‘14 ಕೋಟಿ ಸದಸ್ಯರನ್ನು ಹೊಂದುವ ಮೂಲಕ ಬಿಜೆಪಿಯು ಇಡೀ ಜಗತ್ತಿನಲ್ಲಿ ಅತ್ಯಂತ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭಾನುವಾರ ಘೋಷಿಸಿದ್ದಾರೆ.

ವಿಶಾಖಪಟ್ಟಣಂ: ‘14 ಕೋಟಿ ಸದಸ್ಯರನ್ನು ಹೊಂದುವ ಮೂಲಕ ಬಿಜೆಪಿಯು ಇಡೀ ಜಗತ್ತಿನಲ್ಲಿ ಅತ್ಯಂತ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭಾನುವಾರ ಘೋಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ 75ನೇ ಹುಟ್ಟುಹಬ್ಬದ ಸಂಭ್ರಮದ ಹೊತ್ತಿನಲ್ಲೇ ಬಿಜೆಪಿ ಈ ಮಹತ್ವದ ಸಾಧನೆ ಮಾಡಿದೆ.

ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ‘14 ಕೋಟಿ ಸದಸ್ಯರನ್ನು ಹೊಂದುವ ಮೂಲಕ ಬಿಜೆಪಿಯು ವಿಶ್ವದಲ್ಲೇ ಅತಿ ದೊಡ್ಡ ರಾಜಕೀಯ ಪಕ್ಷವಾಗಿದೆ. ಇವರಲ್ಲಿ 2 ಕೋಟಿ ಸದಸ್ಯರು ಸಕ್ರಿಯರಾಗಿದ್ದಾರೆ. ದೇಶದ 20 ರಾಜ್ಯಗಳಲ್ಲಿ ಎನ್‌ಡಿಎ ಹಾಗೂ 13 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳಿವೆ. 240 ಲೋಕಸಭಾ ಸಂಸದರು. ಸುಮಾರು 1,500 ಶಾಸಕರು ಹಾಗೂ 170ಕ್ಕೂ ಅಧಿಕ ವಿಧಾನ ಪರಿಷತ್‌ ಸದಸ್ಯರನ್ನು ಬಿಜೆಪಿ ಹೊಂದಿದೆ’ ಎಂದು ತಿಳಿಸಿದರು.

ಪ್ರಧಾನಿ ಮೋದಿಯವರ ಸರ್ಕಾರವನ್ನು ‘ಜವಾಬ್ದಾರಿಯುತ’ ಮತ್ತು ‘ಸ್ಪಂದಿಸುವ’ ಸರ್ಕಾರ ಎಂದು ಬಣ್ಣಿಸಿದ ಅವರು, ಈ ಹಿಂದಿನ ಸರ್ಕಾರಗಳು ನಿಷ್ಕ್ರಿಯವಾಗಿದ್ದು, ಅಭಿವೃದ್ಧಿಹೀನ ಆಡಳಿತ ನೀಡಿದ್ದವು ಎಂದು ಟೀಕಿಸಿದರು.

ಎಷ್ಟೇ ಎಫ್‌ಐಆರ್ ಹಾಕಿದರೂ ಸತ್ಯ ಹೇಳುವುದನ್ನು ನಿಲ್ಲಿಸುವುದಿಲ್ಲ: ಸಿ.ಟಿ.ರವಿ

ಸತ್ಯ ಹೇಳಿದರೆ ಎಫ್‌ಐಆರ್ ಹಾಕುತ್ತಾರೆ ಅನ್ನುವುದಾದರೆ ಸತ್ಯ ಹೇಳುವುದನ್ನು ನಿಲ್ಲಿಸಲು ಆಗುತ್ತದೆಯೇ ಎಂದು ಸಿ.ಟಿ.ರವಿ ಪ್ರಶ್ನಿಸಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಫ್‌ಐಆರ್ ಬಗ್ಗೆ ನಮ್ಮ ವಕೀಲರ ತಂಡ ತಲೆಕೆಡಿಸಿಕೊಳ್ಳುತ್ತಾರೆ. ಆದರೆ, ನಾವು ಅದರಿಂದ ಹೆದರಿ ಹಿಂದೆ ಸರಿಯುವುದಿಲ್ಲ. ಗಣಪತಿ ಮೇಲೆ ಕಲ್ಲು ಹೊಡೆದರೆ ಸಹಿಸಿಕೊಳ್ಳಬೇಕಾ?, ಅವರ ಮೇಲೆ ಕಲ್ಲು ಹೊಡೆದರೆ ಅವರು ಸಹಿಸಿಕೊಳ್ಳುತ್ತಾರಾ. ಅದನ್ನು ಸಹಿಸಿಕೊಳ್ಳುವುದಾದರೆ ಸಹನೆ ಪಾಠ ಮಾಡಲಿ. ಆಕ್ಷನ್‌ಗೆ ರಿಯಾಕ್ಷನ್ ಇರುತ್ತದೆ ಅಷ್ಟೆ ಎಂದರು.

ಹಿಂದೂಗಳ ಗ್ರಂಥದ ಬಗ್ಗೆ ಎಸ್‌ಐಟಿ ಅಧ್ಯಯನ ನಡೆಸಲಿ. ಮತೀಯ ಗ್ರಂಥಗಳ ನಡುವಿನ ವ್ಯತ್ಯಾಸದ ಬಗ್ಗೆ ಅಧ್ಯಯನ ನಡೆಸಿ ಅದರಲ್ಲಿ ಏನಿದೆ ಎಂಬುದನ್ನು ಪತ್ತೆ ಹಚ್ಚಲಿ. ಮುಸ್ಲಿಮರ ದುರ್ಬೋದನೆ ನಿಲ್ಲಿಸದಿದ್ದರೆ ಶಾಂತಿ ಹೇಗೆ ನೆಲೆಸುತ್ತದೆ ಎಂದು ಪ್ರಶ್ನಿಸಿದರು. ಮುಸ್ಲಿಮರ ಮತೀಯ ಗ್ರಂಥಗಳು ಕಲ್ಲು ಹೊಡೆಯುವಂತೆ ಬೋಧನೆ ಮಾಡುತ್ತವೆ. ಮತೀಯ ಗ್ರಂಥಗಳ ಬಗ್ಗೆ ಅಧ್ಯಯನ ನಡೆಸಿದರೆ ಅದರ ತಿರುಳು ಅರ್ಥವಾಗುತ್ತದೆ. ಹಿಂದೂಗಳ ಗ್ರಂಥವನ್ನು ಕೂಡ ಅಧ್ಯಯನ ಮಾಡಲಿ. ಅದೇ ನಮ್ಮ ಗ್ರಂಥಗಳನ್ನು ಅಧ್ಯಯನ ಮಾಡಿದರೆ ದೇವರಾಗುತ್ತಾರೆ. ಆದರೆ, ಮತೀಯ ಗ್ರಂಥವನ್ನು ಅಧ್ಯಯನ ಮಾಡಿದರೆ ಬಿನ್ ಲಾಡನ್ ಆಗುತ್ತಾರೆ ಎಂದರು.