ಶನಿವಾರ ಯುರೋಪಿಯನ್ ವಿಮಾನ ನಿಲ್ದಾಣಗಳ ಮೇಲೆ ನಡೆದ ಪ್ರಮುಖ ಸೈಬರ್ ದಾಳಿಯಿಂದಾಗಿ ಚೆಕ್-ಇನ್ ಮತ್ತು ಬೋರ್ಡಿಂಗ್ ವ್ಯವಸ್ಥೆಗಳಲ್ಲಿ ಅಡಚಣೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ, ಏರ್ ಇಂಡಿಯಾ ಲಂಡನ್‌ನಿಂದ ಪ್ರಯಾಣಿಸುವ ತನ್ನ ಪ್ರಯಾಣಿಕರಿಗೆ ಸಲಹೆ ನೀಡಿದೆ.

ಶನಿವಾರ (ಸೆಪ್ಟೆಂಬರ್ 20, 2025) ಯುರೋಪಿಯನ್ ವಿಮಾನ ನಿಲ್ದಾಣಗಳು ಪ್ರಮುಖ ಸೈಬರ್ ದಾಳಿಗೆ ಒಳಗಾದವು. ಈ ದಾಳಿಯ ಕುರಿತು ಏರ್ ಇಂಡಿಯಾ ಪ್ರಯಾಣ ಸಲಹೆಯನ್ನು ನೀಡಿದೆ. ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣ ಸೇರಿದಂತೆ ಹಲವಾರು ಪ್ರಮುಖ ಯುರೋಪಿಯನ್ ವಿಮಾನ ನಿಲ್ದಾಣಗಳಲ್ಲಿ ಈ ಸೈಬರ್ ದಾಳಿ ಸಂಭವಿಸಿದೆ. ಈ ಸೈಬರ್ ದಾಳಿಯು ವಿಮಾನ ನಿಲ್ದಾಣದ ಚೆಕ್-ಇನ್ ಮತ್ತು ಬೋರ್ಡಿಂಗ್ ವ್ಯವಸ್ಥೆಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಿದೆ.

ಏರ್ ಇಂಡಿಯಾದಿಂದ ಸಲಹೆ:

ಏರ್ ಇಂಡಿಯಾ ತನ್ನ ಪ್ರಯಾಣಿಕರಿಗೆ ಸಲಹೆಯನ್ನು ನೀಡಿದ್ದು, ಈ ದಾಳಿಯಿಂದಾಗಿ ಚೆಕ್-ಇನ್ ಪ್ರಕ್ರಿಯೆಯಲ್ಲಿ ವಿಳಂಬವಾಗಬಹುದು ಎಂದು ತಿಳಿಸಿದೆ. ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಕಾಲಿನ್ಸ್ ಏರೋಸ್ಪೇಸ್‌ನ ತಾಂತ್ರಿಕ ಸಮಸ್ಯೆಯಿಂದ ಉಂಟಾದ ಅಡಚಣೆಯನ್ನು ಗಮನದಲ್ಲಿಟ್ಟುಕೊಂಡು, ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ತೆರಳುವ ಮೊದಲು ವೆಬ್ ಚೆಕ್-ಇನ್ ಪೂರ್ಣಗೊಳಿಸುವಂತೆ ಕಂಪನಿಯು ಸೂಚಿಸಿದೆ.

Scroll to load tweet…

ಏರ್ ಇಂಡಿಯಾ ತನ್ನ X ಪ್ಲಾಟ್‌ಫಾರ್ಮ್‌ನಲ್ಲಿ ಅಪ್ಡೇಟ್ಸ್:

ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ Third party passenger arrangement ಸಮಸ್ಯೆಯಿಂದ ಚೆಕ್-ಇನ್ ಪ್ರಕ್ರಿಯೆಯಲ್ಲಿ ವಿಳಂಬವಾಗಬಹುದು. ಪ್ರಯಾಣಿಕರಿಗೆ ಕನಿಷ್ಠ ಅನಾನುಕೂಲತೆಯಾಗಲು ನಮ್ಮ ನೆಲದ ತಂಡವು ಶ್ರಮಿಸುತ್ತಿದೆ. ಇಂದು ಲಂಡನ್‌ನಿಂದ ಪ್ರಯಾಣಿಸುವವರು ವೆಬ್ ಚೆಕ್-ಇನ್ ಮಾಡಿಕೊಂಡು ಸುಗಮ ಅನುಭವವನ್ನು ಖಚಿತಪಡಿಸಿಕೊಳ್ಳಿ ಎಂದು ತಿಳಿಸಿದೆ.

Scroll to load tweet…

ಸೈಬರ್ ದಾಳಿಯ ಪರಿಣಾಮಗಳೇನು?

ಈ ಸೈಬರ್ ದಾಳಿಯಿಂದಾಗಿ ಯುರೋಪಿನ ಹಲವು ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ರದ್ದತಿ ಮತ್ತು ವಿಳಂಬವಾಗಿದ್ದು, ಪ್ರಯಾಣಿಕರು ಗೊಂದಲ ಮತ್ತು ಅನಾನುಕೂಲತೆಯನ್ನು ಎದುರಿಸುತ್ತಿದ್ದಾರೆ. ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣವು ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಕಾಲಿನ್ಸ್ ಏರೋಸ್ಪೇಸ್ ಜೊತೆಗೆ ಕೆಲಸ ಮಾಡುತ್ತಿದ್ದು, ಶೀಘ್ರದಲ್ಲೇ ಸಾಮಾನ್ಯ ಸ್ಥಿತಿಗೆ ಮರಳುವ ಭರವಸೆಯನ್ನು ನೀಡಿದೆ. ಪ್ರಯಾಣಿಕರು ತಮ್ಮ ವಿಮಾನದ ಸ್ಥಿತಿಯ ಬಗ್ಗೆ ಇತ್ತೀಚಿನ ಮಾಹಿತಿಗಾಗಿ ಏರ್ ಇಂಡಿಯಾ ಅಥವಾ ಸಂಬಂಧಿತ ವಿಮಾನ ನಿಲ್ದಾಣದ ವೆಬ್‌ಸೈಟ್‌ಗಳನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ.