Darshan Thoogudeepa Devil Movie: ನಟ ದರ್ಶನ್‌ ಅವರ ಜಾಮೀನು ಭವಿಷ್ಯ ರದ್ದು ಎಂದು ತೀರ್ಪು ಹೊರಬೀಳೋ ಅರ್ಧ ಗಂಟೆ ಮುನ್ನ ಅವರು ʼದಿ ಡೆವಿಲ್ʼ ಸಿನಿಮಾದ ಹಾಡಿನ ಮಾಹಿತಿ ಕೊಟ್ಟಿದ್ದಾರೆ. 

ಇಂದು ದರ್ಶನ್, ಪವಿತ್ರಾ ಗೌಡ ಸೇರಿ ಏಳು ಆರೋಪಿಗಳ ಜಾಮೀನು ರದ್ದಾಗಿದೆ. ಈ ಮಧ್ಯೆ ನಾಳೆ ದರ್ಶನ್‌ ತೂಗುದೀಪ ನಟನೆಯ ಬಹುನಿರೀಕ್ಷಿತ ʼದಿ ಡೆವಿಲ್‌ʼ ಸಿನಿಮಾದ ಹಾಡು ರಿಲೀಸ್‌ ಆಗಲಿದೆ. ಕಳೆದು ಒಂದು ಗಂಟೆ ಮುಂಚೆ ಈ ಸಿನಿಮಾದ ಅಪ್‌ಡೇಟ್‌ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ದರ್ಶನ್‌ ಮಾಹಿತಿ ಹಂಚಿಕೊಂಡಿದ್ದರು.

ಹಾಡಿನ ಮಾಹಿತಿ ಕೊಟ್ಟಿರೋ ದರ್ಶನ್!

ʼದಿ ಡೆವಿಲ್‌ʼ ಸಿನಿಮಾದ ಇದ್ರೆ ನೇಮದಿಯಾಗಿ ಇರ್ಬೆಕು ಅನ್ನೋ ಹಾಡು ರಿಲೀಸ್‌ ಆಗಲಿದೆ. ನಟ ದರ್ಶನ್‌ ಅವರು ಸೋಶಿಯಲ್‌ ಮೀಡಿಯಾವನ್ನು ಹ್ಯಾಂಡಲ್‌ ಮಾಡೋದಿಲ್ಲ. ಆದರೆ ಅವರ ಅನುಮತಿ ಮೇರೆಗೆ ಅವರ ಟೀಂ ಹ್ಯಾಂಡಲ್‌ ಮಾಡುತ್ತದೆ. ಯಾವುದೇ ಪೋಸ್ಟ್‌ ಹಾಕೋದಿದ್ರೂ ಕೂಡ ದರ್ಶನ್‌ ಅನುಮತಿ ಬೇಕು. ಕೋರ್ಟ್‌ ತೀರ್ಪು ಹೊರಬೀಳೋ ಅರ್ಧ ಗಂಟೆ ಮುಂಚೆ ದರ್ಶನ್‌ ಖಾತೆಯಿಂದ ಹಾಡಿನ ಬಗ್ಗೆ ಮಾಹಿತಿ ಸಿಕ್ಕಿದೆ.

ಗ್ರೇಟ್‌ ಎಸ್ಕೇಪ್‌ ಆದ ಡೆವಿಲ್‌ ಸಿನಿಮಾ!

ದರ್ಶನ್‌ರಿಂದ ಡೆವಿಲ್ ಸಿನಿಮಾ ಗ್ರೇಟ್ ಎಸ್ಕೇಪ್ ಆಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಬೇಲ್ ಸಿಗದಿದ್ರೆ ಡೆವಿಲ್ ಚಿತ್ರ ತಂಡಕ್ಕೆ ತೊಂದರೆ ಆಗುತ್ತೆ ಎಂದು ಶೂಟಿಂಗ್ ಮುಗಿಸಲಾಗಿದೆ. ರಾಜಸ್ಥಾನದಲ್ಲಿ ಸತತ 24 ಗಂಟೆ ಶೂಟಿಂಗ್‌ನಲ್ಲಿ ಭಾಗಿ ಆಗಿದ್ದರು. ಡೆವಿಲ್ ಸಿನಿಮಾದ ತನ್ನ ಪತ್ರದ ಡಬ್ಬಿಂಗ್ ಕೂಡ ಮಾಡಿ ಕೊಟ್ಟಿದ್ದಾರೆ. ಜೈಲಿಗೆ ಹೋದ್ರೆ ಮತ್ತೆ ಶೂಟಿಂಗ್ ಸಮಸ್ಯೆಗಳು ಆಗುತ್ತೆ ಅನ್ನೋ ಹಿನ್ನೆಲೆ ಪಟ ಪಟ ಅಂತ ಸಿನಿಮಾದ ಎಲ್ಲಾ ಕೆಲಸ ಮುಗಿಸಿದ್ದಾರೆ.

ಡೆವಿಲ್ ಸಿನಿಮಾದ ನಿರ್ಮಾಪಕರು ನಿರ್ದೇಶಕ ಪ್ರಕಾಶ್‌ಗೆ ತೊಂದರೆ ಆಗಬಾರದು ಎಂದು ಬೇಗ ಕೆಲಸ ಮುಗಿಸಿದ್ದಾರೆ. ಡೆವಿಲ್‌ ಸಿನಿಮಾಗೆ ಸುಮಾರು 40 ಕೋಟಿ ಬಂಡವಾಳ ಹೂಡಲಾಗಿದೆ. ಇದೇ ವರ್ಷದ ಕೊನೆಯಲ್ಲಿ ಡೆವಿಲ್ ಬಿಡುಗಡೆ ಮಾಡೋದಕ್ಕೆ ಪ್ಲಾನ್ ಆಗಿದೆ. ದರ್ಶನ್ ಇಲ್ಲದೆ ಬಿಡುಗಡೆ ಆಗುತಾ ಡೆವಿಲ್ ಸಿನಿಮಾ.?

ಸುಪ್ರೀಂ ಕೋರ್ಟ್‌ನಿಂದ ತೀರ್ಪಿನ‌ ನಿರೀಕ್ಷೆಯಲ್ಲಿ 'ಡಿ' ಗ್ಯಾಂಗ್ ಇತ್ತು. ಈ ಹಿನ್ನೆಲೆ ಪವಿತ್ರಾ ಗೌಡ ಇನ್ಸ್ ಸ್ಟಾಗ್ರಾಂ‌ ಪೋಸ್ಟ್ ಮಾಡಿಕೊಂಡಿದ್ದರು. "ಸತ್ಯವು ಎಲ್ಲಕ್ಕಿಂತ ಹೆಚ್ಚು ಶಕ್ತಿಶಾಲಿ, ನ್ಯಾಯವು ಯಾವಾಗಲೂ ತನ್ನ ದಾರಿಯನ್ನು ಕಂಡುಕೊಳ್ಳುತ್ತದೆ ಹಾಗೂ ಕೊಡುತ್ತದೆ" ಎಂದು ಪವಿತ್ರಾ ಗೌಡ ಹೇಳಿದ್ದರು. ಅಷ್ಟೇ ಅಲ್ಲದೆ ಮಗಳ ಪರೀಕ್ಷೆ ಇದೆ, ಜಾಮೀನು ರದ್ದು ಮಾಡಬೇಡಿ ಎಂದು ಪವಿತ್ರಾ ಅವರು ಕೋರ್ಟ್‌ಗೆ ಮನವಿ ಮಾಡಿದ್ದರು. ಇನ್ನು ಪವಿತ್ರಾ ಗೌಡ ಪರ ವಕೀಲ ನಾರಾಯಣ ಸ್ವಾಮಿ ಕೂಡ ಪಕ್ಕಾ ಬೇಲ್‌ ಸಿಗುತ್ತದೆ ಎಂದು ಸಂದರ್ಶನದಲ್ಲಿ ಹೇಳಿದ್ದರು.

ದರ್ಶನ್‌ ಕಾಣಸ್ತಿಲ್ಲ?

ಆರ್ ಆರ್ ನಗರದ ಮನೆ ಬಳಿ ದರ್ಶನ್ ಇರುವ ಸುಳಿವು ಸಿಗುತ್ತಿಲ್ಲ. ಸುಪ್ರೀಂ ಕೋರ್ಟ್ ಆದೇಶ ಬರುವ ಹಿನ್ನೆಲೆ ಅಜ್ಞಾತ ಸ್ಥಳಕ್ಕೆ ತೆರಳಿದ್ರಾ ದಾಸ ಎಂಬ ಪ್ರಶ್ನೆ ಬಂದಿದೆ. ಈ ಹಿಂದೆ ಬೆಂಗಳೂರು, ಬಳ್ಳಾರಿ ಎಂದು ಜೈಲಿನಲ್ಲಿದ್ದ ದರ್ಶನ್‌ ಅವರು ಮತ್ತೆ ಸೆರೆವಾಸ ಅನುಭವಿಸಬೇಕಿದೆ. ಅನಾರೋಗ್ಯದ ಕಾರಣವೊಡ್ಡಿ ಜಾಮೀನಿನ ಮೇಲೆ ಹೊರಗಡೆ ಬಂದಿದ್ದ ದರ್ಶನ್‌ ಅವರು ಆಪರೇಶನ್‌ ಮಾಡಿಸಿಕೊಂಡಿರಲಿಲ್ಲ, ಇನ್ನು ಡೆವಿಲ್‌ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾದರು, ದೇವಸ್ಥಾನಗಳಿಗೆ ಹೋದರು, ದಿನಕರ್‌ ತೂಗುದೀಪ ಅವರ ʼರಾಯಲ್‌ʼ ಸಿನಿಮಾ ವೀಕ್ಷಿಸಿದರು.