Gen Z like gig economy : ಕೆಲ್ಸದಲ್ಲಿ ಟೆನ್ಷನ್ ಇರ್ಬಾರದು, ಸಂಬಳ ಜಾಸ್ತಿ ಬರ್ಬೇಕು. ಇಂಥ ಕೆಲ್ಸ ಎಲ್ಲಿ ಸಿಗುತ್ತೆ? ಅದಕ್ಕೆ ಜೆನ್ ಜೀ ಬಳಿ ಉತ್ತರ ಇದೆ.
ಇಂದಿನ ಕಾಲದ ಯುವಕ್ರು ಅಂದ್ರೆ ಅವರು ಜೆನ್ ಜೀ (Gen Z)ಗೆ ಸೇರ್ತಾರೆ. ಈಗಷ್ಟೆ ಕೆಲ್ಸ ಹುಡುಕ್ತಿರೋ ಅಥವಾ 20 ರಿಂದ 25ರ ಹರೆಯದಲ್ಲಿರುವ ಯೂತ್ ಆಲೋಚನೆ ಬದಲಾಗಿದೆ. ಅವ್ರು ಮಿಲೇನಿಯಲ್ಸ್ (Millennials) ಗಿಂತ ಭಿನ್ನವಾಗಿ ಯೋಚನೆ ಮಾಡ್ತಾರೆ. ಮಿಲೇನಿಯಲ್ಸ್, ಗೆ ಸಂಬಳ ಮುಖ್ಯ. ಸಂಸಾರ ತೂಗಿಸಿಕೊಂಡು ಹೋಗಲು ರಾತ್ರಿ – ಹಗಲು ಎನ್ನದೆ ದುಡಿತಾರೆ. ಮೈಮೇಲೆ ಒಂದಿಷ್ಟು ಭಾರ ಹೊತ್ತುಕೊಂಡು, 9 – 6 ಗಂಟೆ ಕೆಲ್ಸ ಮಾಡೋದ್ರಲ್ಲಿ ಮಿಲೇನಿಯಲ್ಸ್ ಮುಂದಿದ್ದಾರೆ. ಅದೇ ಜಿನ್ ಜೀ ಕೆಲ್ಸದ ಶೈಲಿ ಭಿನ್ನ. ಅವರು ಬೇರೆಯವರ ಕೈಕೆಳಗೆ ಕೆಲ್ಸ ಮಾಡೋದನ್ನು ಹೆಚ್ಚಾಗಿ ಇಷ್ಟಪಡೋದಿಲ್ಲ. ಬಾಸ್ ಬೈದ್ರೆ ಅರೆ ಕ್ಷಣದಲ್ಲಿ ಕೆಲ್ಸ ಬಿಟ್ಟು ಹೋಗುವ ಜನರಿದ್ದಾರೆ. ಈ ಜನರೇಷನ್ ಮಂದಿ ಸ್ವತಂತ್ರೋದ್ಯೋಗ ಮತ್ತು ಗಿಗ್ ಆರ್ಥಿಕತೆ (gig economy)ಯತ್ತ ಹೆಚ್ಚು ಆಕರ್ಷಿತರಾಗ್ತಿದ್ದಾರೆ. ಇಲ್ಲಿ ಮಾನಸಿಕ ಒತ್ತಡ ಕಡಿಮೆ. ವೈಯಕ್ತಿಕ ಗ್ರೋಥ್ ಚೆನ್ನಾಗಿದೆ.
ಕೆಲ್ಸದ ವಿಚಾರದಲ್ಲಿ ಯಾವುದನ್ನು ಆಯ್ಕೆ ಮಾಡ್ಕೊಳ್ತಿದೆ ಜೆನ್ ಜೀ : ಇತ್ತೀಚಿನ ವರ್ಷಗಳಲ್ಲಿ ಗಿಗ್ ಆರ್ಥಿಕತೆ ವೇಗವಾಗಿ ಬೆಳೆದಿದೆ. ಮುಂಬರುವ ವರ್ಷಗಳಲ್ಲಿ ಗಿಗ್ ಎಕಾನಮಿ, ಉದ್ಯೋಗ ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆ ಬರ್ಬಹುದು ಅಂತ ನಂಬಲಾಗಿದೆ. ಇದ್ರಿಂದಾಗಿ ಯುವಕರು ಅದ್ರ ಕಡೆ ಹೆಚ್ಚು ಆಕರ್ಷಿತರಾಗ್ತಿದ್ದಾರೆ. ಗಿಗ್ ಎಕನಾಮಿಯಲ್ಲಿ ಕಂಪನಿಗಳು ಫುಲ್ ಟೈಂ ಉದ್ಯೋಗದ ಬದಲು ಫ್ರೀಲ್ಯಾನ್ಸರ್ ಗೆ ಹೆಚ್ಚು ಆದ್ಯತೆ ನೀಡ್ತಿವೆ. ಅಲ್ದೆ ಕಾಂಟ್ರಾಕ್ಟ್ ಆಧಾರಿತ ಕಾರ್ಮಿಕರ ಮೇಲೆ ಹೆಚ್ಚು ಅವಲಂಬಿತವಾಗಿವೆ. ಇದರಿಂದಾಗಿ ಕಂಪನಿಗಳ ಖರ್ಚು ಕಡಿಮೆ ಆಗ್ತಿದೆ. ತಮ್ಮ ಅವಶ್ಯಕತೆ ತಕ್ಕಂತೆ ಇಲ್ಲಿ ಉದ್ಯೋಗಿಗಳನ್ನು ಆಯ್ಕೆ ಮಾಡ್ಕೊಳ್ಬಹುದು.
ಗಿಗ್ ಎಕಾನಮಿ ಅಂದ್ರೇನು? : ಯಾವ್ದೆ ವ್ಯಕ್ತಿ ಪರ್ಮನೆಂಟ್ ಆಗಿ ಒಂದೇ ಕೆಲ್ಸ ಮಾಡೋದಿಲ್ಲ ಅಥವಾ ಒಂದೇ ಕಂಪನಿ ನೆಚ್ಚಿಕೊಳ್ಳೋದಿಲ್ಲ. ಫ್ರೀಲ್ಯಾನ್ಸಿಂಗ್, ಕಾಂಟ್ರಾಕ್ಟ್ ಬೇಸ್ ಮೇಲೆ ಕೆಲಸ ಮಾಡ್ತಾನೆ. ಇಲ್ಲವೆ ಪ್ರಾಜೆಕ್ಟ್ ಆಧಾರಿತ ಕೆಲಸವನ್ನು ಮಾಡ್ತಾನೆ. ಇದನ್ನು ಗಿಗ್ ಎಕಾನಮಿ ಅಂತ ಕರೆಯಲಾಗುತ್ತದೆ. ನೀವು ಯಾವ್ದೆ ಕಂಪನಿ ಜೊತೆ ಸಂಬಂಧ ಹೊಂದಿರಬೇಕಾಗಿಲ್ಲ. ಅದೇ ಕಂಪನಿಯನ್ನು ಮೆಚ್ಚಿಕೊಳ್ಬೇಕಾಗಿಲ್ಲ. ನಾನಾ ಕಂಪನಿ ಜೊತೆ ಕೆಲ್ಸ ಮಾಡ್ಬಹುದು. ಅನೇಕ ವಿಭಿನ್ನ ಕಂಪನಿಗಳು ಮತ್ತು ಕ್ಲೈಂಟ್ಗಳೊಂದಿಗೆ ಸಂಪರ್ಕ ಬೆಳೆಸ್ಬಹುದು. ಹಾಗೇ ಇಲ್ಲಿ ಸಂಬಳ ಹಾಗೂ ಕೆಲ್ಸ ಫಿಕ್ಸ್ ಆಗಿರೋದಿಲ್ಲ. ನಿಮ್ಮ ಕೆಲ್ಸ, ಪ್ರಾಜೆಕ್ಟ್, ಸಂಬಳ ಎಲ್ಲವನ್ನು ನೀವೇ ಡಿಸೈಡ್ ಮಾಡ್ಬಹುದು. ಅದು ಕಂಪನಿಗೆ ಓಕೆ ಆದ್ರೆ ನಿಮ್ಗೆ ಕೆಲ್ಸ ನೀಡುತ್ತೆ. ಡಿಜಿಟಲ್ ಪ್ಲಾಟ್ಫಾರ್ಮ್ಗಳಿಂದಾಗಿ, ಯುವಕರಲ್ಲಿ ಅದರ ಕ್ರೇಜ್ ಹೆಚ್ಚುತ್ತಿದೆ. ಜೆನ್ ಜೀ ಯುವಕರು ಇಂಥ ಕೆಲ್ಸವನ್ನು ಹೆಚ್ಚು ನೋಡ್ತಿದ್ದಾರೆ. ತಮಗೆ ಬೇಕಾದ ಟೈಂನಲ್ಲಿ ಕೆಲ್ಸ ಮಾಡಿ ಉಳಿದ ಟೈಂನಲ್ಲಿ ಲೈಫ್ ಎಂಜಾಯ್ ಮಾಡ್ತಿದ್ದಾರೆ. ಈ ಕೆಲ್ಸದಲ್ಲಿ ಗ್ರೋಥ್ ಜಾಸ್ತಿ. ಮನೆಯಲ್ಲೇ ಕುಳಿತು, ಫಾರೆನ್ ಕಂಪನಿಗಳ ಜೊತೆ ಡೀಲ್ ಮಾಡ್ಕೊಂಡು ಲಕ್ಷಾಂತರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಇಲ್ಲಿ ಮುಖ್ಯವಾಗಿ ಮಾನಸಿಕ ಒತ್ತಡ ಇರೋದಿಲ್ಲ. ಪ್ರತಿ ದಿನ ಬೆಳಿಗ್ಗೆ ಎದ್ದು ಆಫೀಸ್ ಗೆ ಹೋಗ್ಬೇಕು, ಬಾಸ್ ಮುಂದೆ ಕೈಕಟ್ಟಿ ನಿಲ್ಬೇಕು,
ಸಹೋದ್ಯೋಗಿಗಳ ಮಾತು ಕೇಳ್ಬೇಕು ಅನ್ನೋದಿಲ್ಲ. ಕೆಲ್ಸದಲ್ಲಿ ಬೇದ – ಭಾವ ಇರೋದಿಲ್ಲ. ಬಾಸ್ ಗೆ ಬಕೆಟ್ ಹಿಡಿದು, ಸ್ಯಾಲರಿ ಹೆಚ್ಚಿಸಿಕೊಳ್ಳುವ ಕಿರಿಕಿರಿ ಇಲ್ಲ. ನಿಮ್ಮ ಕೆಲ್ಸಕ್ಕೆ ತಕ್ಕಂತೆ ನಿಮಗೆ ಸಂಬಳ ಬರುತ್ತೆ. ಇದು ಜೆನ್ ಜೀಗೆ ಆಪ್ತವಾಗ್ತಿದೆ.
