ್ತು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಪಾಲಿಪ್ 2.5 ಸೆಂ.ಮೀ ಇದೆ ಎಂಬುದನ್ನು ತಿಳಿದ ನಂತರ, ಈ ಇಡೀ ಪ್ರಕ್ರಿಯೆಯು ನನ್ನ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯಕ್ಕೆ ಬಹಳಷ್ಟು ಹಾನಿಯನ್ನುಂಟುಮಾಡಿತು ಎಂದು ಸಂಗೀತಾ ಭಟ್ ಹೇಳಿಕೊಂಡಿದ್ದಾರೆ.
ನನ್ನ ಪತಿ ನನ್ನ ಆಧಾರಸ್ತಂಭ :
ಎಲ್ಲವನ್ನೂ ನಾನು ಧೈರ್ಯವಾಗಿ ಎದುರಿಸಲು ಕಾರಣವಾಗಿದ್ದು ನನ್ನ ಪತಿ ಸುದರ್ಶನ್. ನನ್ನ ಪಕ್ಕದಲ್ಲಿ ನನ್ನ ಕೈಗಳನ್ನು ಹಿಡಿದುಕೊಂಡಿದ್ದರು. ಪ್ರತಿ ಸ್ಕ್ಯಾನ್, ಪ್ರತಿ ಆತಂಕದ ರಾತ್ರಿ ಮತ್ತು ಪ್ರತಿ ದುರ್ಬಲ ಕ್ಷಣದಲ್ಲಿ ಅವರು ಅಚಲ ಶಕ್ತಿ ಮತ್ತು ಪ್ರೀತಿಯಿಂದ ನನ್ನೊಂದಿಗೆ ನಿಂತರು. ಪ್ರೀತಿ ನಿಮ್ಮ ಪಕ್ಕದಲ್ಲಿ ನಿಂತಾಗ ಗುಣಪಡಿಸುವುದು ನಿಜವಾಗಿಯೂ ಸುಲಭವಾಗುತ್ತದೆ ಎಂದಿದ್ದಾರೆ.
Bigg Boss ಮನೆಯಲ್ಲಿರೋ ನಟಿ ವಿರುದ್ಧ FIR: ದೊಡ್ಮನೆಗೆ ಪೊಲೀಸರ ಎಂಟ್ರಿ? ಅರೆಸ್ಟ್ ಆಗ್ತಾರಾ ಸ್ಪರ್ಧಿ?
ಬಯಾಪ್ಸಿಗೆ ತುಂಬಾ ಸಮಯ ತೆಗೆದುಕೊಂಡಿತು. ದಿನಗಳು ವರ್ಷಗಳಂತೆ ಭಾಸವಾಯಿತು. ಈಗ ನಾವು ನಿರಾಳರಾಗಿದ್ದೇನೆ. ನಮ್ಮನ್ನು ರಕ್ಷಿಸುವ ಎಲ್ಲಾ ಶಕ್ತಿಗಳಿಗೆ ನಾವು ಧನ್ಯವಾದ ಹೇಳುತ್ತೇನೆ. ಆದರೆ ಇದು ಇಲ್ಲಿಗೆ ನಿಲ್ಲುವುದಿಲ್ಲ. ಪ್ರತಿ 6-8 ತಿಂಗಳಿಗೊಮ್ಮೆ ಫಾಲೋ ಅಪ್ ಸ್ಕ್ಯಾನ್ಗಳು ಕಡ್ಡಾಯವಾಗಿರುತ್ತವೆ. ನಂತರ ಜೀವನಶೈಲಿ ಬದಲಾವಣೆ ಕಡ್ಡಾಯ ಎಂದಿದ್ದಾರೆ.
ಮಹಿಳೆಯರಿಗೆ ಸಲಹೆ ನೀಡಿದ ಸಂಗೀತಾ ಭಟ್:
ಅನಿಯಮಿತ ರಕ್ತಸ್ರಾವ, ನೋವಿನ ಪಿರಿಯಡ್, ಹಾರ್ಮೋನುಗಳ ಏರುಪೇರುಗಳನ್ನು ನಿರ್ಲಕ್ಷಿಸಬೇಡಿ. ನಿಮ್ಮ ಕುಟುಂಬ ಅಥವಾ ಸ್ನೇಹಿತರು ಇದು ಸಾಮಾನ್ಯ ಎಂದು ಹೇಳಿದ್ರೂ ಅಥವಾ ನಿಮಗನ್ನಿಸಿದ್ರೂ ನೀವು ಅದನ್ನು ನಿರ್ಲಕ್ಷ್ಯ ಮಾಡ್ಬೇಡಿ. ಇದು ಇಡೀ ದೇಹದ ವ್ಯವಸ್ಥಿತ ಸಮಸ್ಯೆಯಾಗಿದ್ದು, ಸಹಾಯವನ್ನು ಕೇಳಲು ಹಿಂಜರಿಯಬೇಡಿ. ನೀವು ತುಂಬಾ ಬ್ಯುಸಿಯಾಗಿದ್ದೀರಿ ಎಂಬ ಕಾರಣಕ್ಕೆ ನಿಮ್ಮ ತಪಾಸಣೆಗಳನ್ನು ಮುಂದೂಡಬೇಡಿ. ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚುವುದು ಭಯವಲ್ಲ, ಅದು ಸ್ವಾಭಿಮಾನ, ಆತ್ಮ ಪ್ರೀತಿ ಎಂದು ಸಂಗೀತಾ ದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ.
