ಜಾತ್ರೆಯೊಂದರಲ್ಲಿ ಜಾಯಿಂಟ್ ವ್ಹೀಲ್‌ನಿಂದ ಮಹಿಳೆಯೊಬ್ಬರು ಕೆಳಗೆ ಜಾರಿಬಿದ್ದ ಘಟನೆ ನಡೆದಿದೆ. ಅದೃಷ್ಟವಶಾತ್ ಕಬ್ಬಿಣದ ರಾಡನ್ನು ಹಿಡಿದುಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಭಯಾನಕ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಊರ ಜಾತ್ರೆಗಳಲ್ಲಿ, ಹಾಗೂ ಕೃಷಿ ಮೇಳ ಆಹಾರ ಮೇಳ ಮುಂತಾದ ಬಹತ್ ಮೇಳಗಳಲ್ಲಿ ಮನೋರಂಜನೆಗಾಗಿ ಜಾಯಿಂಟ್ ವ್ಹೀಲ್, ಅತ್ತಿ ವಾಲಾಡುವ ದೋಣಿ, ಉಯ್ಯಾಲೆ ಮರಣಬಾವಿ ಸೇರಿದಂತೆ ಹಲವರು ರೀತಿಯ ಸಾಹಸ ಕ್ರೀಡೆಗಳ ಯಂತ್ರಗಳು ಇರುವುದನ್ನು ನೀವು ನೋಡಿರಬಹುದು ಅದೇ ರೀತಿ ಇಲ್ಲೊಂದು ಕಡೆ ಮಹಿಳೆಯೊಬ್ಬರು ಊರ ಜಾತ್ರೆಯೊಂದರಲ್ಲಿ ಜಾಯಿಂಟ್ ವ್ಹೀಲ್ ಏರಿದ್ದು, ಆದರೆ ಏನಾಯ್ತೋ ಏನೋ ಕುಳಿತ ಸೀಟಿನಿಂದ ಅವರು ಜಾರಿದ್ದಾರೆ. ಆದರೆ ಅದೃಷ್ಟವಶಾತ್ ಕೆಳಗೆ ಬಿದ್ದಿಲ್ಲ ತೂಗಾಡುವ ತೊಟ್ಟಿಲಿನ ಕಬ್ಬಿಣದ ರಾಡನ್ನು ಹಿಡಿದುಕೊಂಡು ಆ ಮಹಿಳೆ ಆ ಮಹಿಳೆ ನೇತಾಡಿ ಜೀವ ಉಳಿಸಿಕೊಂಡಿದ್ದಾರೆ. ಈ ದೃಶ್ಯ ಮೊಬೈಲ್ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಅಂದಹಾಗೆ ಈ ಘಟನೆ ನಡೆದಿರುವುದು ಛತ್ತೀಸ್‌ಗಢದ ಭರತಪರದಲ್ಲಿ ಜಾಯಿಂಟ್ ವ್ಹೀಲ್ಏರಿದ ಮಹಿಳೆ ಅಚಾನಕ್ ಆಗಿ ಸೀಟಿನಿಂದ ಕೆಳಗೆ ಜಾರಿದ್ದು, 30 ಅಡಿ ಎತ್ತರದಲ್ಲಿ ಅವರು ಗಾಳಿಯಲ್ಲಿ ನೇತಾಡುತ್ತಿರುವುದು ವೀಡಿಯೋದಲ್ಲಿ ರೆಕಾರ್ಡ್ ಆಗಿದೆ. cute_boy__munna_ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ವೀಡಿಯೋದಲ್ಲಿ ನೀಲಿ ಬಣ್ಣದ ಸೀರೆ ಉಟ್ಟಿರುವ ಮಹಿಳೆಯೊಬ್ಬರು ಜಾಯಿಂಟ್ ವ್ಹೀಲ್‌ನ ರಾಡು ಹಿಡಿದು ನೇತಾಡುತ್ತಿರುವುದು ಕಂಡು ಬರುತ್ತಿದೆ. ಮಹಿಳೆ ನೇತಾಡುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಯಂತ್ರವನ್ನು ನಿಧಾನಗೊಳಿಸಿ ಕೆಳಗೆ ತರಲಾಯ್ತು. ಆದರೆ ಅದೇನಾಯ್ತೋ ಏನೋ ಮತ್ತೆ ಈ ಜಾಯಿಂಟ್ ವ್ಹೀಲ್ ಮಹಿಳೆ ನೇತಾಡುತ್ತಿದ್ದಾಗಲೇ ಮೇಲೇರಿದ್ದು, ಬಳಿಕ ಜಾಯಿಂಟ್ ವ್ಹೀಲ್ ಯಂತ್ರದ ಸಿಬ್ಬಂದಿ ಮೇಲೇರಿ ಹೋಗಿ ಸ್ಪೈಡರ್ ಮ್ಯಾನ್‌ನಂತೆ ಆ ಮಹಿಳೆಯನ್ನು ಕೈ ಹಿಡಿದು ಮೇಲೆತ್ತಿ ಜಾಯಿಂಟ್ ವ್ಹೀಲ್‌ನ ತೊಟ್ಟಿಲೊಳಗೆ ಕೂರಿಸಿದ್ದಾರೆ.
ಈ ವೀಡಿಯೋ ಈಗ ಭಾರಿ ವೈರಲ್ ಆಗ್ತಿದ್ದು ನೆಟ್ಟಿಗರು ಹಲವು ಕಾಮೆಂಟ್ ಮಾಡಿದ್ದಾರೆ. ಅನೇಕರು ಮಹಿಳೆಯನ್ನು ರಕ್ಷಿಸಿದ ಯುವಕನಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಆ ಯುವಕನ ಕಾರ್ಯಕ್ಕೆ ಧನ್ಯವಾದಗಳು ಆದರೆ ಈ ಮಹಿಳೆ ಅಲ್ಲಿ ನೇತಾಡುವಂತಾಗಿದ್ದು ಹೇಗೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.
ಈ ವೀಡಿಯೋ ಈಗ ಭಾರಿ ವೈರಲ್ ಆಗ್ತಿದ್ದು ನೆಟ್ಟಿಗರು ಹಲವು ಕಾಮೆಂಟ್ ಮಾಡಿದ್ದಾರೆ. ಸಾಹಕ್ರೀಡೆಗಳ ಸಮಯದಲ್ಲಿ ಅನಾಹುತಗಳಾಗುವುದು ಇದೇ ಮೊದಲಲ್ಲ, ಕೆಲ ದಿನಗಳ ಹಿಂದೆ ಮರಣಬಾವಿಯ ಸ್ಟಂಟ್ ಮಾಡುತ್ತಿದ್ದ ಸ್ಟಂಟ್ ಮಾಸ್ಟರ್ ಓರ್ವ ಬೈಕ್‌ನಿಂದ ಬಿದ್ದು ಗಂಭೀರ ಗಾಯಗೊಂಡಂತಹ ಘಟನೆ ನಡೆದಿತ್ತು. ಉತ್ತರ ಪ್ರದೇಶದ ಮಹಾರಾಜಗಂಜ್‌ನ ಪಂಚಮುಖಿ ಶಿವ ದೇವಾಲಯದ ಆವರಣದಲ್ಲಿ ಸಾವನ್ ಜಾತ್ರೆಯ ಸಂದರ್ಭದಲ್ಲಿ ಈ ದುರಂತ ನಡೆದಿತ್ತು. ಈ ಘಟನೆಯ ವೀಡಿಯೋವು ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು, ಆಶ್ಚರ್ಯವೆಂದರೆ ಸವಾರ ಬೈಕ್‌ನಿಂದ ಬಿದ್ದ ನಂತರವೂ ಮೋಟಾರ್ ಸೈಕಲ್ ಸುಮಾರು ಒಂದು ಗಂಟೆಗಳ ಕಾಲ ಚಾಲಕನಿಲ್ಲದೆ ಬಾವಿಯ ಲಂಬವಾದ ಗೋಡೆಗಳ ಮೇಲೆ ಅತಿ ವೇಗದಲ್ಲಿ ಸುತ್ತುತ್ತಲೇ ಇತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದರು, ಜೊತೆಗೆ ವೀಡಿಯೋದಲ್ಲಿ ಇದು ಕಾಣುತ್ತಿತ್ತು.
