Apple iphone 17 : ಭಾರತದಲ್ಲಿ ಆಪಲ್ ಐಫೋನ್ ಹೊಸ ಸಿರೀಸ್ ಬಿಡುಗಡೆಯಾಗಿದೆ. ಖರೀದಿಗೆ ಜನರು ಅತ್ಯುತ್ಸಾಹ ತೋರಿಸ್ತಿದ್ದಾರೆ. ರಾತ್ರಿಯಿಂದಲೇ ಸ್ಟೋರ್ ಮುಂದೆ ಕ್ಯೂ ನಿಂತಿದ್ದ ಜನರು ಗಲಾಟೆ ಮಾಡ್ಕೊಂಡಿದ್ದಾರೆ. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಭಾರತದಲ್ಲಿ ಐಫೋನ್ 17 (iPhone 17) ಹವಾ ಶುರುವಾಗಿದೆ. ಇಂದು ಬೆಳಿಗ್ಗೆಯಿಂದ ಐಫೋನ್ 17 ಸಿರೀಸ್ ಫೋನ್ ಮಾರಾಟ ಆರಂಭವಾಗಿದೆ. ಭಾರತದಲ್ಲಿ ಐಫೋನ್ ಕ್ರೇಜ್ ಹೇಗಿದೆ ಅನ್ನೋದು ಎಲ್ಲರಿಗೂ ತಿಳಿದಿರೋ ವಿಷ್ಯ. ಐಫೋನ್ ಸೆಪ್ಟೆಂಬರ್ ನಲ್ಲಿ ಹೊಸ ಸಿರೀಸ್ ಬಿಡುಗಡೆ ಮಾಡ್ತಿದ್ದಂತೆ ಅದ್ರ ಖರೀದಿಗೆ ಜನರು ಮುಗಿ ಬೀಳ್ತಾರೆ. ಇಂದೂ ಪರಿಸ್ಥಿತಿ ಭಿನ್ನವಾಗಿಲ್ಲ. ಐಫೋನ್ 17 ಖರೀದಿಗೆ ಭಾರತೀಯರು ವಿಪರೀತ ಆಸಕ್ತಿ ತೋರಿದ್ದಾರೆ. ನಿನ್ನೆ ಮಧ್ಯರಾತ್ರಿಯಿಂದ್ಲೇ ಕೆಲ ಮಳಿಗೆ ಮುಂದೆ ಜನರ ಕ್ಯೂ ಇತ್ತು. ಆದ್ರೆ ಮುಂಬೈನಲ್ಲಿ ಪರಿಸ್ಥಿತಿ ಕೈ ಮೀರಿದೆ. ಐಫೋನ್ ಗಾಗಿ ಜನರು ಕಿತ್ತಾಡಿಕೊಂಡಿದ್ದು, ಕೈ ಕೈ ಮಿಲಾಯಿಸಿದ್ದಾರೆ.
ಐಫೋನ್ 17 ಗಾಗಿ ಕಪಾಳ ಮೋಕ್ಷ : ದೆಹಲಿ ಹಾಗೂ ಮುಂಬೈನ ಆಪಲ್ ಸ್ಟೋರ್ (Apple Store) ಗಳಲ್ಲಿ ಗ್ರಾಹಕರ ದೊಡ್ಡ ಲೈನ್ ಇದೆ. ನಿರೀಕ್ಷೆಗೂ ಮೀರಿ ಜನರು ಆಪಲ್ ಐಫೋನ್ 17 ಖರೀದಿಗೆ ಮುಂದಾಗಿದ್ದಾರೆ. ಮುಂಬೈನ ಬಿಕೆಸಿ ಜಿಯೋ ಸೆಂಟರ್ನಲ್ಲಿ ಪರಿಸ್ಥಿತಿ ಎಲ್ಲೆ ಮೀರಿತ್ತು. ಆಪಲ್ ಸ್ಟೋರ್ ಹೊರಗೆ ಜನರ ದಂಡೇ ನೆರೆದಿತ್ತು. ಈ ಮಧ್ಯೆ ನೂಕುನುಗ್ಗಲು ಉಂಟಾಗಿದೆ. ಜನರು ಗಲಾಟೆ ಮಾಡ್ಕೊಂಡಿದ್ದಾರೆ. ಪರಸ್ಪರ ಕಪಾಳಮೋಕ್ಷ ಮಾಡ್ಕೊಂಡಿದ್ದಾರೆ. ಸ್ಥಳದಲ್ಲಿದ್ದ ಸೆಕ್ಯೂರಿಟಿ ಮಧ್ಯ ಪ್ರವೇಶ ಮಾಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಇದ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಸ್ಟೋರ್ ಮುಂದೆ ಕೆಲ ಗ್ರಾಹಕರು ರಾತ್ರಿಯಿಂದ್ಲೇ ಸರತಿ ಸಾಲಿನಲ್ಲಿ ನಿಂತು ಕಾಯ್ತಿದ್ದರು. ಸಾಲಿನಲ್ಲಿ ವ್ಯತ್ಯಾಸವಾಗಿ ಸಣ್ಣ ಗಲಾಟೆ ನಡೆದಿತ್ತು ಅಂತ ಸಿಬ್ಬಂದಿ ಹೇಳಿದ್ದಾರೆ.
ಎಲ್ಲರಿಗಿಂತ ಮೊದಲು ಐಫೋನ್ 17 ಖರೀದಿ ಮಾಡುವ ಆತುರ : ಐಫೋನ್ 17 ಆನ್ಲೈನ್ ನಲ್ಲೂ ಲಭ್ಯವಿದೆ. ಅಲ್ಲದೆ ಐಫೋನ್ ಅಲ್ದೆ ಬೇರೆ ಸ್ಟೋರ್ ಗಳಲ್ಲಿಯೂ ಇದು ಸಿಗಲಿದೆ. ಆದ್ರೆ ಎಲ್ಲರಿಗಿಂತ ಮೊದಲು, ಇಂದೇ ಐಫೋನ್ 17 ಖರೀದಿ ಮಾಡುವ ಆಸೆಯಲ್ಲಿ ಜನರು ಐಫೋನ್ ಸ್ಟೋರ್ ಮುಂದೆ ಕ್ಯೂ ನಿಂತಿದ್ದಾರೆ.
ಐಫೋನ್ ಬಣ್ಣಕ್ಕೆ ಜಾತಿ ನಂಟು : ದೆಹಲಿಯ ಸಾಕೇತ್ ಸೆಲೆಕ್ಟ್ ಸಿಟಿಯಲ್ಲಿರುವ ಆಪಲ್ ಸ್ಟೋರ್ ನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಐಫೋನ್ 17 ಪ್ರೊ ಮ್ಯಾಕ್ಸ್ನ ಕಾಸ್ಮಿಕ್ ಆರೆಂಜ್ ಬಣ್ಣದ ಫೋನ್ ಖರೀದಿ ಮಾಡಿದ್ದಾರೆ. ಜನರು ಈ ಬಣ್ಣವನ್ನು ಹಿಂದೂ ಧರ್ಮದ ಜೊತೆ ಲಿಂಕ್ ಮಾಡ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಆಗ್ತಿದೆ. ಕೇಸರಿ ಬಣ್ಣದ ಐಫೋನ್ ಖರೀದಿ ಮಾಡಿರುವ ಮುಸ್ಲಿಂ ವ್ಯಕ್ತಿ, ನಾನು ಮುಸ್ಲಿಂ, ಆದ್ರೆ ನನಗೆ ಈ ಬಣ್ಣ ಇಷ್ಟ ಎಂದಿದ್ದಾರೆ.
Mobile Loan: ಮೊಬೈಲ್ ಬಳಕೆದಾರರಿಗೆ ಶಾಕ್, ಲಾಕ್ ಆಗ್ಬಹುದು ನಿಮ್ಮ ಫೋನ್
ಆಪಲ್ ಐಫೋನ್ 17 : ಈ ಬಾರಿ ಆಪಲ್, ಐಫೋನ್ 17, ಐಫೋನ್ 17 ಪ್ರೋ, ಐಫೋನ್ 17 ಪ್ರೋ ಮ್ಯಾಕ್ಸ್, ಐಫೋನ್ ಏರ್ ಫೋನ್ ಬಿಡುಗಡೆ ಮಾಡಿದೆ. ಇದ್ರಲ್ಲಿ ಸಾಕಷ್ಟು ವೈಶಿಷ್ಯಗಳಿವೆ. ಆಪಲ್ ಬಣ್ಣ ಎಲ್ಲರನ್ನು ಸೆಳೆಯುತ್ತಿದೆ. ಐಫೋನ್ 17, 82,900 ರೂಪಾಯಿಯಿಂದ ಪ್ರಾರಂಭವಾಗಿದೆ. ಕಂಪನಿ 1,19,900 ರೂಪಾಯಿ ಆರಂಭಿಕ ಬೆಲೆಗೆ ಐಫೋನ್ ಏರ್ ಬಿಡುಗಡೆ ಮಾಡಿದೆ. ಐಫೋನ್ 17 ಪ್ರೊ ಮತ್ತು ಐಫೋನ್ 17 ಪ್ರೊ ಮ್ಯಾಕ್ಸ್ ಅನ್ನು ಕ್ರಮವಾಗಿ 1,34,900 ರೂಪಾಯಿ ಮತ್ತು1,49,900 ರೂಪಾಯಿ ಆರಂಭಿಕ ಬೆಲೆಗೆ ಖರೀದಿಸಬಹುದು.
