ಈ ವಿಡಿಯೋದಲ್ಲಿ ವಿವಿಧ ರೀತಿಯ ತರಕಾರಿಗಳು ಮತ್ತು ಹಣ್ಣುಗಳನ್ನು ಸುಲಭವಾಗಿ ಕಟ್ ಮಾಡುವುದು ಹೇಗೆಂದು ತೋರಿಸಲಾಗಿದೆ.
ಕಷ್ಟಪಟ್ಕೊಂಡು ಕೆಲಸ ಮಾಡೋದು ಯಾರಿಗೆ ತಾನೇ ಇಷ್ಟ ಆಗುತ್ತೆ. ಅದಕ್ಕೆ ಕೆಲವ್ರು ಈಸಿ ಟೆಕ್ನಿಕ್ ಹುಡುಕಿಕೊಳ್ತಾರೆ. ಇದರಿಂದ ಎರಡೆರೆಡು ಲಾಭವಾಗುತ್ತೆ. ಒಂದು ನಾವು ಕಷ್ಟ ಅನ್ಕೊಳ್ಳುವ ಕೆಲಸ ಸುಲಭವಾಗುತ್ತೆ. ಹಾಗೆಯೇ ಗಂಟೆಗಟ್ಟಲೇ ಮಾಡುವ ಕೆಲಸ ಯಾವುದೇ ಶ್ರಮವಿಲ್ಲದೆ ಕ್ಷಣಾರ್ಧದಲ್ಲಿ ಕಂಪ್ಲೀಟ್ ಆಗುವುದನ್ನ ಕಾಣಬಹುದು.
ಅಂದಹಾಗೆ ಇತ್ತೀಚಿನ ದಿನಗಳಲ್ಲಿ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ತೋರಿಸಿರುವ ಪ್ರಕಾರ, ವಿವಿಧ ರೀತಿಯ ತರಕಾರಿಗಳು ಮತ್ತು ಹಣ್ಣುಗಳನ್ನು ಸುಲಭವಾಗಿ ಕಟ್ ಮಾಡುವುದು ಹೇಗೆಂದು ತೋರಿಸಲಾಗಿದೆ. ಇದನ್ನು ನೋಡಿದ ನಂತರ ನೀವು ಬಹುಪರಾಕ್ ಹೇಳಿದರೆ ಆಶ್ಚರ್ಯವೇನೂ ಇಲ್ಲ ಬಿಡಿ.
ವಿಡಿಯೋದಲ್ಲೇನಿದೆ?
ವಿಡಿಯೋದಲ್ಲಿ, ಅನಾನಸ್ ಕಟ್ ಮಾಡುವುದು, ಬೆಳ್ಳುಳ್ಳಿ ಸಿಪ್ಪೆ ತೆಗೆಯುವುದು, ಸ್ಟ್ರಾಬೆರಿ ಕಟ್ ಮಾಡುವುದು, ಕುಂಬಳಕಾಯಿಯಿಂದ ಬೀಜಗಳನ್ನು ತೆಗೆಯುವುದು, ಕಲ್ಲಂಗಡಿಯನ್ನು ವಿಶಿಷ್ಟ ರೀತಿಯಲ್ಲಿ ಕತ್ತರಿಸುವುದು, ಜೋಳವನ್ನು ಸುಲಭವಾಗಿ ತೆಗೆಯುವುದು...ಹೀಗೆ ಅನೇಕ ಅದ್ಭುತ ಜುಗಾಡ್‌ಗಳನ್ನು ತೋರಿಸಲಾಗಿದೆ.
ಇನ್ಮೇಲೆ ಡೈಲಿ ಅನಾನಸ್ ತರ್ತಿರಿ
ಅನಾನಸ್ ಕಟ್ ಮಾಡೋದು ಎಲ್ಲರಿಗೂ ಇಷ್ಟದ ಕೆಲಸ ಅಲ್ವೇ ಅಲ್ಲ ಬಿಡಿ. ಕಟ್ ಮಾಡೋದು ಕಷ್ಟ ಅಂತಾಲೇ ಅನೇಕ ಜನರು ಅನಾನಸ್ ತಿನ್ನಲು ಇಷ್ಟಪಡುವುದಿಲ್ಲ. ಆದರೆ ಈ ವಿಡಿಯೋದಲ್ಲಿ ಅನಾನಸ್ ಕತ್ತರಿಸುವ ಜುಗಾಡ್ (ವಿಧಾನ) ನೋಡಿದ ನಂತರ ನೀವು ತಕ್ಷಣ ಅನಾನಸ್ ಖರೀದಿಸುತ್ತೀರಿ. ಅಷ್ಟೇ ಅಲ್ಲ, ಇಷ್ಟಪಟ್ಟು ತಿನ್ನೋಕೆ ಶುರು ಮಾಡ್ತೀರಿ.
ಇಲ್ಲಿದೆ ನೋಡಿ ವಿಡಿಯೋ
ರೊಟ್ಟಿ ಮಾಡುವ ವಿಡಿಯೋ ವೈರಲ್
ಇತ್ತೀಚೆಗೆ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ನಿಮ್ಮ ಹೆಚ್ಚಿನ ಸಮಯವನ್ನು ಕೇವಲ ಒಂದು ರೊಟ್ಟಿ ಮಾಡುವುದರಲ್ಲಿ ಕಳೆಯುತ್ತಿದ್ದರೆ ಬಹುಶಃ ಸಹಾಯ ಮಾಡಬಹುದು. ಹೌದು, ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಯೊಬ್ಬರು ರೊಟ್ಟಿಯನ್ನು ತಟ್ಟುವ ವಿಶಿಷ್ಟ ವಿಧಾನವನ್ನು (Roti-Making Method Earlier) ಕಂಡುಕೊಂಡಿದ್ದಾರೆ. ಅವರ ಈ ಟೆಕ್ನಿಕ್‌ನಿಂದ ಅವರು ಏಕಕಾಲದಲ್ಲಿ 4-5 ರೊಟ್ಟಿಗಳನ್ನು ತಟ್ಟಿ ಬೇಯಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಅವರು ವಿಶಿಷ್ಟವಾಗಿ ಏಕಕಾಲದಲ್ಲಿ ಅನೇಕ ರೊಟ್ಟಿಗಳನ್ನು ತಯಾರಿಸುವುದನ್ನು ಕಾಣಬಹುದು. ಈ ವಿಧಾನವು ತುಂಬಾ ಪರಿಣಾಮಕಾರಿ ಮತ್ತು ಆಸಕ್ತಿದಾಯಕವಾಗಿದ್ದು, ಜನರು ಅದನ್ನು ನೋಡಿ ಬೆರಗಾಗುತ್ತಾರೆ ಮತ್ತು ಅನೇಕ ಜನರು ಇದನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಈ ಹೊಸ ಸ್ಟೈಲ್ ರೊಟ್ಟಿ ತಯಾರಿಕೆಗೆ ವಿಶೇಷವಾಗಿ ಕೆಲಸ ಮಾಡುವ ಮಹಿಳೆಯರು, ತಾಯಂದಿರು ಹೆಚ್ಚಿನ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ ಅವರು ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲಸವನ್ನು ಮುಗಿಸಲು ಪ್ರಯತ್ನಿಸುತ್ತಿದ್ದಾರೆ. ವಿಡಿಯೋದಲ್ಲಿ, ಹಿಟ್ಟಿನ ಉಂಡೆಗಳನ್ನು ಮಾಡುವ ಮೊದಲು, ಮಹಿಳೆ ಅವುಗಳನ್ನು ಉದ್ದವಾಗಿ ಮಾಡಿ ಸ್ವಲ್ಪ ಸ್ವಲ್ಪ ದೂರದಲ್ಲಿ ಚಪ್ಪಟೆಗೊಳಿಸುತ್ತಾ ಹೋದರು. ನಂತರ, ರೊಟ್ಟಿ ತಟ್ಟುವಾಗ ಒಂದಕ್ಕೊಂದು ಅಂಟಿಕೊಳ್ಳದಂತೆ ಸ್ವಲ್ಪ ಒಣ ಹಿಟ್ಟನ್ನು ಸ್ವಲ್ಪ ಸ್ವಲ್ಪವೇ ಅವುಗಳ ಮೇಲೆ ಹಾಕಿದರು. ಈಗ ಉಂಡೆಗಳಾಗಿ ಬೇರ್ಪಡಿಸಿ, ಒಂದರ ಮೇಲೊಂದರಂತೆ ಇರಿಸಿದರು. ಆ ನಂತರ ಈ ಎಲ್ಲಾ ರೊಟ್ಟಿಗಳನ್ನು ಒಟ್ಟಿಗೆ ರೋಲಿಂಗ್ ಪಿನ್ (ಲಟ್ಟಣಿಗೆ) ತೆಗೆದುಕೊಂಡು ಲಟ್ಟಿಸಿ, ಒಂದಕ್ಕೊಂದು ಅಂಟಿಕೊಳ್ಳದಂತೆ ತೆಗೆದು ಬೇಯಿಸಿದರು. ಇದೇ ರೀತಿ 4-5 ರೊಟ್ಟಿಗಳನ್ನು ಒಟ್ಟಿಗೆ ಸುತ್ತಿ ರೆಡಿ ಮಾಡಲಾಯ್ತು. ಇದು ಒಂದು ರೊಟ್ಟಿ ತೆಗೆದುಕೊಂಡಷ್ಟೇ ಸಮಯವನ್ನು ಮಾತ್ರ ತೆಗೆದುಕೊಂಡಿತು. ಆದರೆ 4-5 ರೊಟ್ಟಿಗಳು ಸಿದ್ಧವಾದವು. ಮಹಿಳೆಯ ಈ ವಿಶಿಷ್ಟ ಟೆಕ್ನಿಕ್ ಸಮಯವನ್ನು ಉಳಿಸುವುದಲ್ಲದೆ, ಶ್ರಮವನ್ನು ಅರ್ಧದಷ್ಟು ಕಡಿಮೆ ಮಾಡುತ್ತದೆ.