ಹೈದರಾಬಾದ್ ಗೋ ಕಳ್ಳಸಾಗಣೆದಾರರು ಗೋರಕ್ಷಕ ಸೋನು ಮೇಲೆ ಗುಂಡು ಹಾರಿಸಿದ್ದು, ಅವರು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಈ ಘಟನೆಯು ರಾಜಕೀಯ ತಿರುವು ಪಡೆದಿದ್ದು, ಬಿಜೆಪಿ ನಾಯಕಿ ಮಾಧವಿ ಲತಾ AIMIM ಪಕ್ಷವನ್ನು ದೂಷಿಸಿ, ಮುಖ್ಯಮಂತ್ರಿ ರೇವಂತ್ ರೆಡ್ಡಿಗೆ ನ್ಯಾಯ ಒದಗಿಸುವಂತೆ ಸವಾಲು
ಹೈದರಾಬಾದ್ (ಅ.23): ಹೈದರಾಬಾದ್‌ನ ಘಟ್ಕೇಸರ್ ಪ್ರದೇಶದಲ್ಲಿ ಬುಧವಾರ ಗೋ ಕಳ್ಳಸಾಗಣೆ ಮಾಫಿಯಾ ಗೋರಕ್ಷಕ ಸೋನು ಮೇಲೆ ಗುಂಡು ಹಾರಿಸಿದ ಘಟನೆ ನಡೆದಿದ್ದು, 5-6 ವರ್ಷಗಳಿಂದ ಗೋವುಗಳ ರಕ್ಷಣೆ ಮಾಡುತ್ತಿರುವ ಸೋನು, ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಗೋರಕ್ಷಣೆಗಾಗಿ ಇನ್ನೂ ಹತ್ತು ಮಕ್ಕಳನ್ನ ಬಲಿ ಕೊಡುತ್ತೇನೆ:
ವಾಲ್ಮೀಕಿ ಸಮುದಾಯದ ಸೋನು ಅವರ ತಾಯಿ ಈ ಬಗ್ಗೆ ANI ಜೊತೆ ಮಾತನಾಡಿದ್ದು, ನನ್ನ ಮಗ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾನೆ. ಗೋರಕ್ಷಣೆಗಾಗಿ ಇನ್ನೂ 10 ಗಂಡು ಮಕ್ಕಳನ್ನು ಬಲಿಕೊಡುತ್ತೇನೆ ಎಂದು ಪ್ರತಿಜ್ಞೆಮಾಡಿದರು. ಈ ವೇಳೆ ಸರ್ಕಾರ ಆರೋಪಿಗಳನ್ನ ಬಂಧಿಸಬೇಕು ಎಂದು ಒತ್ತಾಯಿಸಿದರು.
ವರದಿಗಳ ಪ್ರಕಾರ, ವರದಿಗಳ ಪ್ರಕಾರ, ಹಸು ಸಾಗಣೆಯ ಬಗ್ಗೆ ಮಾಹಿತಿ ಇದೆ ಎಂದು ಹೇಳಿಕೊಂಡು ಗುಂಪೊಂದು ಸೋನು ಅವರನ್ನು ಕರೆಸಿದೆ. ಸೋನು ಸ್ಥಳಕ್ಕೆ ಬಂದಾಗ, ಒಬ್ಬ ವ್ಯಕ್ತಿ ಗುಂಡು ಹಾರಿಸಿದ ಪರಿಣಾಮ ಅವರು ತೀವ್ರವಾಗಿ ಗಾಯಗೊಂಡರು. ಪ್ರಕರಣ ಸಂಬಂಧ ಪೊಲೀಸರು ಶಂಕಿತರನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.
ರೇವಂತ್ ರೆಡ್ಡಿಗೆ ಮಾಧವಿ ಲತಾ ಸವಾಲು:
ಬಿಜೆಪಿ ನಾಯಕರು ಆರೋಪಿಯು AIMIMಗೆ ಸಂಬಂಧಿಸಿದವನೆಂದು ಆರೋಪಿಸಿದ್ದಾರೆ. ಈ ಬಗ್ಗೆ ಬಿಜೆಪಿ ನಾಯಕಿ ಮಾಧವಿ ಲತಾ ಅವರು AIMIM ಇದರಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿ, ನ್ಯಾಯಕ್ಕಾಗಿ ಆಗ್ರಹಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಮಾಧವಿ ಲತಾ ಅವರು, ಈ ವ್ಯಕ್ತಿ (ಚಿತ್ರ ತೋರಿಸುತ್ತಾ) ಗೋರಕ್ಷಕ ಪ್ರಶಾಂತ್ (ಅಲಿಯಾಸ್ ಸೋನು) ಮೇಲೆ ಗುಂಡು ಹಾರಿಸಿದ್ದಾನೆ. ಅವನು ಯಾರೆಂದು ಸ್ಪಷ್ಟವಾಗಿದೆ. ಗೋವುಗಳನ್ನು ರಕ್ಷಿಸುವವರು ಸಂವಿಧಾನವನ್ನು ರಕ್ಷಿಸುತ್ತಿದ್ದಾರೆ.
ಪೊಲೀಸರು ಅಪರಾಧಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸದಿದ್ದರೆ, ಪೊಲೀಸರು ಅವರಿಗೆ ಸಹಾಯ ಮಾಡುತ್ತಿದ್ದಾರೆ ಎಂದರ್ಥ. ಅವನು (ಆರೋಪಿ) ಎಐಎಂಐಎಂ ವ್ಯಕ್ತಿ. ರೇವಂತ್ ರೆಡ್ಡಿಗೆ ಧೈರ್ಯವಿದ್ದರೆ ಪ್ರಶಾಂತ್‌ಗೆ ನ್ಯಾಯ ಒದಗಿಸಿ ಎಂದು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು. ಪ್ರಶಾಂತ್ ತನ್ನ ಜೀವಕ್ಕಾಗಿ ಹೋರಾಡುತ್ತಿದ್ದಾನೆ; ಅವನು ಧೈರ್ಯಶಾಲಿ ವ್ಯಕ್ತಿ. ಇದು ಕೊಲೆಯತ್ನ' ಎಂದು ಆಕ್ರೋಶ ವ್ಯಕ್ತಪಡಿಸಿದರು.
