ನ.23ಕ್ಕೆ ಚೀಫ್ ಜಸ್ಟಿಸ್ ಬಿಆರ್ ಗವಾಯಿ ನಿವೃತ್ತಿ, ಮುಂದಿನ ಸಿಜೆಐ ಹೆಸರು ಸೂಚಿಸಿದ ಮುಖ್ಯ ನ್ಯಾಯಮೂರ್ತಿ, ನವೆಂಬರ್ 24ರಂದು ಸುಪ್ರೀಂ ಕೋರ್ಟ್ ಸಿಜೆಐ ಆಗಿ ಮಹತ್ತರ ಜವಾಬ್ದಾರಿ ವಹಿಸಿಕೊಳ್ಳಲಿರುವ ಜಸ್ಟಿಸ್ ಯಾರು?

ನವದೆಹಲಿ (ಆ.27) ಸುಪ್ರೀಂ ಕೋರ್ಟ್ ಮುಖ್ಯ ನ್ಯಾಮೂರ್ತಿ ಬಿಆರ್ ಗವಾಯಿ ಅವಧಿ ನವೆಂಬರ್ 23ಕ್ಕೆ ಅಂತ್ಯಗೊಳ್ಳುತ್ತಿದೆ. ನವೆಂಬರ್ 23ರಂದು ಚೀಫ್ ಜಸ್ಟೀಸ್ ಆಫ್ ಇಂಡಿಯಾ ಬಿಆರ್ ಗವಾಯಿ ನಿವೃತ್ತಿಯಾಗುತ್ತಿದ್ದಾರೆ. ನವೆಂಬರ್ 24ರಂದು ಹೊಸ ಸಿಜೆಐ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ನಿವೃತ್ತಿಯಾಗುತ್ತಿರುವ ಬಿಆರ್ ಗವಾಯಿ ಇದೀಗ ಮುಂದಿನ ಸಿಜೆಐ ಯಾರು ಅನ್ನೋದು ಬಹಿರಂಗಪಡಿಸಿದ್ದಾರೆ. ಸುಪ್ರೀಂ ಕೋರ್ಟ್ ಮುಂದಿನ ಚೀಫ್ ಜಸ್ಟೀಸ್ ಸೂರ್ಯ ಕಾಂತ್ ಎಂದು ಹೆಸರು ಸೂಚಿಸಿದ್ದಾರೆ.

ನವೆಂಬರ್ 24ಕ್ಕೆ ಸೂರ್ಯ ಕಾಂತ್ ಪ್ರಮಾಣವಚನ ಸ್ವೀಕಾರ

ನವೆಂಬರ್ 24ರಂದು ಜಸ್ಟೀಸ್ ಸೂರ್ಯ ಕಾಂತ್ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಸಲಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲನಾಗಿರುವ ಸೂರ್ಯ ಕಾಂತ್ ಹೆಸರನ್ನು ಗವಾಯಿ ಸೂಚಿಸಿದ್ದಾರೆ. ಸಿಜೆಐ ಬಿಆರ್ ಗವಾಯಿ ಶಿಫಾರಸ್ಸಿನ ಮೇಲೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಧಿಕೃತವಾಗಿ ಪ್ರಕಟಣೆ ಹೊರಡಿಸಲಿದ್ದಾರೆ. ನವೆಂಬರ್ 24ರಂದು ಜಸ್ಟೀಸ್ ಸೂರ್ಯ ಕಾಂತ್ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಯಾರು ಈ ಜಸ್ಟೀಸ್ ಸೂರ್ಯ ಕಾಂತ್

1962ರಲ್ಲಿ ಜನಿಸಿದ ಸೂರ್ಯ ಕಾಂತ್ ಹರ್ಯಾಣ ಕೋರ್ಟ್‌ನಲ್ಲಿ ಹಿರಿಯ ವಕೀಸಲರಾಗಿ ಸೇವೆ ಸಲ್ಲಿಸಿದ್ದಾರೆ. ರಾಂಚಿಯ ನ್ಯಾಷನಲ್ ಯೂನಿವರ್ಸಿಟಿ ಆಫರ್ ಸ್ಟಡಿ ಆ್ಯಂಡ್ ರೀಸರ್ಚ್ ಇನ್ ಲಾ ಕಾಲೇಜಿನಲ್ಲಿ ಪ್ರಮುಖ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಹಿರಿತನದ ಆಧಾರದ ಮೇಲೆ ಸೂರ್ಯ ಕಾಂತ್ ಅವರು ಮುಂದಿನ ಮಖ್ಯ ನ್ಯಾಯಮೂರ್ತಿಯಾಗಿ ಶಿಫಾರಸ್ಸುಗೊಂಡಿದ್ದಾರೆ. ಹರ್ಯಾಣ ಮೂಲದ ಸೂರ್ಯ ಕಾಂತ್, ಹಿಸ್ಸಾರದ ಸರ್ಕಾರಿ ಕಾಲೇಜಿನಲ್ಲಿ ಪದವಿ, ರೊಹ್ಟಕ್‌ನ ಮಹರ್ಷಿ ದಯಾನಂದ್ ವಿಶ್ವವಿದ್ಯಾಲದಲ್ಲಿ ಬ್ಯಾಚುಲರ್ ಆಫ್ ಲಾ, ಕುರುಕ್ಷೇತ್ರ ವಿಶ್ವವಿದ್ಯಾಲದಯಲ್ಲಿ ಮಾಸ್ಟರ್ ಆಫ್ ಲಾ ಪದವಿ ಪಡೆದಿದ್ದಾರೆ.

ಸೂರ್ಯ ಕಾಂತ್ ತೀರ್ಪು

ಸೂರ್ಯ ಕಾಂತ್ ಹಲವು ಐತಿಹಾಸಿಕ ತೀರ್ಪು ನೀಡಿದ್ದಾರೆ. ಮಾನವ ಹಕ್ಕುಗಳು, ಲಿಂಗ ಸಮಾನತೆ, ಶಿಕ್ಷಣ, ಜೈಲು ಖೈದಿಗಳ ನೀತಿಗಳಲ್ಲಿ ಸುಧಾರಣೆ ಸೇರಿದಂತೆ ಹಲವು ಐತಿಹಾಸಿಕ ತೀರ್ಪು ನೀಡಿ ಗಮನಸೆಳೆದಿದ್ದಾರೆ. ಇತ್ತೀಚೆಗ ಭಾರಿ ವಿವಾದಕ್ಕೆ ಕಾರಣವಾಗಿದ್ದ ಇಂಡಿಯಾಸ್ ಗಾಟ್ ಲ್ಯಾಟೆಂಟ್ ಪ್ರಕರಣದಲ್ಲಿ ಸೂರ್ಯ ಕಾಂತ್ ವಿಚಾರಣೆ ನೆಡೆಸಿದ್ದಾರೆ. ಇದೇ ಪ್ರಕರಣದಲ್ಲಿ ಯೂಟ್ಯೂಹರ್ ರಣವೀರ್ ಅಲಹಾಬಾದಿಯಾ ಬಂಧನ ಕೋಲಾಹಲ ಸೃಷ್ಟಿಸಿತ್ತು.