ಹಿಂದೂ ಮಹಾಸಾಗರದಲ್ಲಿ ಚೀನಾ ಆಕ್ರಮಣದ ಆತಂಕ ಹೆಚ್ಚುತ್ತಿರುವ ನಡುವೆಯೇ, ಶತ್ರು ದೇಶದ ಸಬ್‌ಮರೀನ್‌ಗಳನ್ನು ಪತ್ತೆ ಮಾಡಿ, ಅದನ್ನು ನಾಶ ಮಾಡುವ ಸಾಮರ್ಥ್ಯ ಹೊಂದಿರುವ ಸ್ವದೇಶಿ ದಾಳಿ ನೌಕೆಯೊಂದು ಭಾರತೀಯ ನೌಕಾಪಡೆ ಸೇರ್ಪಡೆಯಾಗಿದೆ.

ನವದೆಹಲಿ: ಹಿಂದೂ ಮಹಾಸಾಗರದಲ್ಲಿ ಚೀನಾ ಆಕ್ರಮಣದ ಆತಂಕ ಹೆಚ್ಚುತ್ತಿರುವ ನಡುವೆಯೇ, ಶತ್ರು ದೇಶದ ಸಬ್‌ಮರೀನ್‌ಗಳನ್ನು ಪತ್ತೆ ಮಾಡಿ, ಅದನ್ನು ನಾಶ ಮಾಡುವ ಸಾಮರ್ಥ್ಯ ಹೊಂದಿರುವ ಸ್ವದೇಶಿ ದಾಳಿ ನೌಕೆಯೊಂದು ಭಾರತೀಯ ನೌಕಾಪಡೆ ಸೇರ್ಪಡೆಯಾಗಿದೆ.

ನೌಕಾಪಡೆಗಾಗಿ ಕೋಲ್ಕತಾದ ಗಾರ್ಡನ್‌ ರೀಚ್‌ ಶಿಪ್‌ಬಲ್ಡರ್ಸ್‌ & ಇಂಜಿನಿಯರ್ಸ್‌ (ಜಿಆರ್‌ಎಸ್‌ಇ) ಸಂಸ್ಥೆ ಒಟ್ಟು 8 ಜಲಾಂತರ್ಗಾಮಿ ವಿರೋಧಿ ಯುದ್ಧನೌಕೆಗಳನ್ನು ನಿರ್ಮಿಸುತ್ತಿದೆ. ಈ ಪೈಕೆ 2ನೆಯ ನೌಕೆ ‘ಆ್ಯನ್‌ಡ್ರೋಟ್‌’ ಅನ್ನು ಶನಿವಾರ ನೌಕಾಪಡೆಗೆ ಹಸ್ತಾಂತರಿಸಲಾಗಿದೆ. ‘ಆ್ಯನ್‌ಡ್ರೋಟ್‌’ ಲಕ್ಷದ್ವೀಪದಲ್ಲಿರುವ ದ್ವೀಪವೊಂದರ ಹೆಸರು. ಭಾರತ ತನ್ನ ವಿಶಾಲವಾದ ಕಡಲ ಪ್ರದೇಶಗಳನ್ನು ರಕ್ಷಿಸುವ ಬದ್ಧತೆ ಹೊಂದಿದೆ ಎಂಬುದನ್ನು ಸೂಚಿಸಲು ಯುದ್ಧನೌಕೆಗೆ ಈ ಹೆಸರು ಇಡಲಾಗಿದೆ.

ವಿಶೇಷತೆಗಳೇನು?:

77 ಮೀ. ಉದ್ದದ ಈ ಯುದ್ಧನೌಕೆಯನ್ನು ಡೀಸೆಲ್ ಎಂಜಿನ್ ಮತ್ತು ವಾಟರ್ ಜೆಟ್ ಸಂಯೋಜನೆಯಿಂದ ನಿರ್ಮಿಸಲಾಗಿದೆ. ಇದು ಭಾರತೀಯ ನೌಕಾಪಡೆಯ ಅತಿದೊಡ್ಡ ಯುದ್ಧನೌಕೆಯಾಗಿದ್ದು, ಅತ್ಯಾಧುನಿಕ ಟಾರ್ಪಿಡೊ ಮತ್ತು ಸ್ಥಳೀಯ ಜಲಾಂತರ್ಗಾಮಿ ಧ್ವಂಸ ಅಸ್ತ್ರಗಳನ್ನು ಹೊಂದಿದೆ.

₹1 ಲಕ್ಷ ಕೋಟಿ ಮೌಲ್ಯದ 9 ಸಬ್‌ ಮರೀನ್‌ ಖರೀದಿಗೆ ಭಾರತ ಸಜ್ಜು

ನವದೆಹಲಿ: ಚೀನಾ ತನ್ನ ನೌಕಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವ ನಡುವೆಯೇ, ಭಾರತವೂ ಸಾಗರದೊಳಗೆ ಯುದ್ಧ ಸಾಮರ್ಥ್ಯ ವೃದ್ಧಿಗೆ ಮುಂದಾಗಿದ್ದು ಮುಂದಿನ ವರ್ಷ ಅಂದಾಜು 1 ಲಕ್ಷ ಕೋಟಿ ರು. ವೆಚ್ಚದಲ್ಲಿ ಎರಡು ಜಲಾಂತರ್ಗಾಮಿ ಖರೀದಿ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ. ಈ ಯೋಜನೆಯಡಿ ಒಟ್ಟು 9 ಸಬ್‌ಮರೀನ್‌ ಖರೀದಿ ಪ್ರಸ್ತಾಪವಿದೆ.

ಮೊದಲ ಯೋಜನೆಯ ಭಾಗವಾಗಿ ಮೂರು ಸ್ಕಾರ್ಪೀನ್‌ ಜಲಾಂತರ್ಗಾಮಿ ನೌಕೆಗಳ ಖರೀದಿ ನಡೆಯಲಿದೆ. ಇದನ್ನು ಸರ್ಕಾರಿ ಸ್ವಾಮ್ಯದ ಮಜಗಾಂವ್ ಡಾಕ್‌ ಲಿಮಿಟೆಡ್‌( ಎಂಡಿಎಲ್‌) ಮತ್ತು ಫ್ರೆಂಚ್‌ನ ನೇವಲ್‌ ಗ್ರೂಪ್ ಜಂಟಿಯಾಗಿ ಭಾರತದಲ್ಲೇ ನಿರ್ಮಿಸಲಿವೆ. ಎರಡು ವರ್ಷಗಳ ಹಿಂದೆಯೇ ಸುಮಾರು 36,000 ಕೋಟಿ ರು.ಗಳ ಒಪ್ಪಂದಕ್ಕೆ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದ್ದರೂ ವಿವಿಧ ಕಾರಣಗಳಿಂದ ಮಾತುಕತೆ ವಿಳಂಭವಾಗಿತ್ತು.

ಮತ್ತೊಂದೆಡೆ ಸಚಿವಾಲಯ 65000 ಕೋಟಿ ರು. ವೆಚ್ಚದಲ್ಲಿ ಆರು ಡಿಸೇಲ್ ಎಲೆಕ್ಟ್ರಿಕಲ್‌ ಸ್ಟೆಲ್ತ್‌ ಜಲಾಂತರ್ಗಾಮಿ ನೌಕೆ ಖರೀದಿಗೆ ಮುಂದಾಗಿದೆ. 2021ರಲ್ಲಿಯೇ ಮಾತುಕತೆ ನಡೆದಿತ್ತು. ಈ ಯೋಜನೆಯಯನ್ನು ಜರ್ಮನ್‌ ಹಡಗು ನಿರ್ಮಾಣ ಕಂಪನಿ ಥೈಸೆನ್‌ಕೃಪ್‌ ಮೆರೈನ್‌ ಸಿಸ್ಟಮ್ಸ್‌ ( ಟಿಕೆಂಎಂಎಸ್‌)ಮಜಗಾಂವ್ ಡಾಕ್‌ ಶಿಪ್‌ಬಿಲ್ಡರ್ಸ್‌ ಲಿ. ಪಾಲುದಾರಿಕೆಯೊಂದಿಗೆ ನಡೆಯಲಿದೆ.