ದೇವಸ್ಥಾನಗಳಿಗೆ ಭಕ್ತರು ನೀಡುವ ಕಾಣಿಕೆ ಹಣವನ್ನು ಮದುವೆ ಸಭಾಂಗಣಗಳಂತಹ ವಾಣಿಜ್ಯ ಉದ್ದೇಶಗಳಿಗೆ ಬಳಸಬಾರದು, ಬದಲಿಗೆ ಶಿಕ್ಷಣ ಮತ್ತು ವೈದ್ಯಕೀಯ ಸೌಲಭ್ಯಗಳಿಗೆ ವಿನಿಯೋಗಿಸಬೇಕು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ನವದೆಹಲಿ: ಭಕ್ತರು ದೇವರಿಗೆ ಹಾಕುವ ಕಾಣಿಕೆಯ ಹಣ ಶಿಕ್ಷಣ, ವೈದ್ಯಕೀಯ ಸಂಸ್ಥೆಗಳಂತಹ ಕಾರ್ಯಗಳಿಗೆ ವಿನಿಯೋಗವಾಗಬೇಕೇ ಹೊರತು ಮದುವೆ ಸಭಾಂಗಣಗಳನ್ನು ನಿರ್ಮಿಸುವುದಕ್ಕಲ್ಲ ಎಂದು ಸುಪ್ರೀಂಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ.
ಭಕ್ತರು ಹುಂಡಿಗೆ ಹಾಕಿದ ಹಣ ವಾಣಿಜ್ಯ ಉದ್ದೇಶಗಳಿಗೆ ಬಳಸಬಾರದು
ತಮಿಳುನಾಡಿನಲ್ಲಿ ದೇವಸ್ಥಾನಗಳಿಗೆ ಭಕ್ತರಿಂದ ಹರಿದು ಬಂದ 80 ಕೋಟಿ ರು.ಗಳನ್ನು ಬಳಸಿ ರಾಜ್ಯದ 27 ದೇವಸ್ಥಾನಗಳಲ್ಲಿ ಮದುವೆ ಸಭಾಂಗಣಗಳನ್ನು ನಿರ್ಮಿಸಿ, ಅವುಗಳನ್ನು ಬಾಡಿಗೆಗೆ ಕೊಡುವುದಾಗಿ ತಮಿಳುನಾಡು ಸರ್ಕಾರ ಘೋಷಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲವರು ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ಭಕ್ತರ ಕಾಣಿಕೆ ಹಣವನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವಂತಿಲ್ಲ ಎಂದು ಆ.19ರಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು.
ಮದ್ರಾಸ್ ಹೈಕೋರ್ಟ್ ತೀರ್ಪು ಎತ್ತಿ ಹಿಡಿದ ಸುಪ್ರೀಂಕೋರ್ಟ್:
ಈ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮದ್ರಾಸ್ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದ್ದು, ಭಕ್ತರು ಮದುವೆ ಸಭಾಂಗಣಗಳನ್ನು ನಿರ್ಮಿಸುವುದಕ್ಕಾಗಿ ಕಾಣಿಕೆ ನೀಡಿರುವುದಿಲ್ಲ. ಅದನ್ನು ದೇವಸ್ಥಾನದ ಅಭಿವೃದ್ಧಿಗಾಗಿ ಕೊಟ್ಟಿರಬಹುದು. ದೇವಸ್ಥಾನದ ಆವರಣದಲ್ಲಿ ಮದುವೆ ಪಾರ್ಟಿ ನಡೆಯುತ್ತಿದ್ದರೆ ಮತ್ತು ಅಶ್ಲೀಲ ಹಾಡುಗಳನ್ನು ಹಾಕಿದರೆ, ಅದು ದೇವಸ್ಥಾನದ ಉದ್ದೇಶವೇ? ಭಕ್ತರ ಹಣ ಶಿಕ್ಷಣ, ವೈದ್ಯಕೀಯದಂತಹ ಸತ್ಕಾರ್ಯಗಳಿಗೆ ಬಳಕೆಯಾಗಬೇಕು ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೆ, ನಾವು ಈ ಪ್ರಕರಣವನ್ನು ಆಲಿಸುತ್ತೇವೆ. ಆದರೆ ಅರ್ಜಿದಾರರಿಗೆ ಯಾವುದೇ ತಡೆಯಾಜ್ಞೆ ನೀಡುತ್ತಿಲ್ಲ ಎಂದಿದೆ.
ಚಿನ್ನದ ಬೆಲೆ ₹1.16 ಲಕ್ಷ, ಬೆಳ್ಳಿ ಮೌಲ್ಯ ₹1.37 ಲಕ್ಷ
ನವದೆಹಲಿ: ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ ಟ್ರೆಂಡ್ ಮಂಗಳವಾರವೂ ಮುಂದುವರೆದಿದೆ. ರೂಪಾಯಿ ಬೆಲೆಯೆದುರು ಡಾಲರ್ ಮೌಲ್ಯ ನಿರಂತರ ಕುಸಿತ ಕಾಣುತ್ತಿರುವ ಪರಿಣಾಮ, ಚಿನ್ನದ ಬೆಲೆ ದಾಖಲೆಯಷ್ಟು ಏರಿಕೆಯಾಗಿದೆ. ಬೆಂಗಳೂರಿನಲ್ಲಿ 99.5 ಶುದ್ಧತೆಯ 10 ಗ್ರಾಂ ಚಿನ್ನದ ಬೆಲೆ 1,16,100 ರು. ಆಗಿದೆ. ಬೆಳ್ಳಿ ಬೆಲೆಯೂ ಏರಿಕೆ ಆಗಿ ಕೆ.ಜಿ.ಗೆ 1,37,200 ರು. ತಲುಪಿದೆ. ದೆಹಲಿಯಲ್ಲಿ 99.5 ಶುದ್ಧತೆಯ 10 ಗ್ರಾಂ ಚಿನ್ನದ ಬೆಲೆಯಲ್ಲಿ 1,800 ರು. ಏರಿಕೆಯಾಗಿ 1,14,600 ರು. ಆಗಿದೆ. ಬೆಳ್ಳಿ ಬೆಲೆ ಕೆ.ಜಿ.ಗೆ 1,32,870 ರು. ಆಗಿದೆ.
ಇದನ್ನೂ ಓದಿ: 75ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮೋದಿ: ದೇಶಾದ್ಯಂತ ಬಿಜೆಪಿಯಿಂದ ಹಲವು ಸೇವಾ ಕಾರ್ಯಕ್ರಮ
ಇದನ್ನೂ ಓದಿ: ಭಾರತ ಬಹಾವಲ್ಪುರದ ಮೇಲೆ ನಡೆಸಿದ ದಾಳಿಯಲ್ಲಿ ಕುಟುಂಬದ 10 ಜನ ಹತ
