ಲೈಂಗಿಕ ದೌರ್ಜನ್ಯದ ಹಲವಾರು ಆರೋಪಗಳನ್ನು ಎದುರಿಸುತ್ತಿರುವ ಕಾಂಗ್ರೆಸ್ ಶಾಸಕ ರಾಹುಲ್ ಮಮಕೂಟತಿಲ್‌, ಮಹಿಳೆಯೊಬ್ಬರಿಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ ಮತ್ತು ಆಕೆ ವಿರೋಧಿಸಿದಾಗ ಇನ್ನು ಕೆಲವೇ ಸೆಕೆಂಡಲ್ಲಿ ಕೊಂದುಬಿಡುತ್ತೇನೆ ಎಂದು ಬೆದರಿಸಿದ ಆಡಿಯೋ ವೈರಲ್‌ ಆಗಿದೆ.

ಕೊಚ್ಚಿ : ಲೈಂಗಿಕ ದೌರ್ಜನ್ಯದ ಹಲವಾರು ಆರೋಪಗಳನ್ನು ಎದುರಿಸುತ್ತಿರುವ ಕಾಂಗ್ರೆಸ್ ಶಾಸಕ ರಾಹುಲ್ ಮಮಕೂಟತಿಲ್‌, ಮಹಿಳೆಯೊಬ್ಬರಿಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ ಮತ್ತು ಆಕೆ ವಿರೋಧಿಸಿದಾಗ ಇನ್ನು ಕೆಲವೇ ಸೆಕೆಂಡಲ್ಲಿ ಕೊಂದುಬಿಡುತ್ತೇನೆ ಎಂದು ಬೆದರಿಸಿದ ಆಡಿಯೋ ವೈರಲ್‌ ಆಗಿದೆ.

ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್‌ ಮತ್ತು ಅಪರಿಚಿತ ಮಹಿಳೆಯ ನಡುವಿನ ಸಂಭಾಷಣೆಯ ಆಡಿಯೋ ಕ್ಲಿಪ್‌ನಲ್ಲಿ, ‘ನಿನ್ನ ಗರ್ಭಧಾರಣೆ ನನ್ನ ಜೀವನ ನಾಶಪಡಿಸುತ್ತದೆ’ ಎಂದು ರಾಹುಲ್‌ ಹೇಳಿದ್ದಾರೆ. ಇದೇ ಕೋಪದಲ್ಲಿ ಅವರು, ‘ನಾನು ಕೋಪಗೊಂಡರೆ ಏನು ಮಾಡುತ್ತೇನೋ ನನಗೇ ಗೊತ್ತಿಲ್ಲ’ ಎಂದು ಆಕೆಗೆ ಬೆದರಿಸಿದ್ದಾರೆ.

ಈಗಾಗಲೇ ರಾಹುಲ್‌ ಮಲಯಾಳಂ ನಟಿ ರಿನಿ ಜಾರ್ಜ್, ಲೇಖಕಿ ಹನಿ ಭಾಸ್ಕರನ್‌ ಹಾಗೂ ಟ್ರಾನ್ಸ್‌ಜೆಂಡರ್ ಅವಂತಿಕಾ ಜತೆ ಕಾಮಚೇಷ್ಟೆ ನಡೆಸಿದ ಆರೋಪ ಹೊತ್ತಿದ್ದಾರೆ.

ಸೂಕ್ತ ಸಮಯದಲ್ಲಿ ಕ್ರಮ-ಕಾಂಗ್ರೆಸ್:

ಈ ನಡುವೆ ರಾಹುಲ್‌ ವಿರುದ್ಧ ಆರೋಪಗಳು ಹೆಚ್ಚಾಗುತ್ತಿರುವ ಕಾರಣ, ಸೂಕ್ತ ಸಮಯದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕಾಂಗ್ರೆಸ್‌ ಹೇಳಿದೆ. ಈಗಾಗಲೇ ರಾಹುಲ್‌ ಯುವ ಕಾಂಗ್ರೆಸ್‌ ಅಧ್ಯಕ್ಷತೆಗೆ ರಾಜೀನಾಮೆ ನೀಡಿದ್ದಾರೆ. ಆದರೆ ಶಾಸಕ ಹುದ್ದೆ ಹಾಗೂ ಪಕ್ಷಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ತಳ್ಳಿಹಾಕಿದ್ದಾರೆ.

ಕಾಮಚೇಷ್ಟೆ ಆರೋಪ ಹೊತ್ತ ಕೇರಳ ಶಾಸಕ ಜನತೆಯಲ್ಲಿ ಕ್ಷಮೆ

ಪಟ್ಟಣಂತಿಟ್ಟ : ನಟಿ, ಲೇಖಕಿ ಸೇರಿ ಹಲವರ ಜತೆ ಲೈಂಗಿಕವಾಗಿ ಅಸಭ್ಯವಾಗಿ ನಡೆದುಕೊಂಡ ಆರೋಪ ಹೊತ್ತಿರುವ ಕೇರಳದ ಪಾಲಕ್ಕಾಡ್‌ ಶಾಸಕ ರಾಹುಲ್‌ ಮಮಕೂಟತಿಲ್‌ ಜನತೆಯಲ್ಲಿ ಭಾನುವಾರ ಕ್ಷಮೆ ಕೇಳಿದ್ದಾರೆ.

‘ನನ್ನಿಂದ ಪಕ್ಷದ ಕಾರ್ಯಕರ್ತರು ತಲೆ ತಗ್ಗಿಸುವಂತಾಗಿದೆ. ಈ ರೀತಿ ಆಗುತ್ತೆ ಎಂದು ನಾನು ಯಾವತ್ತೂ ಅಂದುಕೊಂಡಿರಲಿಲ್ಲ’ ಎಂದಿದ್ದಾರೆ. ಆದರೆ ಅವರು ಶಾಸಕತ್ವಕ್ಕೆ ರಾಜೀನಾಮೆ ನೀಡುವ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.