ಮಹಾಕುಂಭ ಮೇಳ ಯೂಸ್‌ಲೆಸ್ ಎಂದ ಲಾಲೂ ಯಾದವ್‌ ಅಸಲಿ ಮುಖ ಬಹಿರಂಗಪಡಿಸಿದ ಬಿಜೆಪಿ, ಹಿಂದೂಗಳ ಪವಿತ್ರ ಹಬ್ಬ ಅನವಶ್ಯಕ ಎಂದಿರುವ ಲಾಲೂ ಪ್ರಸಾದ್ ಯಾದವ್‌ಗೆ, ಯಾವುದೋ ದೇಶದಲ್ಲಿ ಆಚರಿಸುವ ಕ್ರೈಸ್ತರ ಹ್ಯಾಲೋವಿನ್ ಪವಿತ್ರವಾಯಿತೇ? ಎಂದು ಬಿಜೆಪಿ ವಿಡಿಯೋ ಸಮೇತ ತಿರುಗೇಟು ನೀಡಿದೆ.

ಪಾಟ್ನಾ (ನ.02) ಹಿಂದೂಗಳ ಪವಿತ್ರ ಮಹಾಕುಂಭವನ್ನು ಯೂಸ್‌ಲೆಸ್ ಎಂದಿರುವ ಆರ್‌ಜೆಡಿ ಸುಪ್ರೀಂ ಲಾಲು ಪ್ರಸಾದ್ ಯಾದವ್ ಇದೀಗ ಇಂಡಿಯಾ ಮೈತ್ರಿಕೂಟಕ್ಕೆ ಸಂಕಷ್ಟ ತಂದಿಟ್ಟಿದ್ದಾರೆ. ಹಳೇ ಹೇಳಿಕೆಯೊಂದು ಇದೀಗ ಬಿಹಾರ ಚುನಾವಣೆ ಲೆಕ್ಕಾಚಾರ ಬದಲಿಸುತ್ತಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಲಾಲು ಪ್ರಸಾದ್ ಯಾದವ್ ಹೇಳಿಕೆಯಿಂದ ಹಿಂದೂ ಮತಗಳು ಬಿಜೆಪಿಯತ್ತ ಸಮೀಕರಣಗೊಳ್ಳುತ್ತಿದೆ ಎಂದು ಲೆಕ್ಕಾಚಾರಗಳು ಹೇಳುತ್ತಿದೆ. ಇದಕ್ಕೆ ಮುಖ್ಯ ಕಾರಣ ಲಾಲು ಪ್ರಸಾದ್ ಯಾದವ್ ಮಹಾಕುಂಭ ಮೇಳ ಯೂಸ್‌ಲೆಸ್ ಎಂದು ಹೇಳಿಕೆ ನೀಡಿದ್ದಾರೆ. ಮಹಾಕುಂಭ ಮೇಳದಲ್ಲಿ ಪಾಲ್ಗೊಂಡ ಕೋಟ್ಯಾಂತರ ಹಿಂದೂಗಳಿಗೆ ಅವಮಾನ ಮಾಡಿದ್ದು ಮಾತ್ರವಲ್ಲ, ನಂಬಿಕೆಯನ್ನೂ ಘಾಸಿಘೊಳಿಸಿದ್ದಾರೆ. ಈ ಹೇಳಿಕೆ ಬೆನ್ನಲ್ಲೇ ಬಿಹಾರ ಬಿಜೆಪಿ ಲಾಲು ಪ್ರಸಾದ್ ಯಾದವ್ ಅಸಲಿ ಮುಖವನ್ನು ವಿಡಿಯೋ ಮೂಲಕ ಬಹಿರಂಗಪಡಿಸಿದ್ದಾರೆ. ಬ್ರಿಟಿಷರ ಹ್ಯಾಲೋವಿನ್ ಆಚರಣೆ ಮಾಡುವ ಲಾಲು ಪ್ರಸಾದ್ ಯಾದವ್‌ಗೆ ಹಿಂದೂಗಳ ಹಬ್ಬ ಯೂಸ್‌ಲೆಸ್ ಆಯಿತಾ ಎಂದು ಬಿಜೆಪಿ ಪ್ರಶ್ನಿಸಿದೆ.

ಮಹಾಕುಂಭ ಮೇಳ ಯೂಸ್‌ಲೆಸ್

ಉತ್ತರ ಪ್ರದೇಶದಲ್ಲಿ ಅತ್ಯಂತ ಯಶಸ್ವಿಯಾಗಿ ಆಯೋಜನೆಗೊಂಡ ಮಹಾಕುಂಭ ಮೇಳಕ್ಕೆ ದೇಶ ವಿದೇಶಗಳಿಂದ ಭಕ್ತರು ಆಗಮಿಸಿದ್ದರು. ಪ್ರತಿ ದಿನ ಕೋಟ್ಯಾಂತರ ಭಕ್ತರು ಮಹಾಕುಂಭ ಮೇಳಕ್ಕೆ ಆಗಮಿಸಿದ್ದರು. ಅತ್ಯಂತ ವ್ಯವಸ್ಥಿತವಾಗಿ ಇಡೀ ಮೇಳವನ್ನು ಸಂಘಟಿಸಲಾಗಿತ್ತು. ಆದರೆ ಇದೇ ವೇಳೆ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್, ಮಹಾಕುಂಭ ಮೇಳ ಯೂಸ್‌ಲೆಸ್. ಇದರಿಂದ ಯಾವುದೇ ಪ್ರಯೋಜನವಿಲ್ಲ. ಯಾವುದೇ ಅರ್ಥವಿಲ್ಲದ ಆಚರಣೆ ಎಂದು ಹೇಳಿಕೆ ನೀಡಿದ್ದರು.

ಲಾಲು ಯಾದವ್‌ರಿಂದ ಕ್ರೈಸ್ತರ ಹ್ಯಾಲೋವಿನ್ ಆಚರಣೆ

ಅಕ್ಟೋಬರ್ 31ರಂದು ಹಲವು ಕ್ರಿಶ್ಚಿಯನ್ ದೇಶಗಳು ಹ್ಯಾಲೋವಿನ್ ಆಚರಣೆ ಮಾಡುತ್ತದೆ. ಬ್ರಿಟಿಷರ ಈ ಆಚರಣೆಯಲ್ಲಿ ಪ್ರೇತ, ಆತ್ಮಗಳ ರೀತಿ ವೇಷ ಧರಿಸಿ ಮೆರವಣಿಗೆ ಮಾಡಲಾಗುತ್ತದೆ. ಅಕ್ಟೋಬರ್ 31ರಂದು ಲಾಲು ಪ್ರಸಾದ್ ಯಾದವ್ ಬ್ರಿಟಿಷರ ಹ್ಯಾಲೋವಿನ್ ಆಚರಿಸಿದ್ದಾರೆ. ಈ ಕುರಿತ ವಿಡಿಯೋವನ್ನು ಲಾಲು ಪ್ರಸಾದ್ ಯಾದವ್ ಪುತ್ರಿ, ಆರ್‌ಜೆಡಿ ನಾಯಕಿ ರೋಹಿಣಿ ಆಚಾರ್ಯ ಹಂಚಿಕೊಂಡಿದ್ದರು. ಎಲ್ಲರಿಗೂ ಹ್ಯಾಪಿ ಹ್ಯಾಲೋವಿನ್ ಎಂದು ಶುಭಕೋರಿದ್ದಾರೆ.

Scroll to load tweet…

ವಿಡಿಯೋ ಹಂಚಿಕೊಂಡು ತಿರುಗೇಟು ಕೊಟ್ಟ ಬಿಜೆಪಿ ಕಿಸಾನ್ ಮೋರ್ಚಾ

ಲಾಲು ಪ್ರಸಾದ್ ಯಾದವ್ ಇದೀಗ ಎಲ್ಲರಿಗೂ ಹ್ಯಾಲೋವಿನ್ ಶುಭಾಶಯ ಎಂದು ಕೋರಿದ್ದಾರೆ. ಇಷ್ಟೇ ಅಲ್ಲ ಹ್ಯಾಲೋವಿನ್ ಆಚರಣೆಯಲ್ಲಿ ಲಾಲು ಪ್ರಸಾದ್ ಪಾಲ್ಗೊಂಡಿದ್ದಾರೆ. ಬ್ರಿಟಿಷರು ಆಚರಿಸುವ ಕ್ರೈಸ್ತರ ಹಬ್ಬ ಲಾಲು ಪ್ರಸಾದ್ ಯಾದವ್‌ಗೆ ಪವಿತ್ರ ಎಂದು ಅನಿಸುತ್ತದೆ, ಆದರೆ ಹಿಂದೂಗಳ ಮಹಾಕುಂಭ ಮೇಳ ಮಾತ್ರ ವ್ಯರ್ಥ, ಅನವಶ್ಯಕತ, ಅರ್ಥಹೀನ ಎಂದೆನಿಸುತ್ತಿದೆ. ಈ ರೀತಿ ಕಪಟ ನಾಟಕದಿಂದ ಮತ ಪಡೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ಹೇಳಿದೆ.