ಅಸ್ಸಾಂನಲ್ಲಿ ಭೂಕಂಪ: ರಿಕ್ಟರ್ ಮಾಪಕದಲ್ಲಿ 5.9 ತೀವ್ರತೆ ದಾಖಲಾದ ಭೂಕಂಪ ಸಂಭವಿಸಿದೆ. ಗುವಾಹಟಿಯ ಧೇಕಿಯಾಜುಲಿ ಬಳಿ ಕೇಂದ್ರಬಿಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಮಧ್ಯಾಹ್ನ ಈ ಘಟನೆ ನಡೆದಿದೆ.
ದಿಸ್ಪುರ: ಅಸ್ಸಾಂನಲ್ಲಿ ಭೂಕಂಪ ಸಂಭವಿಸಿದ್ದು. ರಿಕ್ಟರ್ ಮಾಪಕದಲ್ಲಿ 5.9 ತೀವ್ರತೆ ದಾಖಲಾಗಿದೆ. ಗುವಾಹಟಿಯ ಧೇಕಿಯಾಜುಲಿ ಬಳಿ ಕೇಂದ್ರಬಿಂದು ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಂದು ಮಧ್ಯಾಹ್ನ ಭೂಮಿ ಕಂಪಿಸಿದ ಅನುಭವ ಜನರಿಗಾಗಿದೆ. ಅಸ್ಸಾಂನಲ್ಲಿನ ಭೂಕಂಪದ ಹಿನ್ನೆಲೆಯಲ್ಲಿ ಭೂತಾನ್ ಮತ್ತು ಉತ್ತರ ಬಂಗಾಳದಲ್ಲೂ ಕಂಪನದ ಅನುಭವವಾಗಿದೆ ಎಂದು ತಿಳಿದು ಬಂದಿದೆ.
ಯಾವುದೇ ಪ್ರಾಣ ಹಾನಿಯ ವರದಿ ಇಲ್ಲ
ಈವರೆಗೆ ಯಾವುದೇ ಹಾನಿಯ ವರದಿಗಳು ಬಂದಿಲ್ಲ. ಭೂಮಿ ಕಂಪನದ ಅನುಭವವಾಗುತ್ತಿದ್ದಂತೆ ಭಯಗೊಂಡ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
Scroll to load tweet…
Scroll to load tweet…
