ವಿಠಲ್ ಗೌಡ ಹಾಗು ತಿಮರೋಡಿ ವಿಚಾರಣೆ ಎದುರಿಸಿದ್ದಾರೆ, ಬಂದು ಸಂದರ್ಶನ ಕೊಡ್ತಾರೆ ಅಂದ್ರೆ ಚರ್ಚೆಯಾಗಬೇಕಿದೆ. ಸಂದರ್ಶನ ಕೊಟ್ರು ಎಸ್‌ಐಟಿ ಮತ್ತು ಸರ್ಕಾರ ಸುಮ್ಮನಿರುತ್ತೆ ಅಂದ್ರೆ ಇಡೀ ಷಡ್ಯಂತ್ರದೊಳಗೆ ಕಾಣದ ಕೈ ಕೆಲಸ ಮಾಡ್ತಿದೆ ಎಂದರು.

ಚಿಕ್ಕಮಗಳೂರು (ಸೆ.12): ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ವಿಚಾರಣೆ ಎದುರಿಸಿ ಬಂದವನು ಸಂದರ್ಶನ ಕೊಡ್ತಾನೆ ಅಂದ್ರೆ ನಮಗೆ ಅನುಮಾನ. ಸರ್ಕಾರವೇ ಇವರಿಗೆಲ್ಲಾ ಫ್ರೀ ಬಿಟ್ಟಿದೇಯೋ ಏನೋ ಅಂತ ಡೌಟ್ ಎಂದು ಎಂಎಲ್‌ಸಿ ಸಿ.ಟಿ.ರವಿ ಹೇಳಿದರು. ಎಸ್‌ಐಟಿಯಿಂದ ಹಲವರ ವಿಚಾರಣೆ ವಿಚಾರವಾಗಿ ಮಾತನಾಡಿದ ಅವರು, ವಿಷಯಾಂತರ ಮಾಡೋಕೆ ಹಾಗೂ ಅಪನಂಬಿಕೆ ಮೂಡಿಸೋದಕ್ಕೆ ಸರ್ಕಾರವೇ ಫ್ರೀ ಬಿಟ್ಟಿರಬಹುದು.

ಸರ್ಕಾರವೇ ಷಡ್ಯಂತ್ರ ಮಾಡ್ತಿದೆಯೋ ಏನೋ ಅನ್ನೋ ಅನುಮಾನ ಬರ್ತಿದೆ. ವಿಚಾರಣೆ ಎದುರಿಸಿ ಬಂದವನು ಸಂದರ್ಶನ ನೀಡುವಂತಿಲ್ಲ. ವಿಠಲ್ ಗೌಡ ಹಾಗು ತಿಮರೋಡಿ ವಿಚಾರಣೆ ಎದುರಿಸಿದ್ದಾರೆ, ಬಂದು ಸಂದರ್ಶನ ಕೊಡ್ತಾರೆ ಅಂದ್ರೆ ಚರ್ಚೆಯಾಗಬೇಕಿದೆ. ಸಂದರ್ಶನ ಕೊಟ್ರು ಎಸ್‌ಐಟಿ ಮತ್ತು ಸರ್ಕಾರ ಸುಮ್ಮನಿರುತ್ತೆ ಅಂದ್ರೆ ಇಡೀ ಷಡ್ಯಂತ್ರದೊಳಗೆ ಕಾಣದ ಕೈ ಕೆಲಸ ಮಾಡ್ತಿದೆ ಎಂದರು.

ರಾಜ್ಯದಲ್ಲಿ ಮತ್ತೊಮ್ಮೆ ಜಾತಿಜನಗಣತಿ ಹಿನ್ನೆಲೆ ವಿಚಾರವಾಗಿ ಮನೆ-ಮನೆಗೂ ಹೋಗಿದ್ದೇವೆ, ಅಕ್ಯೂರೇಟ್ ಆಗಿದೆ ಅಂದಿದ್ರಿ, ಕಾಂತರಾಜು ವರದಿ ತಿಪ್ಪೆಗೆ ಹಾಕ್ತೀರಾ. ಯಾರ ಮನೆ ದುಡ್ಡು ನಿಮ್ಮ ಮನೆಯದ್ದಾ ಇಲ್ಲ ನಿಮ್ಮ ಫಾದರ್ ಮನೆಯದ್ದಾ. ಕೇಂದ್ರ ಜಾತಿ-ಜನ ಎರಡೂ ಗಣತಿ ಮಾಡ್ತಿದೆ, ಹೀಗಿದ್ರು ನಮ್ಮದು ಶೈಕ್ಷಣಿಕ ಸಮೀಕ್ಷೆ ಅಂತಿದ್ದೀರಾ. ಶೈಕ್ಷಣಿಕ ಸಮೀಕ್ಷೆಯಲ್ಲೂ ಬ್ರಾಹ್ಮಣ ಕ್ರಿಶ್ಚಿಯನ್, ಒಕ್ಕಲಿಗೆ ಕ್ರಿಶ್ಚಿಯನ್ನ, ಬಿಲ್ಲವ ಕ್ರಿಶ್ಚಿಯನ್ ಎಂಬ ಹೊಸ ಕಾಲಂ ಸೇರಿಸಿದ್ದೀರಾ.

ಹಿಂದೂ ಸಮಾಜ ಒಡೆಯೋಕೆ ನೋಡೋದು

ಸದ್ಯ ಮುಸ್ಲಿಂ ಕ್ರಿಶ್ಚಿಯನ್ ಅಂತ ಒಂದನ್ನ ಸೇರಿಸಿಲ್ಲ, ಯಾರು ಅಧಿಕಾರ ಕೊಟ್ಟಿದ್ದು ನಿಮಗೆ, ಒಂದೊಂದು ಸಲ ಅಧಿಕಾರಕ್ಕೆ ಬಂದಾಗಲೂ ನೂರಾರು ಕೋಟಿ, ದುಡ್ಡ ಹೊಡೆಯೋದಕ್ಕೆ ಅಂತಾನೇ ಈ ರೀತಿ ಸ್ಕೀಂ ಹುಡುಕ್ತೀರಾ. ಸಂಪುಟದಲ್ಲೇ ಸಹಮತ ಬರದೆ ಇದ್ದಾಗ ಅದನ್ನ ಮತ್ತೆ ತಿಪ್ಪೆಗೆ ಹಾಕೋದು. ಮತ್ತೊಂದು ಸಮೀಕ್ಷೆ ಮಾಡಿ ಜಾತಿ-ಜಾತಿಗಳ ನಡುವೆ ತಂದಿಟ್ಟು ಹಿಂದೂ ಸಮಾಜ ಒಡೆಯೋಕೆ ನೋಡೋದು ಎಂದು ರಾಜ್ಯ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.