ಮನೋಜ್ ನಟನೆಯ ಮೂರನೇ ಚಿತ್ರ ಗಾರ್ಡನ್‌ಗೆ ಮುಹೂರ್ತ ಆಗಿದೆ. ಶಾಸಕ ಸಮೃದ್ಧಿ ಮಂಜುನಾಥ್ ಕ್ಯಾಮೆರಾ ಸ್ವಿಚ್ ಆನ್ ಮಾಡಿದರೆ, ನಿರ್ದೇಶಕ ದಿನಕರ್ ತೂಗುದೀಪ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು.
ಮನೋಜ್ ನಟನೆಯ ಮೂರನೇ ಚಿತ್ರ ಗಾರ್ಡನ್‌ಗೆ ಮುಹೂರ್ತ ಆಗಿದೆ. ಶಾಸಕ ಸಮೃದ್ಧಿ ಮಂಜುನಾಥ್ ಕ್ಯಾಮೆರಾ ಸ್ವಿಚ್ ಆನ್ ಮಾಡಿದರೆ, ನಿರ್ದೇಶಕ ದಿನಕರ್ ತೂಗುದೀಪ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. ಆರ್ಯನ್ ಮಹೇಶ್ ನಿರ್ದೇಶನದ ಚಿತ್ರವನ್ನು ಮುನಿರಾಜು ನಿರ್ಮಿಸುತ್ತಿದ್ದಾರೆ. ಮನೋಜ್, ‘ಕಂಟೆಂಟ್ ಇದ್ದರೆ ಮಾತ್ರ ಜನ ಸಿನಿಮಾ ನೋಡುತ್ತಾರೆ. ಅಂಥ ಕಂಟೆಂಟ್ ‘ಗಾರ್ಡನ್’ ಚಿತ್ರದಲ್ಲಿದೆ. ಕಮರ್ಷಿಯಲ್, ಮಾಸ್ ಸಿನಿಮಾಗಳ ಆಚೆಗೆ ಇದೊಂದು ಬೇರೆ ರೀತಿಯ ಕತೆ’ ಎಂದರು.
ಆರ್ಯನ್ ಮಹೇಶ್, ‘ಪೌರ ಕಾರ್ಮಿಕರ ಕತೆಯನ್ನು ಹೇಳುವ ಸಿನಿಮಾ. ಇಲ್ಲಿ ಸಂಬಂಧಗಳು ಇವೆ. ಸಣ್ಣ ಮಟ್ಟದಲ್ಲಿ ಮಾಫಿಯಾ ಕೂಡ ಇದೆ. ಚಿತ್ರದಲ್ಲಿ ಶೀರ್ಷಿಕೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎನ್ನುವ ಹೆಸರು ಬಳಸಿಕೊಳ್ಳಲು ಅನುಮತಿ ತೆಗೆದುಕೊಂಡಿದ್ದೇವೆ’ ಎಂದು ಹೇಳಿದರು. ಅನುಪ್ರೇಮ, ಸೋನಂ ರೈ ಚಿತ್ರದ ನಾಯಕಿಯರು.
ನೆನೆಸಿಕೊಂಡ್ರೆ ಎಮೋಷನಲ್ ಆಗ್ತೀನಿ
ಈ ವೇಳೆ ನಟ ದರ್ಶನ್ ಪ್ರಕರಣದ ಬಗ್ಗೆ ಮನೋಜ್ ಮಾತಾಡಿದ್ದಾರೆ. ವಿಷಕೊಡಿ ಅಂತಾ ದರ್ಶನ್, ನ್ಯಾಯಾಧೀಶರ ಮುಂದೆ ಕೇಳಿರೋ ವಿಚಾರದ ಬಗ್ಗೆ ಮನೋಜ್ ಬೇಸರ ವ್ಯಕ್ತಪಡಿಸಿದ್ದಾರೆ. ವಿಷಕೊಡಿ ಎನ್ನುವ ವಿಚಾರ ಕೇಳಿ ತುಂಬಾ ಬೇಜಾರಾಯ್ತು. ಪರಿಸ್ಥಿತಿ ಏನಾಗ್ತಿದೆ ಅಂತಾ ಗೊತ್ತಾಗ್ತಿಲ್ಲ. ಅಲ್ಲಿ ಏನು ನಡೀತಿದೆ ಅಂತಾನೂ ಗೊತ್ತಿಲ್ಲ. ಆ ಪರಿಸ್ಥಿತಿ ಎದುರಿಸ್ತಿರೋದು ದರ್ಶನ್ ಸರ್. ಎಲ್ಲಾ ಒಳ್ಳೆಯದಾಗಲಿ ಅಂತಾ ಕೇಳಿಕೊಳ್ತೀನಿ. ಅದೆಲ್ಲ ನೆನೆಸಿಕೊಂಡ್ರೆ ಎಮೋಷನಲ್ ಆಗ್ತೀನಿ. ಅವರ ಹೆಸರು ನೆನಸಿಕೊಂಡು ಮಾತಾಡೋಕೆ ಆಗೊಲ್ಲ, ಭಾವುಕರಾಗಿ ಬಿಡ್ತೀವಿ. ಪ್ರತಿ ಸಲ ಮನೆಗೆ ಹೋದಾಗ ಬರೀ ಸಿನಿಮಾಗಳ ಬಗ್ಗೆ ಮಾತಾಡ್ತಿದ್ವಿ.
ನಮಗೆಲ್ಲ ಇಂಡಸ್ಟ್ರಿಗೆ ಬರೋವಾಗ ತುಂಬಾ ಮಾರ್ಗದರ್ಶನ ನೀಡಿದ್ದಾರೆ ದರ್ಶನ್ ಸರ್. ಈಗ ಈ ತರಹ ನೋಡೋಕೆ ತುಂಬಾ ಕಷ್ಟ ಆಗ್ತಿದೆ ಎಂದಿದ್ದಾರೆ. ನಾಯಕ ನಟರಾಗಿ ಗುರ್ತಿಸಿಕೊಳ್ಳುವ ಮುಂಚೆ ನಟ ದರ್ಶನ್ ಅವರ ಜೊತೆಗೆ ಸಿನಿಮಾ ಮಾಡಿರುವ ಮನೋಜ್ ತಮ್ಮ ಮೂರನೇ ಸಿನಿಮಾ ಗಾರ್ಡನ್ ಮುಹೂರ್ತ ಕಂಡಿದೆ. ಈ ವೇಳೆ ದರ್ಶನ್ ಜೊತೆಗಿನ ಒಡನಾಟ ನೆನೆದು ಮಾತನಾಡಿದ್ದಾರೆ. ಇನ್ನು ಈ ಪ್ರಕರಣ ಆದ್ಮೇಲೆ ಭೇಟಿ ಆಗೋಕೆ ಸಮಯ ಸಿಕ್ಕಿಲ್ಲ ಎಂದು ಹೇಳಿದ್ದಾರೆ.
