Jio Data Vanishes in 5 Minutes: Viral Post Sparks Debate ಯೂಸರ್‌ ಒಬ್ಬರು ತಮ್ಮ ಜಿಯೋ 1 ಜಿಬಿ ಡೇಟಾ ಕೇವಲ ಐದು ನಿಮಿಷಗಳಲ್ಲಿ ಖಾಲಿಯಾಗಿದೆ ಎಂದು ಆರೋಪಿಸಿ, ಇದು ವಂಚನೆಯೇ ಎಂದು ಪ್ರಶ್ನಿಸಿದ್ದಾರೆ. ಈ ಪೋಸ್ಟ್ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ.

ಬೆಂಗಳೂರು (ಸೆ.17): 4ಜಿ, 5ಜಿ ಡೇಟಾ ಹೆಸರಲ್ಲಿ ಗ್ರಾಹಕರಿಗೆ ಭಾರೀ ವಂಚನೆ ಆಗುತ್ತಿರುವ ಬಗ್ಗೆ ಎಕ್ಸ್‌ನಲ್ಲಿ ಯೂಸರ್‌ ಒಬ್ಬರು ಪೋಸ್ಟ್‌ ಮಾಡಿದ್ದಾರೆ. ಲ್ಯಾಪ್‌ಟಾಪ್‌ ಆನ್‌ ಮಾಡಿದ ಕೇವಲ ಐದೇ ನಿಮಿಷದಲ್ಲಿ ತಮ್ಮ ಜಿಯೋ 1 ಜಿಬಿ ಡೇಟಾ ಖಾಲಿಯಾಗಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ. ಇದು ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಈ ಬಗ್ಗೆ ಪರ-ವಿರೋಧದ ಚರ್ಚೆ ನಡೆಸಿದ್ದರೂ, ಜಿಯೋ ಯೂಸರ್‌ಗಳು ಮಾತ್ರ ಈಕೆ ಹೇಳುತ್ತಿರುವುದರಲ್ಲಿ ಸತ್ಯಾಂಶವಿದೆ ಎಂದಿದ್ದಾರೆ, ಮೊದಲಿಗೆ ಅತ್ಯಂತ ವೇಗವಾಗಿ ಜಿಯೋದ ಇಂಟರ್ನೆಟ್‌ ಖಾಲಿಯಾಗುತ್ತಿದೆ ಎಂದೂ ಆರೋಪಿಸಿದ್ದಾರೆ.

ನಳಿನಿ ಎಂಬ ಯೂಸರ್‌ ಮಾಡಿರುವ ಟ್ವೀಟ್ ಆನ್‌ಲೈನ್‌ನಲ್ಲಿ ದೊಡ್ಡ ವಿವಾದವನ್ನು ಹುಟ್ಟುಹಾಕಿದೆ. ಜಿಯೋ ತಮ್ಮ ಗ್ರಾಹಕರಿಗೆ ಇಂಟರ್ನೆಟ್‌ ಡೇಟಾ ವಿಚಾರದಲ್ಲಿ ಮೋಸ ಮಾಡುತ್ತಿದೆ ಎಂದು ಅವರು ನೇರವಾಗಿ ಆರೋಪ ಮಾಡಿದ್ದು, ಕೇವಲ ಐದೇ ನಿಮಿಷದಲ್ಲಿ ಜಿಯೋದ 1 ಜಿಬಿ ಡೇಟಾ ಖಾಲಿಯಾಗಿದೆ ಎಂದು ತೋರಿಸುವ ಸ್ಕ್ರೀನ್‌ಶಾಟ್‌ಅನ್ನೂ ಅವರು ಪೋಸ್ಟ್‌ ಮಾಡಿದ್ದಾರೆ.

Scroll to load tweet…

ಐದೇ ನಿಮಿಷಕ್ಕೆ ಖಾಲಿಯಾದ 1 ಜಿಬಿ ಡೇಟಾ

ಸ್ಕ್ರೀನ್‌ಶಾಟ್‌ನಲ್ಲಿ ಜಿಯೋದಿಂದ ಬಂದ ಎರಡು ಸಂದೇಶಗಳನ್ನು ಪೋಸ್ಟ್‌ ಮಾಡಿದ್ದಾರೆ. ಬೆಳಿಗ್ಗೆ 7:26 ಕ್ಕೆ ಸ್ವೀಕರಿಸಿದ ಮೊದಲ ಸಂದೇಶದಲ್ಲಿ ದೈನಂದಿನ ಡೇಟಾದ 50% ಬಳಕೆಯಾಗಿದೆ ಎಂದು ಹೇಳುತ್ತದೆ. ಕೇವಲ ಎರಡು ನಿಮಿಷಗಳ ನಂತರ, ಬೆಳಿಗ್ಗೆ 7:28 ಕ್ಕೆ, ಎರಡನೇ ಸಂದೇಶ ಬಂದಿದ್ದು ದೈನಂದಿನ ಡೇಟಾದ 100% ಖಾಲಿಯಾಗಿದೆ ಎಂದು ಹೇಳಿದೆ. ನಳಿನಿ ಅವರು ಈ ಪೋಸ್ಟ್‌ಗೆ ಜಿಯೋದ ಬ್ಯೂಟಿಫುಲ್‌ ಸ್ಕ್ಯಾಮ್‌ ಎಂದು ಶೀರ್ಷಿಕೆ ನಿಡಿದ್ದಾರೆ.

ಈ ಪೋಸ್ಟ್ ತ್ವರಿತವಾಗಿ ವೈರಲ್ ಆಗಿದ್ದು, ಅನೇಕ ಯೂಸರ್‌ಗಳು ತಮ್ಮದೇ ಆದ ಇದೇ ರೀತಿಯ ಅನುಭವಗಳನ್ನು ಹಂಚಿಕೊಂಡರು. ಒಬ್ಬ ಯೂಸರ್‌, "ನನಗೂ ಇದೇ ರೀತಿ ಆಗುತ್ತದೆ. ಪ್ರತಿ ಬಾರಿ ಡೇಟಾ ಖಾಲಿಯಾದ ಸಂದೇಶ ಬಂದಾಗ, ನಾನು ನನ್ನ ಡೇಟಾ ಬಳಕೆಯನ್ನು ಪರಿಶೀಲಿಸುತ್ತೇನೆ ಮತ್ತು ಸಂಖ್ಯೆಗಳು ಅವರು ತೋರಿಸುವುದಕ್ಕೆ ಹೊಂದಿಕೆಯಾಗುವುದಿಲ್ಲ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಯೂಸರ್‌, "ನಾನು ಅವರ ಡೇಟಾ ಸಂದೇಶಗಳನ್ನು ಅವಲಂಬಿಸುವುದನ್ನು ನಿಲ್ಲಿಸಿದ್ದೇನೆ ಮತ್ತು ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ ಮೂಲಕ ನನ್ನ ಬಳಕೆಯನ್ನು ಮೇಲ್ವಿಚಾರಣೆ ಮಾಡುತ್ತೇನೆ. ಡೇಟಾ ಬಳಕೆ ಖಚಿತಪಡಿಸಿಕೊಳ್ಳುವ ಏಕೈಕ ಮಾರ್ಗ' ಎಂದು ಬರೆದುಕೊಂಡಿದ್ದಾರೆ.

ಜಿಯೋ ನೋಟಿಫಿಕೇಶನ್‌ ವಿಶ್ವಾಸಾರ್ಹವಲ್ಲ

ಜಿಯೋದಿಂದ ಬರುವ ಡೇಟಾ ಬಳಕೆಯ ನೋಟಿಫಿಕೇಶನ್‌ಗಳು ವಿಶ್ವಾಸಾರ್ಹವಲ್ಲ ಮತ್ತು ಡೇಟಾವನ್ನು ಅದು ಇರಬೇಕಾದಕ್ಕಿಂತ ವೇಗವಾಗಿ ಖಾಲಿ ಮಾಡಲಾಗುತ್ತಿದೆ ಎಂದು ತೋರಿಸಿದೆ. ಇದು ಯೂಸರ್‌ಗಳಲ್ಲಿ ವ್ಯಾಪಕವಾದ ಅನುಮಾನವನ್ನು ಹುಟ್ಟುಹಾಕಿದೆ ಎಂದು ಕಾಮೆಂಟ್‌ಗಳು ತೋರಿಸಿವೆ.

ಹಾಗಂತ ಎಲ್ಲರೂ ನಳಿನಿ ಅವರ ಟ್ವೀಟ್‌ಅನ್ನು ಒಪ್ಪಿಕೊಂಡಿದೆ. ಇದು ಯೂಸರ್‌ಗಳ ಫೋನ್‌ ಸೆಟ್ಟಿಂಗ್‌ನಲ್ಲಿನ ಸಮಸ್ಯೆ ಎಂದಿದ್ದಾರೆ. ಬ್ಯಾಕ್‌ಗ್ರೌಂಡ್‌ನಲ್ಲಿ ಅಪ್ಲಿಕೇಶನ್‌ ರನ್‌ ಆಗುತ್ತಿದ್ದರೆ ಹೀಗಾಗುತ್ತದೆ ಎಂದಿದ್ದಾರೆ.

ಒಂದು ಕಾಮೆಂಟ್‌ನಲ್ಲಿ, "ಡೇಟಾ ಬಳಕೆ ಅವರ ಕೈಯಲ್ಲಿಲ್ಲ. ನೀವು ನಿಮ್ಮ ಬ್ಯಾಕ್‌ಗ್ರೌಂಡ್‌ ಅಪ್ಲಿಕೇಶನ್‌ಅನ್ನು ಪರಿಶೀಲಿಸಬೇಕು; ಬಹುಶಃ ಕೆಲವು ಅಪ್ಲಿಕೇಶನ್ ಅಪ್‌ಡೇಟ್‌ಗಳನ್ನು ಡೌನ್‌ಲೋಡ್ ಮಾಡಿರಬಹುದು. ನಿಮ್ಮ ಸ್ವಂತ ತಪ್ಪಿಗೆ ನೆಟ್‌ವರ್ಕ್ ಅನ್ನು ದೂಷಿಸಬೇಡಿ." ಇನ್ನೊಬ್ಬ ವ್ಯಕ್ತಿ ಹೆಚ್ಚಿನ ರೆಸಲ್ಯೂಶನ್ ವೀಡಿಯೊಗಳು ಅಥವಾ ದೊಡ್ಡ ಫೈಲ್ ಡೌನ್‌ಲೋಡ್‌ಗಳಿಂದ ಮೊಬೈಲ್ ಡೇಟಾ ವೇಗವಾಗಿ ಖಾಲಿಯಾಗುತ್ತದೆ ಎಂದಿದ್ದಾರೆ. "ಬಹುಶಃ ನೀವು ಉತ್ತಮ ಗುಣಮಟ್ಟದ ವೀಡಿಯೊವನ್ನು ಸ್ಟ್ರೀಮ್ ಮಾಡುತ್ತಿದ್ದೀರಿ ಅಥವಾ ಹಿನ್ನೆಲೆಯಲ್ಲಿ ಸಿಸ್ಟಮ್ ಅಪ್‌ಡೇಟ್‌ ಡೌನ್‌ಲೋಡ್ ಮಾಡಿರಬಹುದು. ಅರಿವಿಲ್ಲದೆಯೇ ಕೆಲವೇ ನಿಮಿಷಗಳಲ್ಲಿ 1 GB ಅನ್ನು ಬಳಸುವುದು ತುಂಬಾ ಸುಲಭ." ಎಂದು ಬರೆದಿದ್ದಾರೆ.

ಗ್ರಾಹಕರಲ್ಲಿ ಹೆಚ್ಚಾದ ಕಳವಳ

ಡೇಟಾ ಬಳಕೆಯಲ್ಲಿ ಪಾರದರ್ಶಕತೆಯ ಬಗ್ಗೆ ಗ್ರಾಹಕರಲ್ಲಿ ಕಳವಳ ಹೆಚ್ಚುತ್ತಿದೆ ಎನ್ನುವುದಂತೂ ನಿಜವಾಗಿದೆ. ಕೆಲವು ಯೂಸರ್‌ಗಳು ನೆಟ್‌ವರ್ಕ್ ಪೂರೈಕೆದಾರರು ಉದ್ದೇಶಪೂರ್ವಕವಾಗಿ ದಾರಿ ತಪ್ಪಿಸುತ್ತಿದ್ದಾರೆ ಎಂದು ನಂಬಿದರೆ, ಇನ್ನೂ ಕೆಲವರು ತಮ್ಮ ಡೇಟಾವನ್ನು ನಿರ್ವಹಿಸುವುದು ಮತ್ತು ಹಿನ್ನೆಲೆ ಬಳಕೆಯನ್ನು ಮೇಲ್ವಿಚಾರಣೆ ಮಾಡುವುದು ಬಳಕೆದಾರರ ಜವಾಬ್ದಾರಿ ಎಂದು ವಾದಿಸಿದ್ದಾರೆ.