ಹೆಲಿಕಾಪ್ಟರ್ ಪ್ರಯಾಣ ಅಸಾಧ್ಯ ಎಂದ ತಂಡ, ರಸ್ತೆ ಮೂಲಕ ಮಣಿಪುರದ ಚುರಚಂದಾಪುರಕ್ಕೆ ಮೋದಿ ಪ್ರಯಾಣಿಸದ ಘಟನೆ ನಡೆದಿದೆ. ರಸ್ತೆ ಮಾರ್ಗದ ಮೂಲಕ ಹೆಚ್ಚಿನ ಸಮಯ ಪ್ರಯಾಣ ಮಾಡಬೇಕಿದ್ದರೂ ಮೋದಿ ತಮ್ಮ ಪ್ರಯಾಣ ರದ್ದು ಮಾಡದೇ ಚುರಚಂದಾಪುರಕ್ಕೆ ತೆರಳಿ ಜನರನ್ನುದ್ದೇಶಿ ಮಾತಾಡಿದ್ದಾರೆ.

ಇಂಫಾಲ (ಸೆ.13) ಹಿಂಸಾಚಾರ ಘಟನೆ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಮಣಿಪುರಕ್ಕೆ ಭೇಟಿ ನೀಡಿದ್ದಾರೆ.ಮಣಿಪುರದ ಚುರಚಂದಾಪುರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಶಾಂತಿ ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. ನಿಮ್ಮ ಜೊತೆಗೆ ನಾನಿದ್ದೇನೆ. ಜೊತೆಯಾಗಿ ಅಭಿವೃದ್ಧಿಯತ್ತ ಹೆಜ್ಜೆ ಹಾಕೋಣ ಎಂದಿದ್ದಾರೆ. ವಿಶೇಷ ಅಂದರೆ ಮೋದಿ ಮಣಿಪುರ ಭೇಟಿ ಭಾರಿ ಚರ್ಚೆಯಾಗಿತ್ತು. ಜೊತೆಗೆ ತೀವ್ರ ಕುತೂಹಲ ಕೆರಳಿಸಿತ್ತು. ಆದರೆ ಇಂದು ಬೆಳಗ್ಗೆ ಅಧಿಕಾರಿಗಳ ತಂಡ, ಮಣಿಪುರದ ಚುರಚಂದಾಪುರಕ್ಕೆ ಹೆಲಿಕಾಪ್ಟರ್ ಮೂಲಕ ಪ್ರಯಾಣ ಅಸಾಧ್ಯ ಎಂದಿದೆ. ಇಷ್ಟೇ ರಸ್ತೆ ಮಾರ್ಗ ಮೂಲಕ ಸುದೀರ್ಘ ಪ್ರಯಾಣ ಮಾಡಬೇಕು ಎಂದು ಮಾಹಿತಿ ನೀಡಿದೆ. ಹೀಗಾಗಿ ಪ್ರಧಾನಿ ಮೋದಿ ರಸ್ತೆ ಮಾರ್ಗ ಮೂಲಕ ಪ್ರಯಾಣಿಸಿದ್ದಾರೆ.

ಭಾರಿ ಮಳೆ ಹವಾಮಾನ ವೈಪರಿತ್ಯದಿಂದ ಹೆಲಿಕಾಪ್ಟರ್ ಪ್ರಯಾಣ ರದ್ದು

ಪ್ರಧಾನಿ ನರೇಂದ್ರ ಮೋದಿ ವಿಮಾನ ಇಂಫಾಲಕ್ಕೆ ಬಂದಿಳಿದಿದೆ. ನವದೆಹಲಿಯಲ್ಲೇ ಪ್ರಧಾನಿ ಮೋದಿಗೆ ಮಣಿಪುರದ ಹವಾಮಾನ ಕುರಿತು ಮಾಹಿತಿ ನೀಡಲಾಗಿತ್ತು. ಭಾರಿ ಮಳೆ ಹಾಗೂ ಹವಾಮಾನ ವೈಪರಿತ್ಯ ಕುರಿತು ಸೂಚಿಸಲಾಗಿತ್ತು. ಇಂಫಾಲದಿಂದ ಚುರಚಂದಾಪುರಕ್ಕೆ ಹೆಲಿಕಾಪ್ಟರ್ ಮೂಲಕ ಪ್ರಯಾಣ ನಿಗಧಿಯಾಗಿತ್ತು. ಆದರೆ ಭಾರಿ ಮಳೆ ಹಾಗೂ ಹವಾಮಾನ ವೈಪರಿತ್ಯದಿಂದ ಹೆಲಿಕಾಪ್ಟರ್ ಪ್ರಯಾಣ ಅಸಾಧ್ಯ ಎಂದು ಅಧಿಕಾರಿಗಳ ತಂಡ ಹೇಳಿದೆ. ಹೀಗಾಗಿ ಮೋದಿ ರಸ್ತೆ ಮಾರ್ಗ ಮೂಲಕ ಪ್ರಯಾಣ ಮಾಡಿದ್ದಾರೆ.

ಒಂದೂವರೆ ಗಂಟೆ ರಸ್ತೆ ಮಾರ್ಗ ಮೂಲಕ ತೆರಳಿದ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿ ಹೆಲಿಕಾಪ್ಟರ್ ಪ್ರಯಾಣಕ್ಕೆ ಹವಾಮಾನ ವೈಪರಿತ್ಯ ಅಡ್ಡಿಯಾಗಿತ್ತು. ಇತ್ತ ಮೋದಿ ರಸ್ತೆ ಮಾರ್ಗ ಮೂಲಕ ಪ್ರಯಾಣ ಬೆಳೆಸಲು ಸಜ್ಜಾಗಿತ್ತು. ಹೀಗಾಗಿ ರಸ್ತೆ ಮಾರ್ಗ ಮೂಲಕ ಭಾರಿ ಸುರಕ್ಷತೆ ಒದಗಿಸಲಾಗಿತ್ತು. ಭಾರಿ ಮಳೆ ನಡೆವು ಪ್ರಧಾನಿ ಮೋದಿ ರಸ್ತೆ ಮಾರ್ಗ ಮೂಲಕ ಚುರಚಂದಾಪುರಕ್ಕೆ ಪ್ರಯಾಣಿಸಿದ್ದಾರೆ. ಒಂದೂವರೆ ಗಂಟೆ ಪ್ರಯಾಣದ ಬಳಿಕ ಮೋದಿ ಚುರಚಂದಾಪುರ ತಲುಪಿದ್ದಾರೆ.

ಹಾಸನ ದುರಂತಕ್ಕೆ ಮೋದಿ ಸಂತಾಪ, ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಘೋಷಣೆ

ಸಮಯ ತೆಗೆದುಕೊಂಡರೂ ಪರ್ವಾಗಿಲ್ಲ, ಸ್ಥಳಕ್ಕೆ ತಲುಪಬೇಕು

ಅಧಿಕಾರಿಗಳ ತಂಡ ರಸ್ತೆ ಮಾರ್ಗ ಮೂಲಕ ಪ್ರಯಾಣ ಹೆಚ್ಚಿನ ಸಮಯ ತೆಗೆದುಕೊಳ್ಳಲಿದೆ ಎಂದು ಮೋದಿಗೆ ಸೂಚಿಸಿದ್ದಾರೆ. ಜೊತೆಗೆ ಭಾರಿ ಮಳೆ ಕಾರಣ ಸುರಕ್ಷತಾ ಕ್ರಮಗಳ ಕುರಿತು ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ ಎಂದು ತಿಳಿಸಿದೆ. ಸಮಯ ಹೆಚ್ಚು ತೆಗೆದುಕೊಂಡರೂ ಪರ್ವಾಗಿಲ್ಲ, ಸ್ಥಳಕ್ಕೆ ತಲುಬೇಕು ಎಂದು ಮೋದಿ ಸೂಚಿಸಿದ್ದಾರೆ. ಸ್ಥಳೀಯರ ಜೊತೆಗೆ ಮಾತನಾಡಬೇಕಿದೆ. ಅವರ ಜೊತೆ ನಿಲ್ಲಬೇಕಿದೆ ಎಂದಿದ್ದಾರೆ. ಇದರಂತೆ ಮೋದಿ ಚುರಚಂದಾಪುರ ತಲುಪಿ ಜನರನ್ನುದ್ದೇಶಿ ಭಾಷಣ ಮಾಡಿದ್ದಾರೆ.

ಭಾರತ ಸರ್ಕಾರ ಮಣಿಪುರ ಜನತೆ ಜೊತೆಗಿದೆ. ಎಲ್ಲಾ ಸಮುದಾಯಗಳು ಜೊತೆಯಾಗಿ ಮುನ್ನಡೆಯಬೇಕು. ಶಾಂತಿ ಇದ್ದಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯ. ಭಾರತ ಸರ್ಕಾರ ಮಣಿಪುರ ಜನತೆ ಜೊತೆಗಿದೆ. ನಾವು ಜೊತೆಯಾಗಿ ಅಭಿವೃದ್ಧಿಯತ್ತ ಸಾಗೋಣ ಎಂದು ಮೋದಿ ಹೇಳಿದ್ದಾರೆ.

2023ರಲ್ಲಿ ಮಣಿಪುರದಲ್ಲಿ ಭಾರಿ ಗಲಭೆ ಸೃಷ್ಟಿಯಾಗಿತ್ತು. ಮಣಿಪುರದ ಕುಕಿ ಹಾಗೂ ಮೈತೆಯೇ ಸಮುದಾಯ ನಡುವೆ ಆರಂಭಗೊಂಡ ಕಿಚ್ಚು ಇಡೀ ರಾಜ್ಯ ಆವರಿಸಿತ್ತು. ಇದರ ಹಿಂದೆ ಹಲವು ಶಸಸ್ತ್ರ ಸಂಘಟನೆಗಳು ಸೇರಿಕೊಂಡಿತ್ತು. 250ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. 60,000ಕ್ಕೂ ಹೆಚ್ಚು ಮಂದಿ ಈಗಲೂ ಆಶ್ರಯ ಕೇಂದ್ರದಲ್ಲಿ ಜೀವನ ಸಾಗಿಸುತ್ತಿದ್ದಾರೆ. ದೇಶ ಕಂಡ ಅತೀ ದೊಡ್ಡ ಹಿಂಸಾಚಾರಗಳಲ್ಲಿ ಮಣಿಪುರ ಕೂಡ ಒಂದಾಗಿದೆ. ಮೋದಿ ಮಣಿಪುರಕ್ಕೆ ಬೇಟಿ ನೀಡಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದಿತ್ತು.

ಮಣಿಪುರದಲ್ಲಿ ಶಾಂತಿ ಪುನಃಸ್ಥಾಪಿಸುವ ಭರವಸೆ ನೀಡಿದ ಮೋದಿ