ನನ್ನ ಪತಿಗೆ ಒಮ್ಮೆ ಪಾರ್ವತಮ್ಮನವರ 2-3 ಸಿನಿಮಾಗಳಲ್ಲಿ ಅವಕಾಶವೇ ಸಿಕ್ಕಿರಲಿಲ್ಲ. ಆಗ ಅವರ ಬಳಿಗೆ ಹೋಗಿ 'ನೀವು ಹೀಗೆ ಅವಕಾಶ ನೀಡದಿದ್ದರೆ ನಾನು ನನ್ನ ಮೂವರೂ ಮಕ್ಕಳನ್ನೂ ಕರೆದುಕೊಂಡು ನಿಮ್ಮ ಮನೆಯಲ್ಲಿಯೇ ಇದ್ದುಬಿಡುತ್ತೇನೆ. ನೀವು ಕೊಡುವ ಅನ್ನವನ್ನು ನಂಬಿಕೊಂಡೇ ನಾವು ಇರೋದು ಎಂದಿದ್ದೆ' ಎಂದಿದ್ದಾರೆ.

ದರ್ಶನ್ ಅಮ್ಮ ಮೀನಾ ತೂಗುದೀಪ ವಿಡಿಯೋ ವೈರಲ್!

ಕನ್ನಡದ ಸ್ಟಾರ್ ನಟ ದರ್ಶನ್ ತೂಗುದೀಪ (Darshan Thoogudeepa) ಅವರ ಅಮ್ಮ ಮೀನಾ ತೂಗುದೀಪ (Meena Thoogudeepa) ಮಾತನಾಡಿದ್ದ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಮೀನಾ ಅವರು ಡಾ ರಾಜ್‌ಕುಮಾರ್ ಫ್ಯಾಮಿಲಿ ನಮಗೆ ಅನ್ನ ಕೊಡುತ್ತಿದ್ದ ಕುಟುಂಬ ಎಂಬುದನ್ನು ಹೇಳಿದ್ದಾರೆ. ಆ ವಿಡಿಯೋದಲ್ಲಿ ಅವರು 'ದರ್ಶನ್ ಹಾಗೂ ದಿನಕರ್ ಇಷ್ಟು ಹೈಟ್, ಪರ್ಸನಾಲಿಟಿ ಇದ್ದಾರೆ ಅಂದ್ರೆ ಅದಕ್ಕೆ ಡಾ ರಾಜ್‌ಕುಮಾರ್ ಕುಟುಂಬ ಕೊಟ್ಟ ಅನ್ನವೇ ಕಾರಣ' ಎಂದಿದ್ದಾರೆ.

ಅಷ್ಟೇ ಅಲ್ಲ, ನನ್ನ ಪತಿಗೆ ಒಮ್ಮೆ ಪಾರ್ವತಮ್ಮನವರ ವಜ್ರೇಶ್ವರ ಸಂಸ್ಥೆಯಲ್ಲಿ 2-3 ಸಿನಿಮಾಗಳಲ್ಲಿ ಅವಕಾಶವೇ ಸಿಕ್ಕಿರಲಿಲ್ಲ. ಆಗ ನಾನು ಪಾರ್ವತಮ್ಮನವರ ಬಳಿಗೆ ಹೋಗಿ 'ನೀವು ಹೀಗೆ ಅವಕಾಶ ನೀಡದಿದ್ದರೆ ನಾನು ನನ್ನ ಮೂವರೂ ಮಕ್ಕಳನ್ನೂ ಕರೆದುಕೊಂಡು ನಿಮ್ಮ ಮನೆಯಲ್ಲಿ ನಿಮ್ಮ ಮುಂದೆಯೇ ಇದ್ದುಬಿಡುತ್ತೇನೆ. ನೀವು ಕೊಡುವ ಅನ್ನವನ್ನು ನಂಬಿಕೊಂಡೇ ನಾವು ಇರೋದು ಎಂದಿದ್ದೆ' ಎಂದಿದ್ದಾರೆ. ಜೊತೆಗೆ, ಆ ವಿಡಿಯೋದಲ್ಲಿ ಡಾ ರಾಜ್‌ಕುಮಾರ್ ಹಾಗೂ ತೂಗುದೀಪ ಶ್ರೀನಿವಾಸ್ ಜೊತೆಯಾಗಿ ನಟಿಸಿರುವ ಸಿನಿಮಾದ ದೃಶ್ಯಗಳ ತುಣುಕುಗಳೂ ಕೂಡ ಇವೆ.

ಡಾ ರಾಜ್‌ಕುಮಾರ್ ಕುಟುಂಬ ಹಾಗೂ ತೂಗುದೀಪ ಶ್ರೀನಿವಾಸ್ ಕುಟುಂಬದ ಮಧ್ಯೆ ತುಂಬಾ ಆಪ್ತತೆ ಇತ್ತು, ಡಾ ರಾಜ್‌ ನಟನೆಯ ಬಹುತೇಕ ಸಿನಿಮಾಗಳಲ್ಲಿ ತೂಗುದೀಪ ಶ್ರೀನಿವಾಸ್ ಅವರು ನಟನೆ ಮಾಡುತ್ತಿದ್ದರು. ಹೀಗಾಗಿ ನಟನೆಯನ್ನು ನಂಬಿಕೊಂಡಿದ್ದ ನಟ ತೂಗುದೀಪ ಶ್ರೀನಿವಾಸ್ ಅವರ ಕುಟುಂಬ ಹೊಟ್ಟೆ ತುಂಬಿಸಿಕೊಳ್ಳಲು ಡಾ ರಾಜ್‌ಕುಮಾರ್ ಕುಟುಂಬವನ್ನೇ ಅವಲಂಬಿಸಿತ್ತು ಎಂಬುದು ಆ ವಿಡಿಯೋದಲ್ಲಿ ನಟ ದರ್ಶನ್ ತಾಯಿ ಮೀನಾ ಅವರು ಆಡಿರುವಮಾತಿನ ಅರ್ಥ. ಆದರೆ, ಆ ಬಳಿಕ ದರ್ಶನ್ ಹೀರೋ, ಸ್ಟಾರ್ ನಟರಾಗಿ ಬೆಳದಿದ್ದಾರೆ. ಅವರ ಸಹೋದರ ದಿನಕರ್ ನಿರ್ದೇಶಕರಾಗಿ ಬೆಳೆದಿದ್ದಾರೆ.

ಸದ್ಯಕ್ಕೆ ನಟ ದರ್ಶನ್ ಜೈಲುಪಾಲು!

ಸದ್ಯಕ್ಕೆ ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದಾರೆ. ಅವರ ಸಮಕಾಲೀನ ಸ್ಟಾರ್ ನಟರಾದ ಪುನೀತ್ ರಾಜ್‌ಕುಮಾರ್ ಅವರು ನಿಧನರಾಗಿದ್ದು, ನಮ್ಮೊಂದಿಗಿಲ್ಲ. ಇಂದು ಡಾ ರಾಜ್‌ಕುಮಾರ್ ಹಾಗೂ ಪಾರ್ವತಮ್ಮನವರೂ ಸಹ ದೈಹಿಕವಾಗಿ ನಮ್ಮೊಂದಿಗಿಲ್ಲ. 'ಕಾಲಾಯ ತಸ್ಮೈ ನಮಃ' ಎಂಬಂತೆ, ಕಾಲಾನಂತರದಲ್ಲಿ ಪರಿಸ್ಥಿತಿಗಳು ಬದಲಾಗಿವೆ, ದರ್ಶನ್ ಸ್ಥಿತಿಯಂತೂ ಊಹಿಸಲೂ ಅಸಾಧ್ಯ ಎಂಬಂತೆ ಕೆಟ್ಟದಾಗಿದೆ.

ಕಾಮೆಂಟ್ ಏನು?

ಮೀನಮ್ಮನವರು ಅಂದು ಎಮೋಶನಲ್‌ ಆಗಿ ಮಾತನಾಡಿದ್ದು ಇದೀಗ ವೈರಲ್ ಆಗುತ್ತಿದೆ. ಆದರೆ, ಸೋಷಿಯಲ್ ಮೀಡಿಯಾದದಲ್ಲಿ ಅದನ್ನೇ ಶಬ್ಧಶಃ ಅರ್ಥ ಮಾಡಿಕೊಂಡಿದ್ದಾರೆ ಎನ್ನುವಂತೆ ಕೆಲವು ಕಾಮೆಂಟ್ ಹಾಕುತ್ತಿದ್ದಾರೆ. 'ಅಣ್ಣಾವ್ರ ಮನೆಯ ಅನ್ನವನ್ನು ಊಟ ಮಾಡಿದ್ದಕ್ಕೇ ದರ್ಶನ್-ದಿನಕರ್ ಅಷ್ಟು ಹೈಟ್‌-ವೇಟ್ ಆಗಿದ್ದು ನಿಜವಾದರೆ ಮತ್ಯಾಕೆ ಆ ಕುಟುಂಬದ ಮಕ್ಕಳೆಲ್ಲ ಯಾಕೆ ಹಾಗಿದ್ದಾರೆ? ದೇಹ ಬೆಳೆಯುವುದು ಅವರವರ ಜೀನ್ಸ್‌ ಕಾರಣಕ್ಕೆ' ಎಂದಿದ್ದಾರೆ ಕೆಲವರು. ಆದರೆ ಅದು ವಿಷಯ ಹಾಗಲ್ಲ, 'ಆ ಕುಟುಂಬದ ಅನ್ನದ ಋಣ ನಮ್ಮ ಮೇಲಿದೆ' ಎಂಬುದಷ್ಟೇ ದರ್ಶನ್ ಅಮ್ಮ ಮೀನಮ್ಮನವರ ಮಾತಿನ ಅರ್ಥ..!