ಯತ್ನಾಳ್‌ ಈ ಹಿಂದೆ ನನ್ನ ಜೊತೆನೇ ಈದ್ಗಾ ಮೈದಾನಕ್ಕೆ ಪ್ರಾರ್ಥನೆಗೆ ಬಂದು ಅಲ್ಲಾಹು ಅಕ್ಬರ್‌ ಎಂದಿದ್ದರು. ಈಗ ಹಿಂದೂಗಳ ಬಗ್ಗೆ ಮಾತನಾಡುತ್ತಾರೆ ಎಂದು ಸಚಿವ ಎಂ.ಬಿ.ಪಾಟೀಲ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರ (ಅ.28): ತಮ್ಮನ್ನು ಟೀಕಿಸಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ವಿರುದ್ಧ ಹರಿಹಾಯ್ದಿರುವ ಸಚಿವ ಎಂ.ಬಿ.ಪಾಟೀಲ ಅವರು, ಯತ್ನಾಳ್‌ ಈ ಹಿಂದೆ ನನ್ನ ಜೊತೆನೇ ಈದ್ಗಾ ಮೈದಾನಕ್ಕೆ ಪ್ರಾರ್ಥನೆಗೆ ಬಂದು ಅಲ್ಲಾಹು ಅಕ್ಬರ್‌ ಎಂದಿದ್ದರು. ಈಗ ಹಿಂದೂಗಳ ಬಗ್ಗೆ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯತ್ನಾಳ್‌ ಬಗ್ಗೆ ಬಿಜೆಪಿಯ ಎಂ.ಪಿ.ರೇಣುಕಾಚಾರ್ಯ ಏನೇನು ಹೇಳಿದ್ದಾರೆ ಕೇಳಿ.

ಈ ಹಿಂದೆ ನನ್ನ ಜೊತೆನೇ ಇವರು ಈದ್ಗಾ ಮೈದಾನಕ್ಕೆ ಪ್ರಾರ್ಥನೆಗೆ ಬಂದಿದ್ದರು. ಅಂದು ಅಲ್ಲಾಹು ಅಕ್ಬರ್‌ ಎಂದು ಇಂದು ಹಿಂದೂ ಬಗ್ಗೆ ಮಾತನಾಡುತ್ತಾರೆ. ಇವರು ನಾಲಿಗೆ ಹರಿಬಿಟ್ಟ ಕಾರಣವೇ ಇವರನ್ನು ಬಿಜೆಪಿಯಿಂದ ಹೊರ ಹಾಕಿದ್ದಾರೆ. ಉಚ್ಚಾಟಿತ ಹಿಂದೂ ಹುಲಿ‌ ಇದು. ಬಸನಗೌಡರ ನಿಮ್ಮ ನಾಲಿಗೆಗೆ ಲಗಾಮು ಇರಲಿ‌ ಎಂದು ಹೇಳಿದರು. ಯತ್ನಾಳ ಮಾತು ಯಾರು ಸೀರಿಯಸ್ ಆಗಿ ತಗೋತಾರೆ? ನಾನು ಸೀರಿಯಸ್ ಆಗಿ ತಗೊಂಡ್ರೆ ಅದು ಸರಿ ಇರಲ್ಲ ಎಂದರು.ಯತ್ನಾಳ ಎಲ್ಲರಿಗೂ ಬಾಯಿ ಬಿಟ್ಟಿದ್ದಾರೆ, ಈಗ ನನಗೂ ಬಾಯಿ ಬಿಟ್ಟಿದ್ದಾರೆ. ಯತ್ನಾಳ ನೀವು ಯಾರಿಗಾದರೂ ಧಮ್ಕಿ ಹಾಕಿ, ನನ್ನೊಟ್ಟಿಗೆ ಇದು ನಡೆಯಲ್ಲ.

ಯತ್ನಾಳ ಅವರಿಗೆ ಪ್ರತಿಕ್ರಿಯೆ ಕೊಡಲು ನಾನು ದಿನಕ್ಕೆ ನಾಲ್ಕು ಪ್ರೆಸ್‌ಮೀಟ್ ಮಾಡಬೇಕಾಗುತ್ತದೆ. ಇವರ ಹಾಗೆ ನಾನು ನಿರುದ್ಯೋಗಿ ಅಲ್ಲ ಎಂದು ಹೇಳಿದರು. ಕನ್ಹೇರಿ ಶ್ರೀಗಳ ಕಡೆಯಿಂದ ಇವರೇ ಮಾತನಾಡಿಸಲು ಹಚ್ಚಿಸಿರಬಹುದು. ಯತ್ನಾಳ ಮಾತು ಯಾರು ಸೀರಿಯಸ್ ಆಗಿ ತಗೋತಾರೆ? ನಾನು ಸೀರಿಯಸ್ ಆಗಿ ತಗೊಂಡ್ರೆ ಅದು ಸರಿ ಇರಲ್ಲ ಎಂದರು.ಯತ್ನಾಳ ಎಲ್ಲರಿಗೂ ಬಾಯಿ ಬಿಟ್ಟಿದ್ದಾರೆ, ಈಗ ನನಗೂ ಬಾಯಿ ಬಿಟ್ಟಿದ್ದಾರೆ. ಯತ್ನಾಳ ನೀವು ಯಾರಿಗಾದರೂ ಧಮ್ಕಿ ಹಾಕಿ, ನನ್ನೊಟ್ಟಿಗೆ ಇದು ನಡೆಯಲ್ಲ. ಪಂಚಪೀಠದವರು ಹಾನಗಲ್ ಕುಮಾರಸ್ವಾಮಿಗಳಿಗೂ ಬೈದಿದ್ದಾರೆ. .

ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್‌ ನಿರ್ಧಾರ

ಅಧಿಕಾರ ಹಂಚಿಕೆ ಕುರಿತು ಹೈಕಮಾಂಡ್ ನಿರ್ಧಾರವೇ ಅಂತಿಮ. ನಮ್ಮ ಪಕ್ಷದಲ್ಲಿ ಎಲ್ಲಾ ವಿಚಾರಗಳ ಬಗ್ಗೆ ಹೈಕಮಾಂಡ್ ಅಂತಿಮವಾಗಿ ನಿರ್ಧಾರ ಮಾಡುತ್ತದೆ ಎಂದು ಹೇಳಿದರು. ಮುಂದಿನ ಅವಧಿಗೂ ನಾನೇ ಸಿಎಂ ಎಂದು ಮೈಸೂರಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರದ ಕುರಿತು ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಕೆಪಿಸಿಸಿ ಅಧ್ಯಕ್ಷರೇ ಹೇಳಿದ್ದಾರೆ. ಅಧಿಕಾರ ಹಂಚಿಕೆ ಕುರಿತು ಮಾತನಾಡುವ ಅಧಿಕಾರ ಯಾರಿಗೂ ಇಲ್ಲ. ಎಲ್ಲ ನಿರ್ಧಾರಗಳು ಹೈಕಮಾಂಡ್ ಮಟ್ಟದಲ್ಲಿ ಆಗುತ್ತವೆ ಎಂದರು.

ಮುಂದಿನ ಎರಡೂವರೆ ವರ್ಷ ನಾನೇ ಸಿಎಂ ಆಗಿರುವೆ, ಮುಂದಿನ ದಸರಾ ಆಚರಣೆ ನೇತೃತ್ವವನ್ನು ನಾನೇ ಮಾಡಬಹುದು ಎಂಬ ಸಿಎಂ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, ಅವರು ಸಿಎಂ ಇದ್ದಾರೆ. ಜನರು‌ ಕೇಳಿದಾಗ ಹಾಗೇ ಹೇಳಬೇಕಾಗುತ್ತದೆ. ಜನರು‌ ಕೇಳಿದಾಗ ನಾನು ಬಿಡುತ್ತೇನೆ ಎಂದು‌ ಹೇಳುತ್ತಾರೆಯೇ? ಅಕ್ಟೋಬರ್‌ ಕ್ರಾಂತಿ ಅಂದರು, ಈಗ ನವೆಂಬರ್‌ ಕ್ರಾಂತಿ ಎನ್ನುತ್ತಾರೆ. ಮುಂದೆ ಡಿಸೆಂಬರ್‌ ಬರುತ್ತದೆ. ಪವರ್‌ ಶೇರಿಂಗ್ ಬಗ್ಗೆ ನನಗೇನೂ ಗೊತ್ತಿಲ್ಲ. ಅದೇನಿದ್ದರೂ ಹೈಕಮಾಂಡ್‌ಗೆ ಗೊತ್ತು. ಒಂದು ವೇಳೆ ಪವರ್‌ ಶೇರಿಂಗ್ ಆಗಿದ್ದರೆ ಸಿಎಂ ಹಾಗೂ ಡಿಸಿಎಂ ಅವರಿಗೆ ಗೊತ್ತು. ನನಗೆ ಯಾವುದೇ ವಿಷಯ ಗೊತ್ತಿಲ್ಲ ಎಂದು ಹೇಳಿದರು.