Hindu brother Yogesh sets himselfಮುಸ್ಲಿಂ ಯುವತಿ ಸಮಾ ಮತ್ತು ಹಿಂದೂ ಯುವಕ ಯೋಗೇಶ್ ನಡುವಿನ ಅಣ್ಣ-ತಂಗಿಯ ಸಂಬಂಧ. ತಂಗಿಗೆ ಅನ್ಯಾಯವಾದಾಗ ಸಮಾಜವಾದಿ ಪಕ್ಷದ ಕಚೇರಿ ಮುಂದೆ ಯೋಗೇಶ್ ಆತ್ಮ*ಹತ್ಯೆಗೆ ಯತ್ನಿಸಿದ್ದಾರೆ.

ಲಕ್ನೋ: ಉತ್ತರ ಪ್ರದೇಶ ಅಲಿಗಢ (Uttar Pradesh Aligarh) ನಿವಾಸಿಯಾಗಿರುವ ಸಮಾ (ಮುಸ್ಲಿಂ ಯುವತಿ) ಮತ್ತು ಮುಗ್ಧ ಸೋದರ ಯೋಗೇಶ್ ಗೋಸ್ವಾಮಿ (ಹಿಂದು ಯುವಕ) ಕಥೆ ಮಾನವೀಯತೆ ಮತ್ತು ಸಂಬಂಧ ಮೌಲ್ಯಕ್ಕೆ ಉದಾಹರಣೆಯಾಗಿದೆ. ಈ ಪ್ರಕರಣ ಸಮಾಜಕ್ಕೆ ಕನ್ನಡಿಯಾಗಿದೆ. ಸಮಾ ಮತ್ತು ಯೋಗೇಶ್ ನಡುವಿನದ್ದು ರಕ್ತ ಸಂಬಂಧವಲ್ಲ. ಇದು ಅದಕ್ಕಿಂತ ಆಳವಾದ ಸಂಬಂಧವಾಗಿದೆ. ಸಮಾ ತಾಯಿ ಯೋಗೇಶ್‌ನನ್ನು ಮಗನಂತೆ ಬೆಳೆಸಿದ್ದರು. ಈ ಕಾರಣದಿಂದಾಗಿ ಸಮಾ-ಯೋಗೇಶ್ ನಡುವೆ ಅಣ್ಣ-ತಂಗಿಯಂತೆ (Brother Sister Relationship) ಬದುಕುತ್ತಿದ್ರು. ತಂಗಿ ಸಮಾ ಗೌರವದ ಬಗ್ಗೆ ಪ್ರಶ್ನೆ ಬಂದಾಗ ಯೋಗೇಶ್ ಆಕ್ರೋಶಗೊಂಡಿದ್ದನು. ತಂಗಿ ಗೌರವಕ್ಕೆ ಧಕ್ಕೆ ಬಂದಿದ್ದಕ್ಕೆ ಕೋಪಗೊಂಡ ಯೋಗೇಶ್, ಬುಧವಾರ ಲಕ್ನೋ ನಗರದ ಸಮಾಜವಾದಿ ಪಕ್ಷದ ಕಚೇರಿ ಮುಂಭಾಗ ಬೆಂಕಿ ಹಂಚಿಕೊಂಡಿದ್ದಾರೆ. ಈ ಘಟನೆ ವೇಳೆ ಮಾಜಿ ಸಿಎಂ, ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕಚೇರಿಯಲ್ಲಿದ್ದರು.

ಏನಿದು ಘಟನೆ? ಸಮಾಜವಾದಿ ಕಚೇರಿಗೆ ಬಂದಿದ್ಯಾಕೆ?

ಸೋದರಿ ಸಮಾಗೆ ನ್ಯಾಯ ಕೊಡಿಸಲು ಯೋಗೇಶ್ ಲಕ್ನೋಗೆ ಬಂದಿದ್ದರು. ತಂಗಿಗೆ ನ್ಯಾಯ ಕೊಡಿಸಲು ವಿಫಲವಾದಾಗ ಪ್ರಾಣ ಕಳೆದುಕೊಳ್ಳಲು ಮುಂದಾಗಿದ್ದರು. ಅಲಿಗಢ್‌ನ ಸಮೀಮ್, ಫಹೀಮ್ ಮತ್ತು ಮತ್ತೋರ್ವ ಸೇರಿದಂತೆ ಮೂವರು ತಮಗೆ ಸಮಾ 6 ಲಕ್ಷ ರೂಪಾಯಿ ಮೋಸ ಮಾಡಿದ್ದಾಳೆ ಎಂದು ಆರೋಪಿಸಿ ಕಿರುಕುಳ ನೀಡಿದ್ದಾರೆ ಎಂದು ಯೋಗೇಶ್ ಆರೋಪ ಮಾಡಿದ್ದಾರೆ. ಈ ಸಂಬಂದ ಸ್ಥಳೀಯ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಿಸಿದ್ದರು. ಸಿಎಂ ಸೇರಿದಂತೆ ಪ್ರಮುಖ ಅಧಿಕಾರಿಗಳ ಗಮನಕಕ್ಕೂ ಈ ವಿಷಯವನ್ನು ತಂದಿದ್ದರು. ಆದ್ರೆ ಎಲ್ಲಿಯೂ ನ್ಯಾಯ ಸಿಗದಿದ್ದಾಗ ಸಮಾಜವಾದಿ ಕಚೇರಿಗೆ ಬಂದಿದ್ದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಯೋಗೇಶ್

ಸದ್ಯ ಯೋಗೇಶ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಯೋಗೇಶ್ ಮೊದಲು ವಿಷ ಸೇವಿಸಿ ನಂತರ ಬೆಂಕಿ ಹಚ್ಚಿಕೊಂಡರು. ಕೂಡಲೇ ಯೋಗೇಶ್ ಅವರನ್ನು ಬೆಂಕಿಯಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಯ್ತು ಎಂದು ಹೇಳಿದರು. ಚಿಕಿತ್ಸೆ ನೀಡುತ್ತಿರುವ ವೈದ್ಯರ ಪ್ರಕಾರ, ಯೋಗೇಶ್‌ ಪರಿಸ್ಥಿತಿ ಗಂಭೀರವಾಗಿದೆ. ಇದೊಂದು ಕೇವಲ ಆತ್ಮ*ಹತ್ಯೆ ಅಲ್ಲ. ನ್ಯಾಯಕ್ಕಾಗಿ ಅಲೆದಾಡಿ ಬೇಸತ್ತ ಯುವಕನ ಹೋರಾಟವಾಗಿದೆ. ತನ್ನನ್ನು ಬೆಳೆಸಿದ ಮುಸ್ಲಿಂ ಕುಟುಂಬಕ್ಕೆ ನ್ಯಾಯ ಕೊಡಿಸಲು ಆತ ಹೋರಾಡಿದ್ದಾನೆ ಎಂದು ಸಾರ್ವಜನಿಕರು ಹೇಳಿದ್ದಾರೆ.

ಇದನ್ನೂ ಓದಿ: ಜರ್ಮನಿ ಸ್ಪರ್ಮ್ ಬ್ಯಾಂಕ್‌ ಸಹಾಯದಿಂದ ಗಂಡು ಮಗುವಿನ ತಾಯಿಯಾದ ಖ್ಯಾತ ಗಾಯಕಿ

ಬಿಜೆಪಿ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ

ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಅಖಿಲೇಶ್ ಯಾದವ್, ರಾಜ್ಯ ಸರ್ಕಾರದಿಂದ ನ್ಯಾಯ ದೊರಕದ ಹಿನ್ನೆಲೆ ಯೋಗೇಶ್ ಇಂತಹ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. ಇದೊಂದು ದುಃಖಕರ ಘಟನೆಯಾಗಿದ್ದು, ಸರ್ಕಾರವೇ ಯೋಗೇಶ್‌ ಚಿಕಿತ್ಸಾವೆಚ್ಚವನ್ನ ಭರಿಸಬೇಕು ಎಂದು ಆಗ್ರಹಿಸಿದ್ದಾರೆ. ಅನ್ಯಾಯ, ಹತಾಷೆ, ನಿರಾಶೆ ಉತ್ತರ ಪ್ರದೇಶ ಬಿಜೆಪಿ ಸರ್ಕಾರದ ಗುರುತು ಆಗಿದೆ ಎಂದು ಅಖಿಲೇಶ್ ಯಾದವ್ ವಾಗ್ದಾಳಿ ನಡೆಸಿದ್ದಾರೆ.

ಪೊಲೀಸರು ಹೇಳಿದ್ದೇನು?

ಅಲಿಗಢ್ ಮೂಲದ ಯೋಗೇಶ್ ಎಂಬ ಯುವಕ ಸಮಾಜವಾದಿ ಕಚೇರಿ ಆವರಣದಲ್ಲಿ ಬೆಂಕಿ ಹಚ್ಚಿಕೊಂಡಿ ಆತ್ಮ*ಹತ್ಯೆಗೆ ಯತ್ನಿಸಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ, ಇದೊಂದು ಹಣಕಾಸಿನ ವಿಚಾರಕ್ಕೆ ಯೋಗೇಶ್ ಹೀಗೆ ಮಾಡಿಕೊಂಡಿದ್ದಾನೆ. ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಅಶೀಶ್ ಶ್ರೀವಾಸ್ತವ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಹೆಂಡತಿ ಜೊತೆ ಜಗಳ; ನೇಣಿಗೆ ಶರಣಾದ ಹೋಟೆಲ್ ಉದ್ಯಮಿ

Scroll to load tweet…