ನನ್ನದು Teenage. ಹಸಿವಿದೆ, ದೇಹದ ಹಸಿವಿದೆ. ಹೀಗಾಗಿ ಪ್ರಮಾದ ಮಾಡಿದ್ದೇನೆ. ಅನೇಕ ಸಲ ನಮ್ಮ ದುಃಖಗಳನ್ನು, ತಪ್ಪುಗಳನ್ನು, ಪ್ರಮಾದವನ್ನು ಯಾರ ಮುಂದೆ ಹೇಳಿಕೊಳ್ಳುವುದು? ಮೊದಲ ರಾತ್ರಿ ಆದದ್ದನ್ನು ನಿಮ್ಮ ಮುಂದೆ ಹೇಳಿದ್ದೇನೆ. ನಾನು ಮಾಡಿದ್ದು ಸರಿ ಎನ್ನುತ್ತಿಲ್ಲ. ಆದರೆ ನಂಬಿದ್ದು ತಪ್ಪಾ ಹೇಳಿ?

ನನ್ನ ಹೆಸರು ರತೀನಾ (ಹೆಸರು ಬದಲಿಸಲಾಗಿದೆ). ನನ್ನ ಕತೇನ ಎಲ್ಲಿಂದ ಆರಂಭಿಸಲಿ ಅಂತಲೇ ತಿಳೀತಿಲ್ಲ. ಆದರೂ ನಾಲ್ಕು ಜನರ ಮುಂದೆ ನನ್ನ ಜೀವನದ ಕತೆ ಬಿಚ್ಚಿಟ್ಟು ಹಗುರಾಗುವ ಬಯಕೆ ನನ್ನದು. ನೀನು ಹೀಗೆ ಬದುಕಬೇಕಾಗಿರಲಿಲ್ಲ, ನೀನು ಬದುಕುತ್ತಿರೋ ರೀತಿ ಸರಿಯಿಲ್ಲ, ನೀನು ಈಗ್ಲೂ ಬೇರೆ ರೀತಿ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ, ಇಂಥ ಜೀವನ ಮಾಡ್ತಿರೋದಕ್ಕೆ ನಿನಗೆ ನಾಚಿಕೆ ಆಗೊಲ್ವಾ- ಹೀಗೆ ನೀವು ಯಾವುದೇ ಟೀಕೆ ಮಾಡಿದರೂ ನಾನು ಸ್ವಾಗತಿಸ್ತೀನಿ. ಯಾಕೆಂದರೆ ಇಂಥ ಮಾತುಗಳನ್ನು ಒಂದಷ್ಟು ಕೇಳಿದಾಗಲಾದರೂ ನಾನು ಬದಲಾಗ್ತೀನೋ ಏನೋ.

ಅದೆಲ್ಲಾ ಶುರು ಆಗಿದ್ದು ಹೀಗೆ. ಆಗ ನಂಗೆ ಇಪ್ಪತ್ತು ವಯಸ್ಸು. ಯವ್ವನ ತುಂಬಿ ತುಳುಕ್ತಾ ಇತ್ತು. ದೇಹದಲ್ಲಿ ಮೂಡುತ್ತಿದ್ದ ಏನೇನೋ ಆಸೆಗಳು. ರಾತ್ರಿಯೆಲ್ಲಾ ಯಾರೋ ರಸಿಕ, ಸುಂದರಾಂಗ ಬಂದು ಏನೇನೋ ಮಾಡಿದಂತೆ ಕನಸುಗಳು. ನನಗೂ ಈ ದೇಹದ ಮೂಲಕ ಹೊಸ ಹೊಸ ಅಡ್ವೆಂಚರ್ಸ್‌ ಮಾಡುವ ಬಯಕೆ. ಕನಸುಗಳಿಂದ ಒದ್ದೆಮುದ್ದೆಯಾಗಿದ್ದ ಒಂದು ಮುಂಜಾನೆ, ನಾನು ಅವನನ್ನು ನೋಡಿದೆ. ನಾನಿದ್ದ ಪಿಜಿಯ ಪಕ್ಕದ ಮನೆಗೆ ಬಂದಿದ್ದ ಅವನು ಚಡ್ಡಿ ಬನೀನಿನಲ್ಲಿ ಕುಳಿತು ಹಲ್ಲುಜ್ಜುತ್ತಿದ್ದ. ಅವನ ವಿಶಾಲ ಎದೆ, ಗಟ್ಟ ರಟ್ಟೆಗಳು ನೋಡಿ ನನ್ನ ಕಣ್ಣು ಅಲ್ಲಿಯೇ ಕೀಲಿಸಿತು. ಇದ್ದಕ್ಕಿದ್ದಂತೆ ಅವನೂ ನನ್ನ ನೋಡಿದ. ಕಣ್ಣು ತಪ್ಪಿಸಲು ಯತ್ನಿಸಿದೆನಾದರೂ ಸಾಧ್ಯವಾಗಲಿಲ್ಲ. ಅವನ ಮುಗುಳುನಗೆ, ನಾನಿನ್ನ ನೋಡ್ದೆ ಅಂತ ಹೇಳುತ್ತಿತ್ತು.

Mumbai ಗೆ ಹೊರಟು ನಿಂತಾಗ ನಾನೂ ಅವನ ಹಿಂದೆ ಹೋದೆ

ಅಂದೇ ಮಧ್ಯಾಹ್ನ ಅವನು ಪಕ್ಕದ ಗ್ರೋಸರಿ ಶಾಪಿನಲ್ಲಿ ಸಿಕ್ಕಿದ. ಅವನು ಮುಂಬಯಿಯವನು. ಗೆಳೆಯನ ಮನೆಗೆ ಬಂದಿದ್ದ. ಎಷ್ಟು ಸೊಗಸುಗಾರ ಅಂದರೆ, ಮಾತಿನಲ್ಲೇ ನಾನು ಆನಂದದಿಂದ ದ್ರವಿಸುವಂತೆ ಮಾಡಿಬಿಡುತ್ತಿದ್ದ. ಸೊಗಸಾದ ಹಿಂದಿ. ಒಳ್ಳೇ ಕಾರು ತಂದಿದ್ದ. ಶ್ರೀಮಂತರ ಮನೆಯವನಿರಬೇಕು ಎಂದು ಗೊತ್ತಾಗುತ್ತಿತ್ತು. ನಾನು ಕೂಡಲೇ ಅವನಿಗೆ ಬಿದ್ದೆ. ಮುಂದಿನ ಒಂದು ತಿಂಗಳ ಕಾಲ ನಾವು ಅವನ ಕಾರಿನಲ್ಲಿ ಬೆಂಗಳೂರು ಸುತ್ತಮುತ್ತ ಸುತ್ತಾಡಿದೆವು. ನನಗೂ ಸರಿಯಾದ ಉದ್ಯೋಗ ಇರಲಿಲ್ಲ. ಅವನು ಮುಂಬಯಿಗೆ ಹೊರಟು ನಿಂತಾಗ ನಾನೂ ಅವನ ಹಿಂದೆ ಹೊರಟೆ.

ನಮ್ಮಿಬ್ಬರ ಮೊದಲ ಮಿಲನದ ಅನುಭವ ಅವನದೇ ಫ್ಲ್ಯಾಟ್‌ನಲ್ಲಿ ಆಯಿತು. ಅವನ ಗೆಳೆಯರು ಚೆನ್ನಾಗಿ ಸಿಂಗರಿಸಿದ್ದರು. ಆ ರಾತ್ರಿ ಅವನು ನಕ್ಷತ್ರಲೋಕವನ್ನೇ ಧರೆಗಿಳಿಸಿದ. ನಾನು ಸುಖದ ನಡುವೆ ಉಸಿರಾಡಲು ಕಷ್ಟಪಡುತ್ತಿದ್ದ ಚಿಟ್ಟೆಯಾಗಿಬಿಟ್ಟೆ. ಎರಡನೇ ರಾತ್ರಿ ಅವನು ನಮ್ಮಿಬ್ಬರ ಶೃಂಗಾರವನ್ನು ವಿಡಿಯೋ ಮಾಡಿಕೊಳ್ಳೋಣ ಆಗದೇ ಅಂತ ಕೇಳಿದ. ಹುಚ್ಚು ಹುಮ್ಮಸ್ಸಿನಲ್ಲಿದ್ದ ನಾನು ಸೈ ಎಂದೆ. ನಮ್ಮ ಮಿಲನ ಅವನ ಮೊಬೈಲ್‌ನಲ್ಲಿ ದಾಖಲಾಯಿತು. ಆ ವಿಡಿಯೋದಲ್ಲಿ ಅವನ ಮುಖ ಇರಲಿಲ್ಲ ಎಂಬುದನ್ನು ನಾನು ಆ ಕ್ಷಣದಲ್ಲಿ ಗಮನಿಸಲೇ ಇಲ್ಲ.Teenageನಲ್ಲಿ ಆಯಿತು ಪ್ರಮಾದ

ನಾಲ್ಕನೇ ದಿನ ಅವನ ಗೆಳೆಯನೊಬ್ಬನನ್ನು ಕರೆತಂದ. ಇಬ್ಬರೂ ಸೇರಿ ನನಗೆ ವೋಡ್ಕಾ ಕುಡಿಸಿದರು. ಅದರ ನಶೆಯಲ್ಲಿ ನಾನು ತೇಲಿಹೋದೆ. ಈ ಮೊದಲೂ ಮದ್ಯ ಸವಿದಿದ್ದೆನಾದರೂ, ಅಂದಿನಷ್ಟು ಚಿತ್‌ ಹಿಂದ್ಯಾವತ್ತೂ ಆಗಿರಲಿಲ್ಲ. ಆಮೇಲೆ ಏನು ನಡೆಯಿತು ಎಂಬುದು ನನಗೆ ಸರಿಯಾಗಿ ನೆನಪಿಲ್ಲ. ಆದರೆ ಅವರಿಬ್ಬರೂ ನನ್ನ ದೇಹವನ್ನು ಚೆಂಡಿನಂತೆ ಚೆಂಡಾಡಿದರು ಎಂಬುದಂತೂ ನೆನಪಿದೆ. ನನಗದೂ ಹೊಸ ಅನುಭವ. ಅದೂ ಆ ಕ್ಷಣದಲ್ಲಿ ಸುಖಕರವಾಗಿಯೇ ಇತ್ತು.

ಆದರೆ ಅದರ ಮಾರನೇ ದಿನದಿಂದ ಮಾತ್ರ ಬದುಕು ದುರ್ಭರವಾಯಿತು. ಅವನ ಗೆಳೆಯರು ಒಬ್ಬೊಬ್ಬರಾಗಿ ಬರುತ್ತಾ ಹೋದರು. ಮೂರನೆಯವನ ನಂತರ ನಾನು ಇದನ್ನು ಪ್ರತಿಭಟಿಸಿದೆ. ಆಗ ಅವನು ತಾನು ಮಾಡಿಕೊಂಡ ವಿಡಿಯೋಗಳನ್ನು ನನ್ನ ಮುಖಕ್ಕೆ ಹಿಡಿದು ತೋರಿಸಿದ. ಏನು ನೋಡಲಿ! ಅಬ್ಬಾ! ಮದ್ಯದ ನಶೆಯಲ್ಲಿ, ಯವ್ವನದ ಅಮಲಿನಲ್ಲಿ ನಾನು ಮಾಡಿದ ಹುಚ್ಚಾಟಗಳು, ನಮ್ಮ ಕಾಮಕ್ರೀಡೆಗಳು, ನನ್ನ ನಗ್ನ ದೇಹದ ಇಂಚಿಂಚೂ ಅವನ ಮೊಬೈಲ್‌ನಲ್ಲಿದ್ದವು. ನಾನು ಮೂಕಳಾದೆ. ಅಂದು ಮೂವರೂ ಸೇರಿ ನನ್ನ ಮೇಲೆ ಎರಗಿದರು. ಅದನ್ನೂ ವಿಡಿಯೋ ಮಾಡಿಕೊಂಡರು.

ಅಂದಿನಿಂದ ನಾನು ಅವನು ಹೇಳಿದಂತೆ ಕೇಳುವ ಗೊಂಬೆಯಾದೆ. ಹಗಲು ಅವನಿಗೆ ಅಡುಗೆ ಮಾಡಿ ಹಾಕುತ್ತಿದ್ದೆ. ರಾತ್ರಿ ಅವನು ಒಬ್ಬರೋ ಇಬ್ಬರನ್ನೋ ಕರೆತರುತ್ತಾನೆ. ಅವರೊಂದಿಗೆ, ಅವರು ಹೇಳಿದಂತೆ ಕೇಳಬೇಕು. ಕೆಲವರು ವಿಚಿತ್ರವಾಗಿ, ಕ್ರೌರ್ಯದಿಂದ ವರ್ತಿಸುತ್ತಾರೆ. ಅವರನ್ನೆಲ್ಲ ಸಹಿಸಿಕೊಳ್ಳಬೇಕು. ಹೇಳಿದಂತೆ ಕೇಳದಿದ್ದರೆ ಥಳಿಸುತ್ತಾನೆ. ಸಿಗರೇಟಿನಿಂದ ಸುಡುತ್ತಾನೆ. ಬೇರೆ ಸಮಯದಲ್ಲಿ ಮುದ್ದು ಮಾಡುತ್ತಾ ಲೋಕದಲ್ಲಿ ನಿನ್ನ ಬಿಟ್ಟರೆ ನನಗೆ ಯಾರೂ ಇಲ್ಲ ಎಂದು ಓಲೈಸುತ್ತಾನೆ. ಹಗಲಿನ ಅವನ ಮುಖ ನಿಜವೋ, ರಾತ್ರಿಯ ಮುಖ ಇಜವೋ ಗೊತ್ತಾಗದೆ ತಬ್ಬಿಬ್ಬಾಗಿದ್ದೇನೆ.

ನನ್ನನ್ನು ಬಳಸಿಕೊಂಡು ಅವನು ಸಾಕಷ್ಟು ಕಾಸು ಮಾಡುತ್ತಾನೆ ಎಂದು ಬಲ್ಲೆ. ನಮ್ಮ ವಿಡಿಯೋಗಳನು ಪೋರ್ನ್‌ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾನೆ ಎಂದೂ ಗೊತ್ತಾಗಿದೆ. ಈಗ ಅವನು ನನ್ನನ್ನು ಬಂಧಿಸಿಟ್ಟಿಲ್ಲ. ಆದರೆ ಹೊರಗೆ ಬರಲು, ಊರಿಗೆ ಹಿಂದಿರುಗಲು ನನಗೇ ಧೈರ್ಯವಿಲ್ಲ. ಯಾರಾದರೂ ಗುರುತಿಸಬಹುದು ಎಂಬ ಭಯ. ನಂಗೆ ಅಪ್ಪ- ಅಮ್ಮನಿಲ್ಲ. ಹೀಗಾಗಿ ಹುಡುಕಿಕೊಂಡು ಬಂದು ರಕ್ಷಿಸುವವರೂ ಇಲ್ಲ. ಈ ಜೀವನದಲ್ಲಿ ಹಿಂದಿರುಗಿ ಬರಲಾಗದಷ್ಟು ದೂರ ಬಂದಿದೀನಿ ಎಂದು ಗೊತ್ತಾಗಿದೆ. ನನ್ನಂಥ ಹುಡುಗಿಯರು ನಿಮ್ಮ ಸುತ್ತಮುತ್ತ ಕೂಡ ಇರಬಹುದು. ಅವರ ಬಗ್ಗೆ ನಿಮ್ಗೊಂಚೂರು ಕರುಣೆ, ಅವರ ಕತೆ ಕೇಳಿಸಿಕೊಳ್ಳುವ ಸಹನೆ ಇರಲಿ ಎಂಬ ದೃಷ್ಟಿಯಿಂದ ಇದನ್ನೆಲ್ಲ ಹೇಳಿದೆ.