ಪ್ರಮಾಣ ವಚನ ಸ್ವೀಕರಿಸಿದ ಸಿಪಿ ರಾಧಾಕೃಷ್ಣನ್, ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಗೆಲುವು ದಾಖಲಿಸಿದ ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರತಿಜ್ಞಾವಿಧಿ ಬೋಧಿಸಿದ್ದಾರೆ.
ನವದೆಹಲಿ (ಸೆ.12) ನೂತನ ಉಪ ರಾಷ್ಟ್ರಪತಿಯಾಗಿ ಸಿಪಿ ರಾಧಾಕೃಷ್ಣನ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ಭವನದ ಗಣತಂತ್ರ ಮಂಟಪದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರತಿಜ್ಞಾವಿಧಿ ಬೋಧಿಸಿದ್ದಾರೆ. ಭಾರತದ 15ನೇ ಉಪ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 67 ವರ್ಷದ ಸಿಪಿ ರಾಧಾಕೃಷ್ಣನ್ ಇತ್ತೀಚೆಗೆ ನಡೆದ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ 452 ಮತಗಳಿಂದ ಭರ್ಜರಿ ಗೆಲುವು ಸಾಧಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸೇರಿದಂತೆ ಹಲವರು ಗಣ್ಯರು ಈ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಚುನಾವಣೆಯಲ್ಲಿ ಬಿ ಸುದರ್ಶನ್ ರೆಡ್ಡಿ ಸೋಲಿಸಿದ ರಾಧಾಕೃಷ್ಣನ್
ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಮಹಾರಾಷ್ಟ್ರ ರಾಜ್ಯಪಾಲಾರಾಗಿದ್ದ ಸಿಪಿ ರಾಧಾ ಕೃಷ್ಣನ್ ವಿರುದ್ಧ ಇಂಡಿಯಾ ಮೈತ್ರಿ ಒಕ್ಕೂಟದ ಅಭ್ಯರ್ಥಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ ಸುದರ್ಶನ ರೆಡ್ಡಿ ಸ್ಪರ್ಧಿಸಿದ್ದರು. ಎನ್‌ಡಿಎ ಮೈತ್ರಿ ಪಕ್ಷಗಳ ಸದಸ್ಯರು ರಾಧಾಕೃಷ್ಣನ್‌ಗೆ ಮತ ಹಾಕಿದ್ದರೆ, ಇಂಡಿಯಾ ಒಕ್ಕೂಟದ ಸದಸ್ಯರು ಅಡ್ಡ ಮತದಾನ ಮಾಡಿದ್ದರು. ಈ ಮೂಲಕ 752 ಒಟ್ಟು ಮತಗಳ ಪೈಕಿ 452 ಮತ ಪಡೆದು ಗೆಲುವು ಸಾಧಿಸಿದ್ದರು. 152 ಮತಗಳ ಅಂತರದಲ್ಲಿ ಸಿಪಿ ರಾಧಾಕೃಷ್ಣನ್ ಗೆಲುವು ಸಾಧಿಸಿದ್ದರು.
RSS ಕಟ್ಟಾಳು, ಬಿಜೆಪಿ ಕಟ್ಟಿಬೆಳೆಸಿದ ಸಿಪಿ ರಾಧಾಕೃಷ್ಣನ್ ಭಾರತದ 15ನೇ ಉಪ ರಾಷ್ಟ್ರಪತಿ
ಜಗದೀಪ್ ಧನ್ಕರ್ ದಿಢೀರ್ ಆರೋಗ್ಯದ ಕಾರಣ ನೀಡಿ ರಾಜೀನಾಮೆ ನೀಡಿದ್ದರು. ಇದು ಕೋಲಾಹಲ ಸೃಷ್ಟಿಸಿತ್ತು. ಬಿಜೆಪಿ ಒತ್ತಾಯಪೂರ್ವಕವಾಗಿ ಧನ್ಕರ್ ರಾಜೀನಾಮೆ ಕೊಡಿಸಿದ್ದಾರೆ ಅನ್ನೋ ಆರೋಪಗಳು ಕೇಳಿಬಂದಿತ್ತು. ಇತ್ತ ಎನ್‌ಡಿಎ ಒಕ್ಕೂಟ ಸಭೆ ಉಪ ರಾಷ್ಟ್ರಪತಿ ಅಭ್ಯರ್ಥಿಯಾಗಿ ಮಹಾರಾಷ್ಟ್ರ ರಾಜ್ಯಪಾಲರಾಗಿದ್ದ ಸಿಪಿ ರಾಧಾಕೃಷ್ಣನ್ ಆಯ್ಕೆ ಮಾಡಿತ್ತು. ಇತ್ತ ಇಂಡಿಯಾ ಒಕ್ಕೂಟ ಬಿ ಸುದರ್ಶನ ರೆಡ್ಡಿ ಆಯ್ಕೆ ಮಾಡಿತ್ತು.
ಆರ್‌ಎಸ್ಎಸ್ ಕಟ್ಟಾಳು ಸಿಪಿ ರಾಧಾಕೃಷ್ಣನ್
ಸಿಪಿ ರಾಧಾಕೃಷ್ಣನ್ ಆರ್‌ಎಸ್ಎಸ್ ಹಿರಿಯ ಸದಸ್ಯ ಮಾತ್ರವಲ್ಲ, ಸಕ್ರೀಯ ಸದಸ್ಯ. ಜನಸಂಘ ಬಳಿಕ ಭಾರತೀಯ ಜನತಾ ಪಾರ್ಟಿ ಮೂಲಕ ರಾಜಕೀಯದಲ್ಲಿ ಪಯಣ ಮುಂದುವರಿಸಿದ ಸಿಪಿ ರಾಧಾಕೃಷ್ಣನ್ ಅತ್ಯಂತ ಶಿಸ್ತಿನ ಶಿಪಾಯಿ ಎಂದೇ ಗುರುತಿಸಿಕೊಂಡಿದ್ದಾರೆ. ತಮಿಳುನಾಡಿನ ವಾಜಪೇಯಿ, ತಮಿಳುನಾಡಿನ ಮೋದಿ ಎಂದು ಗುರುತಿಸಿಕೊಂಡಿದ್ದಾರೆ. ತಮಿಳುನಾಡಿನಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಕೀರ್ತಿಯೂ ಸಿಪಿ ರಾಧಕೃಷ್ಣನ್‌ಗಿದೆ. ತಮಿಳುನಾಡು ಬಿಜೆಪಿ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದಾರೆ.
ದೆಹಲಿ ದೇವೇಗೌಡರ ನಿವಾಸದಲ್ಲಿ ರಾಧಾಕೃಷ್ಣನ್ ಭೇಟಿ, ಮೋದಿ ಆಯ್ಕೆ ಮೆಚ್ಚಿದ ಗೌಡರು
