ಹೆದ್ದಾರಿಯಲ್ಲಿ ಪೊಲೀಸರ ತಪಾಸಣೆ ವೇಳೆ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಅಪ್ಪ-ಮಗ ಸಿಕ್ಕಿಬಿದ್ದಿದ್ದಾರೆ. ನೆನ್ಮಾರ ವಿತ್ತನಶೇರಿಯಲ್ಲಿ 10 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಹೆದ್ದಾರಿಯಲ್ಲಿ ಸುಮ್ಮನೆ ನಿಂತಿದ್ದ ಪೊಲೀಸರು, ಗೂಡ್ಸ್ ವಾಹನವೊಂದನ್ನು ನಿಲ್ಲಿಸಲು ಮುಂದಾಗಿದ್ದಾರೆ. ಆಗ ಕಾರಿನಲ್ಲಿ ಹೋಗುತ್ತಿದ್ದ ಅಪ್ಪ-ಮಗ ಇಬ್ಬರೂ ಕಾರಿನಲ್ಲಿ ಹೋಗುತ್ತಿರುವಾಗ ಪೊಲೀಸರನ್ನು ಕಂಡೊಡನೆ ಕಳ್ಳರಂತೆ ನಡೆದುಕೊಂಡಿದ್ದಾರೆ. ಹೀಗಾಗಿ, ಗೂಡ್ಸ್ ವಾಹನ ಬಿಟ್ಟು ಕಾರನ್ನು ಅಡ್ಡ ಹಾಕಿ ಒಮ್ಮೆ ಪರಿಶೀಲನೆ ನಡೆಸಿದ ಪೊಲೀಸರಿಗೆ ತಂದೆ-ಮಗನ ಕಳ್ಳಾಟ ಬಯಲಾಗಿದೆ. ಅವರ ಕಾರಿನಲ್ಲಿ ಬರೋಬ್ಬರಿ 10 ಕೆ.ಜಿ. ಗಾಂಜಾ ಸಾಗಾಟ ಮಾಡುತ್ತಿದ್ದು, ಗಾಂಜಾ ಮಾಲಿನ ಸಮೇತವಾಗಿ ಸಿಕ್ಕಿಬಿದ್ದಿದ್ದಾರೆ.

ಈ ಘಟನೆ ನೆನ್ಮಾರ ವಿತ್ತನಶೇರಿಯಲ್ಲಿ ನಡೆದಿದೆ. ಒಟ್ಟು 10 ಕೆಜಿ ಗಾಂಜಾ ಜೊತೆ ಅಪ್ಪ-ಮಗ ಸಿಕ್ಕಿಬಿದ್ದಿದ್ದಾರೆ. ನೆನ್ಮಾರ ಚಾತಮಂಗಲ ನಿವಾಸಿಗಳಾದ ಕಾರ್ತಿಕ್ (23) ಮತ್ತು ಅವರ ತಂದೆ ಸೆಂಥಿಲ್ ಕುಮಾರ್ (53) ಅವರನ್ನು ಬಂಧಿಸಲಾಗಿದೆ. ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕೊಲ್ಲಂಕೋಡ್-ವಡಕ್ಕಂಚೇರಿ ರಾಜ್ಯ ಹೆದ್ದಾರಿಯಲ್ಲಿ ವಿತ್ತನಶೇರಿ ಬಳಿ ಇವರನ್ನು ಗಾಂಜಾ ಸಮೇತ ಬಂಧಿಸಲಾಗಿದೆ.

ಈ ಸಂದರ್ಭದಲ್ಲಿ ಅವರು ಬಳಸುತ್ತಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ನೆನ್ಮಾರ ಎಕ್ಸೈಸ್ ಇನ್ಸ್ಪೆಕ್ಟರ್ ಪಿ. ಸುರೇಶ್ ನೇತೃತ್ವದಲ್ಲಿ ಪ್ರಿವೆಂಟಿವ್ ಅಧಿಕಾರಿಗಳಾದ ಪ್ರವೀಣ್ ಕೆ, ವೇಣುಗೋಪಾಲ್, ಕೆ. ಸಾಬು, ಕೆ. ಆನಂದ್, ಸಿ. ಸನೋಜ್, ಜೆ. ಅಜೀಶ್, ಆರ್. ರಾಜೇಶ್, ವಿ. ಷೀಜ ಅವರ ತಂಡ ಕಾರ್ಯಾಚರಣೆ ನಡೆಸಿತು. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಇತ್ತೀಚೆಗೆ ಗಾಂಜಾ ಸಾಗಣೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅಂತರರಾಜ್ಯ ಗಡಿ ಪ್ರದೇಶಗಳಲ್ಲಿ ವಾಹನಗಳ ತಪಾಸಣೆಯನ್ನು ಹೆಚ್ಚು ಮಾಡಲಾಗುತ್ತಿದೆ. ಕರ್ನಾಟಕ ಸೇರಿದಂತೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಹೆಚ್ಚು ನಿಗಾವಹಿಸಲಾಗುತ್ತಿದೆ. ಇಲ್ಲಿ ತಿಳಿಸಲಾದ ರಾಜ್ಯಗಳಲ್ಲಿ ಅಂತರರಾಜ್ಯ ಗಡಿ ಪ್ರದೇಶಗಳಲ್ಲಿ ಕಠಿಣ ತಪಾಸಣೆ ಮಾಡಲಾಗುತ್ತದೆ. ಇನ್ನು ರಾಜ್ಯದ ಒಳಭಾಗದಲ್ಲಿಯೂ ಎಲ್ಲ ಚೆಕ್‌ಪೋಸ್ಟ್‌ಗಳು ಹಾಗೂ ಹೆದ್ದಾರಿಗಳಲ್ಲಿ ಪೊಲೀಸರು ಈ ಬಗ್ಗೆ ಹೈ ಅಲರ್ಟ್ ಆಗಿದ್ದಾರೆ.