2019ರಲ್ಲಿ ಸಂವಿಧಾನದ 370ನೇ ಪರಿಚ್ಛೇದ ರದ್ದತಿ ಬಳಿಕ ರಾಜ್ಯ ಸ್ಥಾನಮಾನ ಕಳೆದುಕೊಂಡಿರುವ ಜಮ್ಮು- ಕಾಶ್ಮೀರಕ್ಕೆ ಆ.15ರ ಸ್ವಾತಂತ್ರ್ಯ ದಿನದಂದು ಮತ್ತೆ ಆ ಸ್ಥಾನಮಾನ ದೊರಕುವ ಸಾಧ್ಯತೆ ಇದೆ.

 ನವದೆಹಲಿ: 2019ರಲ್ಲಿ ಸಂವಿಧಾನದ 370ನೇ ಪರಿಚ್ಛೇದ ರದ್ದತಿ ಬಳಿಕ ರಾಜ್ಯ ಸ್ಥಾನಮಾನ ಕಳೆದುಕೊಂಡಿರುವ ಜಮ್ಮು- ಕಾಶ್ಮೀರಕ್ಕೆ ಆ.15ರ ಸ್ವಾತಂತ್ರ್ಯ ದಿನದಂದು ಮತ್ತೆ ಆ ಸ್ಥಾನಮಾನ ದೊರಕುವ ಸಾಧ್ಯತೆ ಇದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಆ.15ರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಉಲ್ಲೇಖ ಮಾಡುವ ಸಾಧ್ಯತೆ ಇದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.ಜಮ್ಮು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಆ.5, 2019ರಂದು ಕೇಂದ್ರ ಸರ್ಕಾರ ತೆಗೆದು ಹಾಕಿ ಕೇಂದ್ರಾಡಳಿತ ಪ್ರದೇಶವನ್ನಾಗಿಸಿತ್ತು. ಈ ವೇಳೆ ಅಖಂಡ ಜಮ್ಮು-ಕಾಶ್ಮೀರವನ್ನು ಲಡಾಖ್‌ ಹಾಗೂ ಜಮ್ಮು-ಕಾಶ್ಮೀರ ಎಂಬ 2 ಪ್ರದೇಶಗಳಾಗಿ ವಿಂಗಡಿಸಿತ್ತು. ಅಂದಿನಿಂದಲೇ ರಾಜ್ಯ ಸ್ಥಾನಮಾನ ಕೊಡುವಂತೆ ಜಮ್ಮು ಕಾಶ್ಮೀರದ ನಾಯಕರ ಬೇಡಿಕೆ ಇದೆ. ಈ ಬಹುದಿನದ ಬೇಡಿಕೆಗೆ ಕೇಂದ್ರ ಸರ್ಕಾರವು ಶೀಘ್ರ ಸ್ಪಂದಿಸಲಿದೆ ಎಂದು ಮೂಲಗಳು ತಿಳಿಸಿವೆ.

ಮುಂಬೈ ಏರ್ಪೋರ್ಟಲ್ಲಿ ಮಾಸ್ಕ್‌ ತೆಗೆಯಲು ಅಲ್ಲು ಹಿಂದೇಟು: ವೈರಲ್‌

ಮುಂಬೈ: ಪುಷ್ಪಾ ಖ್ಯಾತಿಯ ನಟ ಅಲ್ಲು ಅರ್ಜುನ್‌ ಅವರು ಮುಂಬೈ ವಿಮಾನ ನಿಲ್ದಾಣದ ಭದ್ರತಾ ತಪಾಸಣೆ ವೇಳೆ ತಾವು ಧರಿಸಿದ್ದ ಮಾಸ್ಕ್‌ ತೆಗೆಯಲು ಹಿಂದೇಟು ಹಾಕಿದ್ದಅರೆ. ಅವರ ಈ ನಡೆಗೆ ನೆಟ್ಟಿಗರು ಆಕ್ಷೇಪಿಸಿದ್ದಾರೆ.ಅಲ್ಲು ಅವರು ಮುಂಬೈ ಏರ್ಪೋರ್ಟ್‌ನಲ್ಲಿ ಭದ್ರತಾ ತಪಾಸಣೆಗೆ ತೆರಳುವ ವೇಳೆ ಸಿಬ್ಬಂದಿಯು ನಟನಿಗೆ ಮಾಸ್ಕ್‌ ಮತ್ತು ಸನ್‌ಗ್ಲಾಸ್‌ ತೆರೆಯುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಕ್ಷಣ ಹೊತ್ತು ಅಸಮಾಧಾನಗೊಂಡ ಅರ್ಜುನ್‌, ಸಿಬ್ಬಂದಿ ಜತೆ ಚರ್ಚೆ ನಡೆಸಿ, ಬಳಿಕ ಮಾಸ್ಕ್‌ ತೆಗೆದು, ಮತ್ತೆ ಧರಿಸಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ನಟನ ನಡೆಗೆ ಆಕ್ರೋಶ ವ್ಯಕ್ತವಾಗಿದೆ. ‘ನೀವು ನಟರೇ ಆಗಿರಬಹುದು. ಮೊದಲು ನಿಯಮಗಳಿಗೆ ಬದ್ಧರಾಗಿರಿ’ ಎಂದು ಜನರು ತಿವಿದಿದ್ದಾರೆ. ‘ಭದ್ರತಾ ಸಿಬ್ಬಂದಿಯ ನಡೆ ಶೇ.100ರಷ್ಟು ಸರಿಯಿದೆ’ ಎಂದು ಬೆಂಬಲಿಸಿದ್ದಾರೆ.

ಸಿರಿಯಾ ಆಸ್ಪ​ತ್ರೆಯಲ್ಲಿ ಮಂಡಿ ಊರ​ದೇ ಎದ್ದು ನಿಂತ​ವರು ಉಗ್ರ​ರಿಂದ ಹತ್ಯೆ

ಡಮಾ​ಸ್ಕ​ಸ್‌: ಸಿರಿ​ಯಾ​ದಲ್ಲಿ ಆಂತ​ರಿಕ ಸಂಘರ್ಷ ಮಿತಿ ಮೀರು​ತ್ತಿದ್ದು ಸರ್ಕಾ​ರದ ನಿಯಂತ್ರ​ಣ​ದ​ಲ್ಲಿದ್ದ ಆಸ್ಪ​ತ್ರೆ​ಯೊಂದಕ್ಕೆ ನುಗ್ಗಿದ ಉಗ್ರರು ಅಲ್ಲಿನ ಸಿಬ್ಬಂದಿ​ಯನ್ನು ಮಂಡಿ ಊರಿ ಕೂರು​ವ​ಂತೆ ಆದೇ​ಶಿ​ಸಿ​ದ್ದಾರೆ. ಎದ್ದು ನಿಂತ ಸಿಬ್ಬಂದಿ​ಯನ್ನು ಹತ್ಯೆ ಮಾಡಿ​ದ್ದಾ​ರೆ.