ಬ್ಲಿಂಕಿಟ್, ಸ್ವಿಗ್ಗಿ ಸೇರಿ ಎಲ್ಲಾ ಆ್ಯಪ್‌ನಿಂದ ಸ್ವೀಟ್ ಆರ್ಡರ್ ಮಾಡಿ ಡೆಲಿವರಿ ಬಾಯ್‌ಗೆ ಅಚ್ಚರಿ ಕೊಟ್ಟ ವ್ಯಕ್ತಿ, ಕೆಲ ಘಟನೆಗಳು ಹೃದಯಸ್ವರ್ಶಿಯಾಗಿರುತ್ತದೆ. ಇದೀಗ ವ್ಯಕ್ತಿಯೊಬ್ಬನ ಪ್ರಯತ್ನಕ್ಕೆ ದೇಶವೇ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದೆ.
ಹೈದರಾಬಾದ್ (ಅ.20) ದೀಪಾವಳಿ ಬೆಳಕಿನ ಹಬ್ಬ. ಈ ಹಬ್ಬದಲ್ಲಿ ಕುಟುಂಬಸ್ಥರು, ಆಪ್ತರು ಬೆಳಕಿನ ಮೂಲಕ ಹಬ್ಬ ಆಚರಿಸುವ ಜೊತೆದೆ ಪ್ರೀತಿ, ನಂಬಿಕೆ, ಸಂಬಂಧಗಳನ್ನು ಗಟ್ಟಿಗೊಳಿಸುವ ಮಹತ್ವವೂ ಅಡಗಿದೆ. ಸಿಹಿ ಹಂಚದೇ ದೀಪಾವಳಿ ಪೂರ್ಣಗೊಳ್ಳುವುದಿಲ್ಲ. ಎಲ್ಲರ ಬಾಯಿ ಸಿಹಿ ಮಾಡುವ ಮೂಲಕ ಸಂಭ್ರಮದಿಂದ ದೀಪಾವಳಿ ಆಚರಿಸಲಾಗುತ್ತದೆ. ಆದರೆ ಅದೆಷ್ಟೋ ಜನರು ,ಬದುಕಿನ ಪಯಣದಲ್ಲಿ ಬಾಯಿ ಸಿಹಿಯಾಗಿಸಲು ಸಾಧ್ಯವಾಗದೇ ಪರಿತಪಿಸುತ್ತಾರೆ. ಸಮಯ, ಹಣ, ಪರಿಸ್ಥಿತಿ, ಜವಾಬ್ದಾರಿ ಹೀಗೆ ಹಲವು ಕಾರಣಗಳೂ ಸೇರಿಕೊಳ್ಳುತ್ತದೆ. ಎಲ್ಲರೂ ದೀಪಾವಳಿ ಆಚರಿಸುತ್ತಿದ್ದರೆ, ಡೆಲಿವರಿ ಎಜೆಂಟ್‌ಗಳೂ ಮನೆಯಲ್ಲಿ ಕುಳಿತು ಆರ್ಡರ್ ಮಾಡುವ ವ್ಯಕ್ತಿಗಳ ಆರ್ಡರ್ ತಕ್ಕ ಸಮಯಕ್ಕೆ ತಲುಪಿಸಲು ಪ್ರಯತ್ನಿಸುತ್ತಾರೆ. ಅವರು ತಮ್ಮ ಕುಟುಂಬದ ಜೊತೆ ದೀಪಾವಳಿ ಆಚರಿಸಲು ಸಾಧ್ಯವಾಗದೇ ಪರಿತಪಿಸುತ್ತಿರುತ್ತಾರೆ. ಆದರೆ ಇಲ್ಲೊಬ್ಬ ಈ ದೀಪಾವಳಿ ಹಬ್ಬಕ್ಕೆ ಕೆಲವ ಡಿಲೆವರಿ ಎಜೆಂಟ್‌ಗಳಿಗೆ ಅಚ್ಚರಿ ನೀಡಿದ್ದಾನೆ. ಈತನ ಪ್ರಯತ್ನಕ್ಕೆ ದೇಶಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಡೆಲಿವರಿ ಆ್ಯಪ್‌ಗಳಿಂದ ಸ್ವೀಟ್ಸ್ ಆರ್ಡರ್
ಹೈದರಾಬಾದ್ ಮೂಲದ ಇನ್‌ಸ್ಟಾಗ್ರಾಂ ಕ್ರಿಯೇಟರ್ ಈ ಬಾರಿಯ ದೀಪಾವಳಿ ಹಬ್ಬಕ್ಕೆ ವಿಶೇಷ ಪ್ರಯತ್ನ ಮಾಡಿದ್ದಾನೆ. ಬ್ಲಿಂಕಿಟ್, ಸ್ವಿಗ್ಗಿ, ಬಿಗ್ ಬಾಸ್ಕೆಟ್, ಝೆಪ್ಟೋ ಸೇರಿಂತೆ ಡೆಲಿವರಿ ಆ್ಯಪ್‌ಗಳಿಂದ ದೀಪಾವಳಿ ಹಬ್ಬದ ವಿಶೇಷ ಸ್ವೀಟ್ಸ್ ಆರ್ಡರ್ ಮಾಡಿದ್ದಾನೆ. ಆರ್ಡರ್ ಮಾಡಿದ ಕೆಲ ಹೊತ್ತಲ್ಲೇ ಸ್ವೀಟ್ ಬಾಕ್ಸ್ ಹಿಡಿದು ಡೆಲಿವರಿ ಎಜೆಂಟ್‌ಗಳು ಈ ಕ್ರಿಯೇಟರ್ ವಿಳಾಸಕ್ಕೆ ಆಗಮಿಸಿದ್ದಾರೆ. ಕೋಡ್ ಪಡೆದ ಡೆಲಿವರಿ ಎಜೆಂಟ್‌ಗಳು ಸ್ವೀಟ್ಸ್ ಬಾಕ್ಸ್ ಕ್ರಿಯೇಟರ್‌ಗೆ ವಿತರಿಸಿದ್ದಾರೆ.
ಡೆಲಿವರಿ ಎಜೆಂಟ್‌ಗಳಿಗೆ ಸ್ವೀಟ್ಸ್ ಹಂಚಿ ದೀಪಾವಳಿ
ಡೆಲಿವರಿ ಎಜೆಂಟ್ ಸ್ವೀಟ್ಸ್ ವಿತರಿಸಿದ ಬೆನ್ನಲ್ಲೇ ಕ್ರಿಯೇಟರ್ ಅದೇ ಸ್ವೀಟ್ಸ್ ಬಾಕ್ಸ್‌ನ್ನು ಡೆಲಿವರಿ ಎಜೆಂಟ್‌ಗೆ ಮರಳಿ ನೀಡಿ, ಹ್ಯಾಪಿ ದೀಪಾವಳಿ ಎಂದು ಶುಭ ಕೋರಿದ್ದಾನೆ. ಸ್ವೀಟ್ ಬಾಕ್ಸ್ ನೋಡಿ ಅಚ್ಚರಿ ಪಟ್ಟ ಎಜೆಂಟ್ ಆರಂಭದಲ್ಲಿ ಪಡೆಯಲು ನಿರಾಕರಿಸಿದ್ದರೆ. ಬಳಿಕ ಇದು ದೀಪಾವಳಿಹಬ್ಬಕ್ಕೆ ನನ್ನ ಕಡೆಯಿಂದ ಸಿಹಿ ಎಂದು ಹೇಳಿ ಸ್ವೀಟ್ಸ್ ನೀಡಿದ್ದರೆ. ಅತ್ತ ಡೆಲವರಿ ಎಜೆಂಟ್‌ಗಳು ಖುಷಿಖುಷಿಯಿಂದ ಸ್ವೀಟ್ಸ್ ಪಡೆದುಕೊಂಡಿದ್ದಾರೆ. ರಜೆಯಲ್ಲೂ ಸೇವೆ ನೀಡುವ ಡೆಲಿವರಿ ಎಜೆಂಟ್ ಕ್ರಿಯೇಟರ್ ಈ ನಡೆಯಿಂದ ಅಚ್ಚರಿಗೊಂಡಿದ್ದಾರೆ. ಆದರೆ ಈ ಬಾರಿ ದೀಪಾವಳಿ ಅವರಲ್ಲಿ ಸಂಭ್ರಮ ತರಿಸಿತ್ತು
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್
ಈ ಪ್ರಯತ್ನದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಈ ಕ್ರಿಯೇಟರ್ ಪ್ರಯತ್ನಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಹಲವು ಡೆಲಿವರಿ ಎಜೆಂಟ್ ದೀಪಾವಳಿ ಖುಷಿಯನ್ನು ಡಬಲ್ ಮಾಡಿದ ನಿಮ್ಮ ಪ್ರಯತ್ನಕ್ಕೆ ಸಲಾಂ. ಕುಟುಂಬದಿಂದ ದೂರ ಇರುವ ಅದೆಷ್ಟೋ ಮಂದಿಗೆ ಈ ರೀತಿಯ ಒಂದು ಸಿಹಿ ಸಿಗಲಿ ಎಂದು ಹಲವರು ಆಶಿಸಿದ್ದಾರೆ.
