ಯಾದಗಿರಿಯ ಕೊಡೇಕಲ್‌ನಲ್ಲಿ ದೀಪಾವಳಿ ದಿನ ನಾಪತ್ತೆಯಾಗಿದ್ದ ಪಿಯುಸಿ ವಿದ್ಯಾರ್ಥಿನಿ ಸೌಜನ್ಯ, ಕೃಷ್ಣಾ ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಹುಣಸಗಿ ಸಿಪಿಐ ವಾಹನಕ್ಕೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಫೇರಾವು ಹಾಕಿದ್ದರು.

ಯಾದಗಿರಿ: ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ದೀಪಾವಳಿ ಅಮವಾಸ್ಯೆ ದಿನ ಮನೆಯಿಂದ ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿನಿ ಶನಿವಾರ ಶವವಾಗಿ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಕೊಡೇಕಲ್‌ ಗ್ರಾಮದ ಶರಣಪ್ಪ ಹಡಪದ ಎಂಬುವರ ಮಗಳು ಸೌಜನ್ಯ (17) ಶಹಾಪೂರ ತಾಲೂಕಿನ ಗೋಗಿ ಬಳಿಯ ಕೃಷ್ಣಾ ಎಡದಂಡೆ ಕಾಲುವೆಯಲ್ಲಿ ಶವ ಪತ್ತೆಯಾಗಿದೆ.

ಪಿಯುಸಿ ಓದುತ್ತಿದ್ದ ಸೌಜನ್ಯ

ಕೊಡೇಕಲ್ ಗ್ರಾಮದ ನಿವಾಸಿ ಶರಣಪ್ಪ ಹಡಪದ ಪುತ್ರಿ ಗಂಗಾ ವತಿಯಲ್ಲಿ ಪ್ರಥಮ ಪಿಯುಸಿ ಅಭ್ಯಾಸ ಮಾಡುತ್ತಿದ್ದ ಸೌಜನ್ಯ (17) ಅಮವಾಸ್ಯೆ ದಿನ ಸಂಜೆ ಮನೆಯಿಂದ ನಾಪತ್ತೆಯಾಗಿದ್ದು ಗಾಬರಿಗೊಂಡ ಪಾಲಕರು ಸಂಬಂಧಿಕರ ಮನೆಗಳಲ್ಲಿ ಮಗಳಿಗಾಗಿ ಹುಡುಕಾಟ ನಡೆಸಿದ್ದರು. ಎಲ್ಲಿಯೂ ಮಗಳು ಸಿಗದೆ ಹೋದ ಸಂಧರ್ಭದಲ್ಲಿ ಅ.24 ಶುಕ್ರ ವಾರ ಮಗಳು ಕಾಣದಿರುವ ಕುರಿತಂತೆ ಕೊಡೇಕಲ್ ಠಾಣೆಯಲ್ಲಿ ನಾಪತ್ತೆ ಹಾಗೂ ಅಪಹರಣ ಕುರಿತಾಗಿ ಪ್ರಕರಣ ದಾಖಲಿಸಿದ್ದರು.

ಕಾಲುವೆಯಲ್ಲಿ ಪತ್ತೆಯಾದ ಶವ

ಮಗಳು ನಾಪತ್ತೆಯಾಗಿದ್ದಾಳೆ ಎಂದು ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದ್ದರೆ, ಅತ್ತ ಶಹಾಪೂರ ತಾಲೂಕಿನ ಗೋಗಿ ಗ್ರಾಮದ ಸೇವಾ ನಾಯಕ ತಾಂಡಾ ಬಳಿ ಭೋರುಕಾ ಕೃಷ್ಣಾ ಕಾಲುವೆಯಲ್ಲಿ ಹೆಣ್ಣು ಮಗಳೊಬ್ಬಳ ಶವ ದೊರೆ ತಿರುವ ಕುರಿತಂತೆ ಮಾಹಿತಿ ಬಂದಿತ್ತು. ಗೋಗಿ ಪೊಲೀಸ್ ಠಾಣೆಯವರರು ಕಾಲುವೆಯಲ್ಲಿ ಗುರುತು ಸಿಗದ ಸ್ಥಿತಿಯಲ್ಲಿದ ಶವದ ಫೋಟೋವನ್ನು ಕೊಡೇಕಲ್ ಪೊಲೀಸ್ ಅಪ್ರಾಪ್ತ ಸೌಜನ್ಯಳ ಪಾಲಕರು ಇವಳು ತಮ್ಮ ಮಗಳು ಎಂದು ಗುರುತಿಸಿದ್ದಾರೆ.

ಹುಣಸಗಿ ಸಿಪಿಐ ವಾಹನಕ್ಕೆ ಘೇರಾವು ಹಾಕಿದ ಪೋಷಕರು & ಗ್ರಾಮಸ್ಥರು

ಶನಿವಾರ ಸಂಜೆ ಮೃತ ಸೌಜನ್ಯಳ ಶವವನ್ನು ಆಂಬ್ಯೂಲೆನ್ಸ್ ನಲ್ಲಿ ಕೊಡೇಕಲ್ ಗ್ರಾಮಕ್ಕೆ ಕರೆ ತಂದ ಸಂದರ್ಭದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಹುಣಸಗಿ ಸಿಪಿಐ ವಾಹನಕ್ಕೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಫೇರಾವು ಹಾಕಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ, ಸೌಜನ್ಯಳ ಸಾವು ಆತ್ಮ*ಹತ್ಯೆಯಲ್ಲ ನನ್ನ ಮಗಳನ್ನು ಕೊ*ಲೆ ಮಾಡಿ ಶವವವನ್ನು ಕಾಲುವೆಗೆ ಹಾಕಿದ್ದಾರೆ ಎಂದು ಸೌಜನ್ಯಳ ತಂದೆ ಶರಣಪ್ಪ ಹಾಗೂ ಸಂಬಂಧಿಕರು ಆರೋಪಿಸಿ, ಕೊಲೆಗಾರರ ಬಂಧಿಸುವಂತೆ ಆಗ್ರಹಿಸಿದರು.

ಇದನ್ನೂ ಓದಿ: ಸ್ನೇಹಿತೆಯ ಖಾಸಗಿ ವಿಡಿಯೋ ಕದ್ದು 2 ಕೋಟಿಗೆ ಬ್ಲ್ಯಾಕ್​ಮೇಲ್​: 'ಬ್ಯೂಟಿ ಕ್ವೀನ್'​ ಕನ್ನಡತಿಯ ಖತರ್ನಾಕ್​ ಕೃತ್ಯ! FIR ದಾಖಲು

ಸಾವಿನಲ್ಲಿ ಶಂಕೆ ವ್ಯಕ್ತಪಡಿಸಿ ದೂರು ದಾಖಲು

ಶವ ಪರೀಕ್ಷೆಯನ್ನು ನಡೆಸಲಾಗಿದ್ದು, ವರದಿ ಬಂದ ನಂತರವಷ್ಟೆ ಸಾವಿಗೆ ನಿಖರ ಕಾರಣ ಗೊತ್ತಾಗುತ್ತದೆ. ಒಂದು ವೇಳೆ, ಇದು ಕೊಲೆಯೇ ಆಗಿದ್ದರೆ ಆರೋಪಿಗಳನ್ನು ಬಂಧಿಸುವುದಾಗಿ ಸಿಪಿಐ ರವಿಕುಮಾರ ಹೇಳಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದ್ದಾರೆ. ಇನ್ನೂ ಭೋರುಕಾ ಕಾಲುವೆಯಲ್ಲಿ ದೊರೆತ ಶವ ಹೊರತೆಗೆದಿರುವ ಗೋಗಿ ಠಾಣೆಯಲ್ಲೂ ಕೂಡಾ ಸಾವಿನಲ್ಲಿ ಶಂಕೆ ವ್ಯಕ್ತಪಡಿಸಿ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಬೆಂಗಳೂರು: ನಿಲ್ಲಿಸಿದ್ದ ಆಟೋದಲ್ಲಿ ಮಹಿಳೆ ಹೆಣ ಪತ್ತೆ, ನಾಲ್ಕು ಮಕ್ಕಳ ತಾಯಿಯನ್ನು ಕೊಂದ ಪ್ರಿಯಕರ!