ರಾಯಚೂರಿನ ಕೆ.ಇರಬೇರಾ ಗ್ರಾಮದಲ್ಲಿ ಮೂವರು ಯುವತಿಯರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಇನ್ನಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ರಾಯಚೂರು: ಒಂದೇ ಗ್ರಾಮದ ಮೂವರು ಯುವತಿಯರು ಆತ್ಮ*ಹತ್ಯೆಗೆ ಯತ್ನಿಸಿದ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಮೂವರಲ್ಲಿ 17 ವರ್ಷದ ರೇಣುಕಾ ಎಂಬ ಯುವತಿ ಸಾವನ್ನಪ್ಪಿದ್ದು, ಇನ್ನಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕೆ.ಇರಬೇರಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಮೂವರು ಯುವತಿಯರ ನಿರ್ಧಾರದಿಂದ ಗ್ರಾಮಸ್ಥರು ಆಘಾತಕ್ಕೊಳಗಾಗಿದ್ದಾರೆ. ಮೂವರು ಯುವತಿಯರು ಯಾವಾಗಲೂ ಜೊತೆಯಾಗಿ ಓಡಾಡುತ್ತಿದ್ದರು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. 18 ವರ್ಷದ ತಿಮ್ಮಕ್ಕ ಮತ್ತು 17ರ ಸುನಿತಾ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಇಬ್ಬರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಷ ಸೇವಿಸಿದ ತಿಮ್ಮಕ್ಕ, ಬಾವಿಗೆ ಹಾರಿದ ಸುನಿತಾ, ರೇಣುಕಾ
ಮೂವರು ಯುವತಿಯರ ಪೈಕಿ ತಿಮ್ಮಕ್ಕ ಮೊದಲು ವಿಷ ಸೇವಿಸಿದ್ದಾಳೆ. ನಂತರ ರೇಣುಕಾ ಮತ್ತು ಸುನಿತಾ ವಿಷ ಸೇವನೆ ಮಾಡೋದನ್ನು ನೋಡಿದ ಮತ್ತೋರ್ವ ಯುವತಿ ತಡೆದಿದ್ದಾಳೆ. ನಂತರ ತಿಮ್ಮಕ್ಕ ಸತ್ತಿದ್ದಾಳೆ ಎಂದು ತಿಳಿದು ರೇಣುಕಾ ಮತ್ತು ಬಾವಿಗೆ ಜಿಗಿದಿದ್ದಾರೆ. ಕೂಡಲೇ ಸ್ಥಳೀಯರು ಬಾವಿಯಲ್ಲಿದ್ದ ಇಬ್ಬರನ್ನು ಮೇಲೆಕ್ಕೆತ್ತಿದ್ದಾರೆ. ಆದ್ರೆ ಅಷ್ಟರಲ್ಲಿ ರೇಣುಕಾ ಸಾವನ್ನಪ್ಪಿದ್ದಳು. ತಿಮ್ಮಕ್ಕ ಮತ್ತು ಸುನಿತಾಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಇದೀಗ ರಿಮ್ಸ್‌ಗೆ ಶಿಫ್ಟ್ ಮಾಡಲಾಗಿದೆ.
ಯುವತಿಯರ ಪೋಷಕರಲ್ಲಿ ಆತಂಕ
ಇಂದು ಮೂವರು ಜಮೀನಿನ ಕೆಲಸಕ್ಕೆ ಬಂದಿದ್ದರು. ಆರೋಗ್ಯ ಸರಿ ಇಲ್ಲ ಎಂದು ಹೋಗಿ ವಿಷ ಕುಡಿದಿದ್ದಾರೆ. ರೇಣುಕಾ ಅಲ್ಲೇ ಸತ್ತಿದ್ದಾಳೆ. ಮೂವರು ಜೊತೆಯಲ್ಲಿಯೇ ಇರುತ್ತಿದ್ದರು. ಆದ್ರೆ ಯಾಕೆ ಹೀಗೆ ಮಾಡಿದ್ರು ಅಂತ ಗೊತ್ತಾಗುತ್ತಿಲ್ಲ. ವಿಷ ಕುಡಿದ ತಿಮ್ಮಕ್ಕ ಹೊಲದಲ್ಲಿ ಬಿದ್ದಿದ್ದಳು. ಅವರಿಬ್ಬರು ಬಾವಿಗೆ ಹಾರಿದ್ದರು. ಇದೀಗ ಬದುಕುಳಿದ ಇಬ್ಬರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸುತ್ತಿದ್ದೇವೆ. ಇವರಿಗೆ ಮನೆಯಲ್ಲಿಯೂ ಯಾರು ಏನು ಅಂದಿರಲಿಲ್ಲ ಎಂದು ಯುವತಿಯರ ಸಂಬಂಧಿ ಹಣುಮಂತಿ ಎಂಬವರು ಹೇಳಿದ್ದಾರೆ. ವೈದ್ಯರು ಗುಣಮಖರಾಗುತ್ತಾರೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಮದುವೆಯಾಗಿ ಹೆಗಲೆತ್ತರ ಮಕ್ಕಳಿದ್ರೂ ಯುವಕನೊಂದಿಗೆ ಆಂಟಿಯ ಸಂಬಂಧ; ಕತ್ತು ಸೀಳಿ ಕೊಂದ ಗಂಡ
ಪೊಲೀಸರಿಂದ ತನಿಖೆ ಆರಂಭ
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ರೇಣುಕಾ ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಕುಟುಂಬಸ್ಥರಿಂದ ಹೇಳಿಕೆ ದಾಖಲಿಸಿಕೊಂಡು ಎಲ್ಲಾ ಆಯಾಮದಲ್ಲಿ ತನಿಖೆ ಆರಂಭಿಸಿದ್ದಾರೆ. ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯ ಕೆ.ಇರಬಗೇರಾ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ 26 ವರ್ಷದ ಹರ್ಷಿತಾ ಶವ ಪತ್ತೆ: ಗಂಡ ನಂದೀಶ್ ಎಸ್ಕೇಪ್, ಇಬ್ಬರು ಮಕ್ಕಳು ಅನಾಥ
