Mother's Rage: ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ, ಚಿಕನ್ ಕರಿ ಬೇಕೆಂದು ಹಠ ಮಾಡಿದ 7 ವರ್ಷದ ಮಗನನ್ನು ತಾಯಿಯೊಬ್ಬಳು ಲಟ್ಟಣಿಗೆಯಿಂದ ಹೊಡೆದು ಕೊಂದಿದ್ದಾಳೆ. ಈ ಘಟನೆಯಲ್ಲಿ 10 ವರ್ಷದ ಮಗಳು ಗಂಭೀರವಾಗಿ ಗಾಯಗೊಂಡಿದ್ದು, ಪೊಲೀಸರು ಆರೋಪಿ ತಾಯಿಯನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಚಿಕನ್ ಕರಿ ಬೇಕು ಎಂದ ಹಠ ಹಿಡಿದ ಮಗನ ಪರಲೋಕಕ್ಕೆ ಅಟ್ಟಿದ ತಾಯಿ
ಮುಂಬೈ: ಮಕ್ಕಳು ಚಿಕನ್ ಕೇಳಿದ್ರು ಅಂತ ತಾಯಿಯೊಬ್ಬಳು ಪುಟ್ಟ ಮಕ್ಕಲಿಗೆ ಚಪಾತಿ ಮಾಡುವ ಲಟ್ಟಣಿಗೆಯಲ್ಲಿ ಬಾರಿಸಿದ್ದರಿಂದ 7 ವರ್ಷದ ಮಗ ಮೃತಪಟ್ಟು ಆತನ 10 ವರ್ಷದ ಅಕ್ಕ ಗಂಭೀರವಾಗಿ ಗಾಯಗೊಂಡಂತಹ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ನಡೆದಿದೆ. ಘಟನೆಯಲ್ಲಿ ಮೃತನಾದ ಬಾಲಕನನ್ನು 7 ವರ್ಷದ ಚಿನ್ಮಯ್ ಧುಮ್ಡೆ ಎಂದು ಗುರುತಿಸಲಾಗಿದೆ. ಪಲ್ಲವಿ ಧುಮ್ಡೆ ಮಗನನ್ನೇ ಕೊಂದ ತಾಯಿ.
ಚಪಾತಿ ಲಟ್ಟಿಸುವ ಲಟ್ಟಣಿಗೆಯಿಂದ ಹಿಗ್ಗಾಮುಗ್ಗಾ ಥಳಿಸಿದ ತಾಯಿ
ಚಿನ್ಮಯ್ ಧುಮ್ಡೆ ತಾಯಿಯ ಜೊತೆ ತನಗೆ ಚಿಕನ್ ಕರಿ ಬೇಕು ಎಂದು ಹೇಳಿದ್ದಾನೆ. ಇದರಿಂದ ಸಿಟ್ಟುಗೊಂಡ ತಾಯಿ ಪಲ್ಲವಿ ಮಗನನ್ನು ಚಪಾತಿ ಲಟ್ಟಿಸು ಲಟ್ಟಣಿಗೆಯಿಂದ ಹಿಗ್ಗಾಮುಗ್ಗಾ ಬಾರಿಸಿದ್ದು, ಇದರಿಂದ 7 ವರ್ಷದ ಮಗ ಚಿನ್ಮಯ್ ಸಾವನ್ನಪ್ಪಿದ್ದು, ಆತನ 10 ವರ್ಷದ ಸೋದರಿಗೆ ಗಂಭೀರವಾದ ಗಾಯಗಳಾಗಿವೆ. ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಮಕ್ಕಳ ಕೂಗಾಟದ ವಿಚಾರ ತಿಳಿದು ನೆರೆಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಂದಿದ್ದು, ಪೊಲೀಸರು ತಾಯಿ ಪಲ್ಲವಿ ಧುಮ್ಡೆ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
40 ವರ್ಷದ ಪಲ್ಲವಿ ಘುಮ್ಡೆ ತನ್ನ ಕುಟುಂಬದ ಜೊತೆ ಪಾಲ್ಘರ್‌ನ ಕಾಶಿಪಡ ಪ್ರದೇಶದಲ್ಲಿ ವಾಸ ಮಾಡ್ತಿದ್ದರು. ಆಕೆಯ ಮಗ ಚಿನ್ಮಯ್ ಗಣೇಶ್
ಧುಮ್ಡೆ, ಚಿಕನ್ ಕರಿ ಬೇಕು ಎಂದು ಹಠ ಮಾಡಿದ್ದಾನೆ. ಇದರಿಂದ ತಾಳ್ಮೆ ಕಳೆದುಕೊಂಡ ತಾಯಿ ಆತನನ್ನು ಲಟ್ಟಣಿಗೆಯಿಂದ ಹೊಡೆದಿದ್ದು, ಪರಿಣಾಮ ಆತ ಮೃತಪಟ್ಟಿದ್ದಾನೆ. ನಂತರ ಆಕೆ 10 ವರ್ಷದ ಮಗಳಿಗೂ ಬಾರಿಸಿದ್ದಾಳೆ. ಆಕೆಯ ಸ್ಥಿತಿ ಗಂಭೀರವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪಲ್ಘಾರ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತಾಯಿ ಪಲ್ಲವಿಯನ್ನು ಬಂಧಿಸಲಾಗಿದೆ. ಫಾಲ್ಘರ್ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮಾಡುತ್ತಿದ್ದಾರೆ ಎಂದು ಜಿಲ್ಲಾ ಎಸ್‌ಪಿ ಯತೀಶ್ ದೇಶ್‌ಮುಖ್ ಹೇಳಿದ್ದಾರೆ.
ಒಟ್ಟಿನಲ್ಲಿ ತಾಯಿಯೊಬ್ಬಳ ಕೆಲ ಕ್ಷಣಗಳ ಉಗ್ರ ಕೋಪ ಮಗನ ಜೀವ ಬಲಿಪಡೆದಿದೆ.
ಇದನ್ನೂ ಓದಿ: ಬದುಕನ್ನು ಸಂಭ್ರಮಿಸದೇ 3.9 ಕೋಟಿ ಉಳಿತಾಯ: ವೃದ್ಧಾಪ್ಯದಲ್ಲಿ ವಿಷಾದ ಪಟ್ಟ ವೃದ್ಧ
ಇದನ್ನೂ ಓದಿ: ಸ್ವಿಗ್ಗಿಯಲ್ಲಿ ಬೆಳ್ಳಿ ನಾಣ್ಯ ಆರ್ಡರ್ ಮಾಡಿದವನಿಗೆ ಬಂತು ಮ್ಯಾಗಿ: ಸ್ವಿಗ್ಗಿ ಹೇಳಿದ್ದೇನು?
