52ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಕಿಚ್ಚ ಸುದೀಪ್, ಮಾಧ್ಯಮಗಳೊಂದಿಗೆ ಹಲವು ವಿಚಾರ ಹಂಚಿಕೊಂಡಿದ್ದಾರೆ. ದರ್ಶನ್ ಫಾರ್ಮ್ ಹೌಸ್ ನಲ್ಲಿ ಕುದುರೆ ಸವಾರಿ ಮಾಡುವಾಗ ಬಿದ್ದ ಅನುಭವವನ್ನು ವಿವರಿಸಿದ್ದಾರೆ.
ಬೆಂಗಳೂರು (ಸೆ.1): ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮಂಗಳವಾರ 52ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ. ಈ ಹಿನ್ನಲೆಯಲ್ಲಿ ಸೋಮವಾರ ಅಭಿಮಾನಿಗಳೊಂದಿಗೆ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕಿಚ್ಚ ಸುದೀಪ್ ಹಲವಾರು ವಿಚಾರಗಳನ್ನು ಮಾತನಾಡಿದರು. ದರ್ಶನ್ ವಿಚಾರ, ಮುಂದಿನ ಸಿನಿಮಾ, ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ, ವಿಷ್ಣುವರ್ಧನ್ ಸ್ಮಾರಕ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದರು.
ನನಗೆ ಪೌರಾಣಿಕ ಪಾತ್ರ ಮಾಡೋದು ಅಂದ್ರೆ ನನಗೆ ಇಷ್ಟ. ಅದರೆ, ಕುದುರೆ ಓಡ್ಸೋದು ಅಂದ್ರೆ ನನಗೆ ಆಗಲ್ಲ. ಬ್ರೇಕ್ ಯಾವುದು ಕ್ಲಚ್ ಯಾವುದು ಅಂತಾ ಗೊತ್ತಿದ್ರೆ ಓಡಿಸಬಹುದು. ಇದು ಯಾವ್ದೂ ಗೊತ್ತಿಲ್ದೆ ಓಡಿಸಿದ್ರೆ ಸಮಸ್ಯೆ ಆಗುತ್ತೆ. ಹಿಂದೆ ನನಗೆ ಒಂದು ಅನುಭವ ಆಗಿತ್ತು. ದರ್ಶನ್ ಫಾರ್ಮ್ ಹೌಸ್ ಗೆ ಹೋಗಿದ್ದೆ. ಈ ವೇಳೆ ದರ್ಶನ್ ಕುದುರೆ ಹತ್ತು.. ಹತ್ತು ಅಂದ. ಒತ್ತಾಯಕ್ಕೆ ಹತ್ತಿದ. ಅದು ಓಡಿ ಹೋಗಿ ಬೀಳಿಸಿಹಾಕಿತು. ಈ ಅನುಭವದ ಬಳಿಕ ಕುದುರೇನೇ ಹತ್ತಬಾರದು ಅಂತಾ ಡಿಸೈಡ್ ಮಾಡಿಬಿಟ್ಟೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ದರ್ಶನ್ ವಿಚಾರದಲ್ಲಿ ಮಾತನಾಡುವ ವೇಳೆ, 'ಕೆಲವೊಂದು ವಿಚಾರವಾಗಿ ನಾನು ಮಾತಾಡಲ್ಲ. ಯಾಕೆಂದರೆ ಅದು ಕೆಲವೊಮ್ಮೆ ಅಂತರ ಸೃಷ್ಟಿ ಮಾಡುತ್ತೆ. ಅವರ ಸಿನಿಮಾಗೆ ಒಳ್ಳೆಯದಾಗಲಿ. ನಾವು ಮೊದಲೇ ಹೇಳಿದ್ದೆ ಅವರವರ ಅಭಿಮಾನಿಗಳಿಗೆ ಅವರದ್ದೇ ಆದ ನಂಬಿಕೆ ಇರುತ್ತೆ. ಅದರ ಪಾಡಿಗೆ ಅದು ನಡೆಯುತ್ತೆ. ಕಾನೂನು ಅದರ ಪಾಡಿಗೆ ಕೆಲಸ ಮಾಡುತ್ತೆ ಎಂದು ಹೇಳಿದರು.
ದರ್ಶನ್ ಹಾಗೂ ಸುದೀಪ್ ಒಟ್ಟಾಗೋದು ಕೆಲವರಿಗೆ ಇಷ್ಟವಿಲ್ಲ ಅನ್ನೋ ಪ್ರಶ್ನೆಗೆ ಉತ್ತರಿಸಿದ ಸುದೀಪ್, 'ನಾವೇನು ಚಿಕ್ಕವರಲ್ಲ.. ನಾವು ದೂರಾಗಿದ್ದು ಯಾಕೆ ಅನ್ನೋದು ನಮಗೆ ಗೊತ್ತಿದೆ' ಎಂದು ಹೇಳಿದರು.
ಕ್ರಿಸ್‌ಮಸ್‌ಗೆ ಸಿನಿಮಾ ನಿರೀಕ್ಷೆ ಮಾಡಬಹುದು ಎಂದ ಕಿಚ್ಚ
K47 ಶೂಟಿಂಗ್ ನಡೆಯುತ್ತಿದೆ. ಕ್ರಿಸ್ ಮಸ್ ಗೆ ಕಿಚ್ಚ ನಿರೀಕ್ಷೆ ಮಾಡಬಹುದು. ಕಿಚ್ಚ 47 ಸಿನಿಮಾವನ್ನ ವೇಗವಾಗಿ ಮುಗಿಸುತ್ತಿದ್ದೇವೆ. ಡಿಸೆಂಬರ್ ಅಂತ್ಯಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ವೇಗವಾಗಿ ಸಿನಿಮಾ ಮಾಡಿದ್ರೆ. ಚಿತ್ರತಂಡ ಮೇಲಿನ ಆರ್ಥಿಕ ಹೊರೆ ಕಡಿಮೆ ಆಗುತ್ತೆ. ಹೀಗಾಗಿ ಶೂಟ್ ಬೇಗ ಮುಗಿಸ್ತಿದ್ದೀವಿ. ನನ್ನ ಇದುವರೆಗಿನ ಚಿತ್ರ ಜೀವನದಲ್ಲಿ ಇದುವರೆಗೆ ಮುಗಿಸಿರುವ ವೇಗದ ಸಿನಿಮಾ ಅಂದ್ರೆ ಕಾಶಿ ಫ್ರಂ ವಿಲೇಜ್. ಬಿಗ್ ಕ್ಯಾನವಾಸ್ ನಲ್ಲಿ ಇದೇ ಇರಬಹುದು ಎಂದು ಹೇಳಿದ್ದಾರೆ.
ಕ್ರಿಸ್‌ಮಸ್‌ಗೆ ಅರ್ಜುನ್ ಜನ್ಯ ನಿರ್ದೇಶನದ ಸಿನಿಮಾ ಕೂಡ ಬರುವ ಸಾಧ್ಯತೆ ಇದೆ ಈ ಪ್ರಶ್ನೆಗೆ, 'ನಾನು ಅನಾವಶ್ಯಕಾಗಿ ಯಾರಿಗೂ ಚಾಲೆಂಜ್ ಹಾಕಲ್ಲ. ನಾವು ಈಗಾಗಲೇ ಪ್ಲ್ಯಾನ್ ಮಾಡಿದೀವಿ. ನಮ್ಮ ಸಿನಿಮಾ ಕಂಪ್ಲೀಟ್ ಆಗಿಲ್ಲ. ಆ ಕಡೆ ನನ್ನ ಹುಡುಗ ಅರ್ಜುನ್‌ಜನ್ಯ ಜೊತೆ ಲೆಜೆಂಡರಿ ಎಲ್ಲರೂ ಇದ್ದಾರೆ. ಸಿನಿಮಾ ಬರೀ ನಿರ್ಮಾಪಕನ ನಷ್ಟ ಕಷ್ಟ ಅಲ್ಲ. ನನಗೆ ಪೊಂಗಲ್ ದೊಡ್ಡದಲ್ಲ . ಅದು ಸಂಕ್ರಾಂತಿ 25 ಮಿಸ್ ಮಾಡ್ಕೊಂಡ್ರೆ ಜುಲೈ ವರೆಗೆ ಕಾಯಬೇಕು. ಮಾತನಾಡುವ ಅವಶ್ಯಕತೆ ಇಲ್ಲ. ಚಿತ್ರರಂಗದಲ್ಲಿ ಥಿಯೇಟರ್ ಸಾಕಷ್ಟಿದೆ. ಬರೋವ್ರು ಬರಲಿ, ಅವರವರ ಅನುಕೂಲ' ಎಂದು ಹೇಳಿದ್ದಾರೆ.
ನಾನು ಪಾರ್ಕ್‌ವೊಂದನ್ನು ದತ್ತು ತೆಗೆದುಕೊಂಡು ಅಮ್ಮನ ಹೆಸರಲ್ಲಿ ಸಸಿ ನೆಡುತ್ತಿದ್ದೇನೆ. ಈಗ ನಾನು ಆಕ್ಟರ್ . ಆಕ್ಟರ್ ಆಗಿ ಇಷ್ಟು ಮಾಡಬಲ್ಲೆ ಎಂದು ಹೇಳಿದ್ದಾರೆ.
ರಾಜಕೀಯಕ್ಕೆ ಬರೋ ಬಗ್ಗೆ ಏನಂದ್ರ ಸುದೀಪ್
ರಾಜಕೀಯಕ್ಕೆ ಬರ್ತೀರಾ ಎನ್ನುವ ಪ್ರಶ್ನೆಗೆ, ಬರುವಂತೆ ಕೆಲವರು ಮಾಡುತ್ತಿದ್ದಾರೆ. ರಾಜಕಾರಣಕ್ಕೆ ಬರಬೇಕು ಅಂತೇನೂ ಇಲ್ಲ.ಕೆಲವೊಮ್ಮೆ, ಕೆಲವೊಬ್ರು ಬರೋ ಥರಾ ಮಾಡ್ತಿದ್ದಾರೆ. ನೋಡೋಣ ಮುಂದೆ ಹೇಗೆ ಅಂತಾ ಎಂದು ಉತ್ತರ ನೀಡಿದ್ದಾರೆ.
ಈ ಸುದ್ದಿ ಅಪ್‌ಡೇಟ್ ಆಗುತ್ತಿದೆ.
